ವಿಜ್ಞಾನದಿಂದ ದೇಶ ಅಭಿವೃದ್ಧಿ - ನಿಂಗಣ್ಣ ಮುದ್ದಾ

ವಿಜ್ಞಾನದಿಂದ ದೇಶ ಅಭಿವೃದ್ಧಿ - ನಿಂಗಣ್ಣ ಮುದ್ದಾ

ವಿಜ್ಞಾನದಿಂದ ದೇಶ ಅಭಿವೃದ್ಧಿ - ನಿಂಗಣ್ಣ ಮುದ್ದಾ

ಶಹಪುರ : ಇಂದಿನ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಮಹತ್ವ ತಿಳಿಪಡಿಸಿ ಅದರ ಅರಿವು ಮೂಡಿಸಬೇಕಾಗಿದೆ,ಯಾಕೆಂದರೆ ವಿಜ್ಞಾನದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ಇಂಜಿನಿಯರಾದ ನಿಂಗಣ್ಣ ಮುದ್ದಾ ಹೇಳಿದರು.

ಶಹಪುರ ತಾಲೂಕಿನ ಸಗರ ಗ್ರಾಮದ ಕಾವೇರಿ ವಿದ್ಯಾ ಮಂದಿರದಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ವಿಜ್ಞಾನಿಗಳಾದ ಸಿ.ವಿ. ರಾಮನ್ ಅವರ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳು ಹಾಗೂ ಪ್ರಗತಿಪರ ಚಿಂತಕರಾದ ರಾಮರಾವ್ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನವನ್ನು ಪ್ರೋತ್ಸಾಹಿಸಿ ಉತ್ತೇಜಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವ, ಕುತೂಹಲ ಮತ್ತು ನಾವಿನ್ಯತೆಯನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ನುಡಿದರು.

ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ದೇವೇಂದ್ರಪ್ಪ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ವೃತ್ತ ಶಿಕ್ಷಕರದ ಬೂದೆಪ್ಪ ಉಳ್ಳಿ, ಶರಬಣ್ಣ ಅಂಗಡಿ ಅಮರಣ್ಣ ಹೆರುಂಡಿ,ಗಿರೆಪ್ಪಗೌಡ ಕಟ್ಟಿಮನಿ, ವಾಸುದೇವ್ ವಠಾರ,ಮುಖ್ಯ ಗುರುಗಳಾದ ಜಯಶ್ರೀ ಹಡಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಶಿಕ್ಷಕಿ ಶಿಲ್ಪಾ ನಿರೂಪಿಸಿದರು,ಶ್ರದ್ಧಾ ಹಾಗೂ ಮಮತಾ ಸ್ವಾಗತಿಸಿದರು, ಬಸವರಾಜೇಶ್ವರಿ ವಂದಿಸಿದರು.