ಮಕ್ಕಳಿಗೆ ಉತ್ತಮ ಸಂಸ್ಕಾರದ ಪಾಠ ಸಿಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ : ಡಾ. ಬಸವಲಿಂಗ ಅವಧೂತರು
ಮಕ್ಕಳಿಗೆ ಉತ್ತಮ ಸಂಸ್ಕಾರದ ಪಾಠ ಸಿಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ : ಡಾ. ಬಸವಲಿಂಗ ಅವಧೂತರು
ಚಿಂಚೋಳಿ : ಮಕ್ಕಳಿಗೆ ಉತ್ತಮ ಸಂಸ್ಕಾರದ ಪಾಠ ಸಿಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಉತ್ತಮ ಸಂಸ್ಕಾರದ ನಡತೆಯ ಗುಣಗಳು ಮಕ್ಕಳಿಗೆ ಪಾಲಕರು ಕಲಿಸಬೇಕು ಎಂದು ಸಂಗಾರೆಡ್ಡಿ ಜಿಲ್ಲೆಯ ಮಲ್ಲಯ್ಯಗಿರಿ, ದೇಗಲ್ಮಡಿ ಆಶ್ರಮದ ಡಾ. ಬಸವಲಿಂಗ ಅವಧೂತರು ಹೇಳಿದರು.
ಗಾರಂಪಳ್ಳಿ ಗ್ರಾಮದ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ 15ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಚಿಂಚೋಳಿ ಅತಿ ಹಿಂದೆ ಉಳಿದಿದೆ. ಶಿಕ್ಷಣ ವ್ಯಾಪಾರ ಆಗಬಾರದು. ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಕೌಶಲ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಶಿಕ್ಷಕರು ಜಾತಿಬೇಧ ಮರೆತು ಮಕ್ಕಳಿಗೆ ಶಿಕ್ಷಣ ಬೋಧಿಸುವ ಕೆಲಸ ಆಗಬೇಕು ಎಂದರು.
ಕಲಬುರಗಿ ಮನಣೂರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ಫಾರೂಕ್ ಅಹ್ಮದ್ ಮಾತನಾಡಿ,
ಪಾಲಕ ಪೋಷಕರು ಹೆಣ್ಣು ಗಂಡು ಎಂಬ ಭೇದ ತೋರದೆ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುವುದಕ್ಕೆ ಒತ್ತು ಕೊಡಬೇಕು. ಉತ್ತಮ ಮೌಲ್ಯಯುತ ಶಿಕ್ಷಣದಿಂದ ಉನ್ನತ ಹುದ್ದೆಗೇರಲು ಸಾಧ್ಯವಾಗಲಿದೆ ಎಂದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮಾತನಾಡಿ,
ಉತ್ತಮ ನಾಗರಿಕನಾಗಲು ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಣದಿಂದಲೇ ಎಲ್ಲಾ ಹಂತಗಳಲ್ಲಿ ಪ್ರಗತಿ ಪಡೆಯಲು ಸಾಧ್ಯ. ಶಿಕ್ಷಕರು ಬುದ್ಧ, ಅಂಬೇಡ್ಕರ್, ಬಸವಣ್ಣ, ಮಹಾತ್ಮಾ ಗಾಧೀಜಿ ಅವರಂತಃ ಮಹಾನಾಯಕರ ವೈಚಾರಿಕತೆ ಮೌಲ್ಯಗಳು ಮಕ್ಕಳಿಗೆ ಪಠ್ಯದ ಜೊತೆಗೆ ಬೋಧೀಸಬೇಕು ಎಂದರು.
ಸಾಧಕರಿಗೆ ಸನ್ಮಾನ:
ಸಂಗೀತ, ಸಮಾಜ , ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಉತ್ತಮ ಸೇವ ಸಲ್ಲಿಸಿರುವ ಸಾಧಕರಿಗೆ ಗುರುತಿಸಿ ಸಂಸ್ಥೆಯ ಆಡಳಿತ ವಿಶೇಷ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀವಿ ಬಾಬುರಾವ ಬುಳ್ಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಶ್ವ ವಿದ್ಯಾಲಯ ಚಾನ್ಸಲರ್ ವಿ. ಟಿ ಕಾಂಬಳೆ, ಕೆ. ಎಂ. ಬಾರಿ, ಆನಂದ ಟೈಗರ್, ಅಶೋಕ ಪಾಟೀಲ್, ರೇವಣಸಿದ್ಧ ಹಿರೇಮಠ್, ಶಾಮರಾವ ಕೊರವಿ, ಅಕ್ರಮ ಪಾಶಾ ಮೊಮೀನ್, ಅರುಣಕುಮಾರ ಪೋಚಾಲಿ, ನವೀನ ರೆಡ್ಡಿ, ತ್ರೀರತ್ನ, ಪಂಚಾಶೀಲ ಬಾಬುರಾವ ಬುಳ್ಳಾ, ಉಡುಪಿ ಮಲ್ಲಿಕಾರ್ಜುನ, ಹಣಮಂತ ಭೋವಿ ಅವರು ಉಪಸ್ಥಿತರಿದ್ದರು.
