ಕಾಂತಾಮಣಿಯ ಕನಸುಗಳು" ಕಥಾ ಸಂಕಲನದ ಪರಿಚಯ

"ಕಾಂತಾಮಣಿಯ ಕನಸುಗಳು" ಕಥಾ ಸಂಕಲನದ ಪರಿಚಯ
ಕಲಬುರ್ಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ 27.09.2025ರಂದು ಸಂಘದ ಕಾರ್ಯಾಲಯದಲ್ಲಿ ಪ್ರೋ. ಕೃಷ್ಣ ನಾಯಕ ರಚಿಸಿದ *"ಕಾಂತಾಮಣಿಯ ಕನಸುಗಳು"* ಕಥಾ ಸಂಕಲನದ ಕುರಿತು ಪರಿಚಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರೇವಣಸಿದ್ಧಪ್ಪ ದುಕಾನ ಅವರು ಸಂಕಲನದ ಎರಡು ಕಥೆಗಳ ಕುರಿತು ಮಾತನಾಡಿ, ಗ್ರಾಮೀಣ ಬದುಕಿನ ಸೊಗಡು, ಸಾಂಪ್ರದಾಯಿಕ ಚಟುವಟಿಕೆಗಳು ಹಾಗೂ ಕೌಟುಂಬಿಕ ಸಂಬಂಧಗಳ ಸೂಕ್ಷ್ಮ ಭಾವನೆಗಳನ್ನು ಕಥೆಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿರುವುದನ್ನು ಪ್ರಶಂಸಿಸಿದರು. ವಿಶೇಷವಾಗಿ "ಕಾಂತಾಮಣಿಯ ಕನಸುಗಳು"ಕಥೆಯು ಗ್ರಾಮೀಣ ಪರಿಸರದ ನೈಸರ್ಗಿಕತೆ ಮತ್ತು ಮಾನವೀಯ ಸಂಬಂಧಗಳ ಆಳವನ್ನು ಚೆನ್ನಾಗಿ ಪ್ರತಿಬಿಂಬಿಸಿದೆ ಎಂದು ಹೇಳಿದರು.
ಕಥೆಗಳಲ್ಲಿನ ಪಾತ್ರ ನಿರ್ವಹಣೆ, ಕಥಾವಸ್ತು, ಭಾಷಾ ವೈಶಿಷ್ಟ್ಯ ಹಾಗೂ ಶೈಲಿಯ ಕುರಿತಂತೆ ಅವರು ಮಾರ್ಮಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಡಾ. ಸ್ವಾಮಿರಾವ ಕುಲಕರ್ಣಿ ಸೇರಿದಂತೆ ಹಿರಿಯ ಸಾಹಿತ್ಯವಿದ್ವಾಂಸರಾದ ಶ್ರೀ ಸುಬ್ಭರಾವ ಕುಲಕರ್ಣಿ, ಪ್ರೋ. ಕೃಷ್ಣ ನಾಯಕ, ಡಾ. ಸಿದ್ಧರಾಮಯ್ಯ ಮಠ, ಡಾ. ಶಿವಶರಣಪ್ಪ ದಾಬಾ, ಎಚ್. ವಿ. ಹತ್ತಿ, ಸಾಹಿತಿ ವಿಶ್ವನಾಥ ಭಕರೆ, ಸಿದ್ಧರಾಮ ರಾಜಮಾನೆ, ಶ್ರೀಶರಣಗೌಡ ಪಾಟೀಲ್ ಪಾಳಾ ಮುಂತಾದವರು ಉಪಸ್ಥಿತರಿದ್ದರು.
ಡಾ. ವಿಜಯಕುಮಾರ ಪರುತೆ ಅವರು ಕಾರ್ಯಕ್ರಮ ನಿರೂಪಿಸಿದರು