ಮಠದ ಪರಂಪರೆಯ ಸಲಹಾ ಸಮಿತಿ ಅಧ್ಯಕ್ಷರಾಗಿ - ಮಲ್ಲಣ್ಣ ಹೊಸಮನಿ ಆಯ್ಕೆ

ಮಠದ ಪರಂಪರೆಯ ಸಲಹಾ ಸಮಿತಿ ಅಧ್ಯಕ್ಷರಾಗಿ - ಮಲ್ಲಣ್ಣ ಹೊಸಮನಿ ಆಯ್ಕೆ

ಮಠದ ಪರಂಪರೆಯ ಸಲಹಾ ಸಮಿತಿ ಅಧ್ಯಕ್ಷರಾಗಿ - ಮಲ್ಲಣ್ಣ ಹೊಸಮನಿ ಆಯ್ಕೆ 

ಶಹಾಪುರ : ಯಾದಗಿರಿ ನಗರದ ಹೊರವಲಯದಲ್ಲಿರುವ ಸದ್ಗುರು ದಾಸಬಾಳಧೀಶ್ವರ ಮಠದ ಗುರು ಪರಂಪರೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ಶರಣಜೀವಿ ಮಲ್ಲಣ್ಣ ಹೊಸಮನಿ ಶಿರವಾಳ ಆಯ್ಕೆ ಆಗಿದ್ದಾರೆ ಎಂದು ಈ ಮಠದ ಪೂಜ್ಯರಾದ ವೀರೇಶ್ವರ ಮಹಾಸ್ವಾಮಿಗಳು ಪ್ರಕಟಣೆಗೆ ತಿಳಿಸಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಸಾಹಿತ್ತಿಕ,ಸಾಂಸ್ಕೃತಿಕ,ಧಾರ್ಮಿಕ ಚಟುವಟಿಕೆಗಳ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರತಕ್ಕಂತಹ ಮಲ್ಲಣ್ಣ ಹೊಸಮನಿಯವರ ಕಾರ್ಯವನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ,ಶ್ರೀ ಮಠದ ಗುರು ಪರಂಪರೆಯ ಧಾರ್ಮಿಕ ಕಾರ್ಯ ಚಟುವಟಿಕೆಗಳ ಜೊತೆಗೆ,ಶರಣ ತತ್ವ,ವಚನ ಸಾಹಿತ್ಯ,ಶರಣ ಸಾಹಿತ್ಯ,ತತ್ವಸಿದ್ಧಾಂತಗಳನ್ನು ಪ್ರಚಾರ ಪಡಿಸುವ ಬಹುದೊಡ್ಡ ಜವಾಬ್ದಾರಿ ಅವರ ಮೇಲಿದೆ ಎಂದು ಹೇಳಿದರು,ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಶ್ರೀಮಠದ ಪರವಾಗಿ ಗೌರವಿಸಲಾಯಿತು.