ನಡೆ-ನುಡಿ ಒಂದಾಗಿರುವುದೇ ಬಸವಪಥ

ನಡೆ-ನುಡಿ ಒಂದಾಗಿರುವುದೇ ಬಸವಪಥ
ಕಲಬುರಗಿ 5,ಜೂ-ಕಲಬುರಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 14ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಅಧ್ಯಾತ್ಮ ಎಂದರೆ ಕೇವಲ ದೇವರನ್ನು ಭಜಿಸುವುದಲ್ಲ. ಕೇವಲ ಧಾರ್ಮಿಕ ಲಾಂಛನಗಳನ್ನು ಧರಿಸುವುದಷ್ಟೇ ಅಲ್ಲ ವಿಭೂತ, ರುದ್ರಾಕ್ಷಿ, ಲಿಂಗಗಳು ಭಕ್ತನಿಗೆ ಬೇಕು ಆದರೆ ಇದೇ ಪರಿಪೂರ್ಣ ಅಧ್ಯಾತ್ಮವಲ್ಲ. ಬಸವಮಾರ್ಗ ನಡೆ ನುಡಿ ಒಂದಾಗಿರುವುದರಿಂದಲೇ ಉಳಿದೆಲ್ಲ ಧರ್ಮಗಳಿಗಿಂತಲೂ ಲಿಂಗವಂತ ಧರ್ಮ ಶ್ರೇಷ್ಠವಾಗಿದೆ .ನುಡಿದಂತೆ ನಡೆ ನಡೆದಂತೆ ನುಡಿ ಇದೇ ಜನ್ಮ ಕಡೆ ಎಂದು ಶರಣರು ಹೇಳುತ್ತಾರೆ .ದೇಹ ಗುಣಗಳಾದ ಹಸಿವು ತೃಷೆ ಕಾಮ ಪ್ರೇಮ ಇವುಗಳನ್ನು ಗೆದ್ದಾಗ ಮಾತ್ರ ಅಧ್ಯಾತ್ಮದೆಡೆಗೆ ಸಾಗಲು ಸಾಧ್ಯ .
ಇಷ್ಟ ಲಿಂಗದಲ್ಲಿ ದೃಷ್ಟಿ ಯೋಗ ಮಾಡುವುದರಿಂದ ಜೀವಿ ದೇವನಾಗುತ್ತಾನೆ. ಇದು ಶರಣರು ಕೊಟ್ಟಿರುವ ವಿಶಿಷ್ಟ ಸಿದ್ಧಾಂತವಾಗಿದೆ. ಶರಣ ಸಿದ್ದಾಂತ ಹೇಳುವುದರಿಂದ ಕೇಳುವುದರಿಂದ ಭಕ್ತ ಪರಿಪೂರ್ಣತೆ ಹೊಂದುವುದಿಲ್ಲ. ಇಷ್ಟ ಲಿಂಗ ಪೂಜೆಯಿಂದ ಇಷ್ಟಲಿಂಗ ಯೋಗದಿಂದ ಮಾತ್ರ ದೇಹದ ಮನಸ್ಸಿನ ಅವಗುಣಗಳು ಕಳೆದು ಪರಿಪೂರ್ಣನಾಗಿ ದೇವಮಾನವನಾಗುತ್ತಾನೆ. ಬಸವ ಸಿದ್ದಾಂತ ಒಳ್ಳೆಯವರಿಗೆ ಮಾತ್ರ ಭರ್ಥವಾಗುತ್ತದೆ .ಲಿಂಗವಂತ ಧರ್ಮಕ್ಕೆ ಒಂದೇ ಜಾತಿ ಒಂದೇ ಧರ್ಮದಿಂದ ಜನರು ಬಂದವರಿಲ್ಲ . ಎಲ್ಲಾ ಧರ್ಮ ಎಲ್ಲಾ ಜಾತಿಗಳು ಕೂಡಿ ಲಿಂಗವಂತ ಧರ್ಮವಾಗಿದೆ. ಶರಣ ಧರ್ಮವೆಂದರೆ ಅದು ಆಯಸ್ಕಾಂತವಿದ್ದಂತೆ .ಬಸವ ಸಿದ್ದಾಂತ ಒಪ್ಪಿದ ಎಲ್ಲಾ ಜಾತಿ ಧರ್ಮದ ಒಳ್ಳೆಯವರನ್ನು ತನ್ನೆಡೆಗೆ ಸೆಳೆಯುತ್ತದೆ .
ಒಳ್ಳೆಯವನು ಕಳ್ಳನೊಂದಿಗೆ ಸಂಪರ್ಕದಲ್ಲಿದ್ದರೆ ಕಳ್ಳನಾಗುತ್ತಾನೆ, ಕಳ್ಳನೊಬ್ಬ ಒಳ್ಳೆಯವನು ಜೊತೆಗೂಡಿ ಒಳ್ಳೆಯವನಾಗುತ್ತಾನೆ.
ಮಾನವನ ದೈಹಿಕ ಸುಖ ಉಪಭೋಗಗಳು ಹೆಚ್ಚಾಗಿ ಮನುಷ್ಯರಲ್ಲಿ ಆತ್ಮೀಯತೆ ಸಹ ಬಾಳ್ವೆ ಸದ್ಗುಣಗಳು ಕಡಿಮೆಯಾಗುತ್ತಿವೆ ಕಾಲಕೆಟ್ಟಿದೆ ಎಂದು ಭಕ್ತ ಜಿಗುಪ್ಸೆಗೊಳ್ಳುವುದಕ್ಕಿಂತ ಲೋಕದ ಕೆಟ್ಟತನಕ್ಕೆ ಕಿವುಡನಾಗಿ ಕುರುಡನಾಗಿ ಮೂಕನಾಗಿ ಬದುಕಬೇಕು. ಅಧ್ಯಾತ್ಮ ಹೇಳುವವರು ಉಪಜೀವನಕ್ಕಾಗಿ ಶರಣ ಸಿದ್ದಾಂತ ಪ್ರಚಾರ ಮಾಡುವವರಾಗದೆ ಅಂತರಂಗ ಬಹಿರಂಗ ಶುದ್ಧರಾಗಿ ಸಮಾಜದ ಬಗ್ಗೆ ಕಳಕಳಿ ಹೊಂದಿ ದಿಕ್ಸೂಚಿಯಾಗಬೇಕು ಎಂದು ನುಡಿದರು
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ್ ಪಾಳಾ ,ಡಾ . ಕೆ ಎಸ್ ವಾಲಿ , ಬಸವರಾಜ ಧೂಳಾಗುಂಡಿ ,ಬಂಡಪ್ಪ ಕೇಸುರ್ ಉದ್ದಂಡಯ್ಯ ಅವರು ಹಾಜರಿದ್ದರು.