ನಾಗಣ್ಣ ಬಡಿಗೇರ ಎತ್ತರದ ಕವಿ- ಡಾ.ರಾಜೇಂದ್ರ ಯರನಾಳೆ

ನಾಗಣ್ಣ ಬಡಿಗೇರ ಎತ್ತರದ ಕವಿ- ಡಾ.ರಾಜೇಂದ್ರ    ಯರನಾಳೆ

ನಾಗಣ್ಣ ಬಡಿಗೇರ ಎತ್ತರದ ಕವಿ- ಡಾ.ರಾಜೇಂದ್ರ ಯರನಾಳೆ 

ಕಲಬುರಗಿ: ಸಾಹಿತ್ಯ ಸಹಿತವಾಗಿರಬೇಕು ನಿಂದನೆಗಿಂತ ಸಮಾಜದಲಿ ಸಾಮರಸ್ಯ ತರುವಂತಿರಬೇಕು‌.ಸಾಹಿತ್ಯ ಕಲ್ಪನೆಯ ಜೊತೆಗೆ ಬದುಕಿನ ವಾಸ್ತವ ಇದ್ದರೆ ಅರ್ಥಪೂರ್ಣ ವಾಗುತ್ತದೆ ಅಂತಹ ಸಾಲಿನ ಎತ್ತರಕ್ಕೆ ಏರಿದ ನಾಗಣ್ಣ ಬಡಿಗೇರ ಅವರ ಕಾವ್ಯ ತಾಜಾ ಹೂಗಳೇ ಆಗಿವೆ ಸರಳವಾಗಿ ಬರೆದವರು ಎಂದು ಜಾನಪದ ವಿದ್ವಾಂಸರಾದ ಡಾ.ರಾಜೇಂದ್ರ ಯರನಾಳೆ ಅಭಿಮತಪಟ್ಟರು.

       ಕುರಿಕೋಟಾದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ -೮ ನೇ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿ

ಖುಷಿ- ದುಃಖಗಳ ನಡುವಿನ ಸಾಹಿತ್ಯ ಸಮಾಗಮವಾಗಿದೆ

ಕಡಕೋಳ,ಶರೀಫ್, ವಚನಕಾರ ಪ್ರಭಾವ ಇವರ ಮೇಲಾಗಿದೆ ಎಂದರು.

  ರೈತ,ನೇಕಾರ,ಸಾಮಾಜಿಕ ಕಳಕಳಿಯ ಕವನಗಳನ್ನು ಬರೆಯುವ ಮೂಲಕ ಹಾಡುಗಳನ್ನು ಬರೆದ ಕವಿ. ತನ್ನೊಡಲ ನೋವು ಹೊರಹಾಕಿ,ವ್ಯಂಗ್ಯ, ಸ್ತ್ರೀ ಜೊತೆಗೆ ಆಧ್ಯಾತ್ಮಿಕದೊಂದಿಗೆ ಸಾಹಿತ್ಯವನ್ನು ರಚಿಸಿದವರು ಎಂದು

ಮಹಾಗಾಂವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಸುನೀಲ ಬಕ್ಕಪ್ಪ ನುಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ.ಶೀಲಾದೇವಿ ಬಿರಾದಾರ ಅಜ್ಜ ಹೇಳಿದ ಮಾತು ೨೫ ಕಥೆಗಳು ಮಾನವೀಯ ಮೌಲ್ಯಗಳನ್ನು ಹೊಂದಿವೆ.ನಮ್ಮ ಜೀವನಕ್ಕೆ ಹತ್ತಿರವಾದ ತಿದ್ದುವ ಕಥೆಗಳಾಗಿವೆ ಎಂದರು.

          ಸೇಡಂ ಸರಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸಿದ್ಧಪ್ಪ ಹೊಸಮನಿ ಮಾತನಾಡಿ ವಿಶ್ವವಿದ್ಯಾಲಯ ಪ್ರಾಧ್ಯಪಕರಾಗುವ ಗುಣ ಮತ್ತು ಬರಹ ಬಡಿಗೇರ ಅವರಲ್ಲಿವೆ ಎಂದರು.

ಸರಳ ವ್ಯಕ್ತಿ ಉನ್ನತ ವಿಚಾರದ ನಾಗಣ್ಣ ಎಂದು ಕಜಾಪ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಹೇಳಿದರು.

    ಕಸಾಪ ತಾಲೂಕಾಧ್ಯಕ್ಷರಾದ ಸುರೇಶ ಲೇಂಗಟೆ ಅವರು

ಸಾಹಿತ್ಯ ಸಮಾಗಮದ ಕಾರ್ಯ ಶ್ಲಾಘನೀಯ ಬಡಿಗೇರ ಅವರು ನುಡಿದಂತೆ ನಡೆದು ಬದುಕಿ ಬರೆದವರೆಂದರು.

ಕವಿ ನಾಗಣ್ಣ ಬಡಿಗೇರ ಅವರು ತಮ್ಮ ಆಧ್ಯಾತ್ಮದ ಜೊತೆ

ಸಾಹಿತ್ಯ ಕ್ಷೇತ್ರ ಬಂದದ್ದು, ಎಲ್ಲಾ ಊರ ಜನರು ಸಹಕಾರ ಇದೆ ಆ ಮೂಲಕ ಅವರೊಬ್ಬ ಕವಿಯಾದೆ ಎಂದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಸರಳ ಕಾರ್ಯಕ್ರಮ ಲೇಖಕರು, ಕವಿಗಳ ಮನೆ ಬಾಗಿಲಿಗೆ ಹೋಗಿ ಪರಿಚಯಿಸಿ ಯುವ ವಿಮರ್ಶಕರ ತಯಾರಿಸುವ ಅವರ ಸಾಹಿತ್ಯ ಹೊರ ಹಾಕುವ ಉದ್ದೇಶ ಹೇಳಿ ನಾಗಣ್ಣ ಒಬ್ಬ ಮಾನವೀಯತೆಗಾರ.ಆಧ್ಯಾತ್ಮ ಜೊತೆ ಸಾಹಿತ್ಯ ಬೆಸೆದ ಕವಿ ಎಂದರು.

ಕಲಾವಿದರಾದ ಜ್ಞಾನೇಶ್ವರ ಮತ್ತು ಕಲ್ಯಾಣ ಕುಮಾರ ಸಂಗೀತ ನೀಡಿದರು. ಪ್ರಾರ್ಥನೆ ಹಾಡಿದರು. ಅಲ್ಲಾಭಕ್ಷಿ ಮಾಲಿಪಾಟೀಲ, ಸ್ವಾಗತವನ್ನು ಡಾ.ರಾಜಕುಮಾರ ಮಾಳಗೆ,ಶಿಕ್ಷಕ ಬಿ.ಕೆ.ರವಿ ನಿರೂಪಿಸಿದರು.