ಐನೆಕ್ಸ 2024 ರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದುಕೊಂಡ ಪಿಡಿಎ ವಿದ್ಯಾರ್ಥಿಗಳು

ಐನೆಕ್ಸ 2024 ರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದುಕೊಂಡ ಪಿಡಿಎ ವಿದ್ಯಾರ್ಥಿಗಳು

ಐನೆಕ್ಸ 2024 ರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದುಕೊಂಡ ಪಿಡಿಎ ವಿದ್ಯಾರ್ಥಿಗಳು

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನ ವಿದ್ಯಾರ್ಥಿಗಳು ಇಂಡಿಯಾ ಅಂತಾರಾಷ್ಟ್ರೀಯ ಆವಿಷ್ಕಾರ ಮತ್ತು ಆವಿಷ್ಕಾರ ಎಕ್ಸಪೋ (ಐನೆಕ್ಸ)2024 ರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಕಲಬುರ್ಗಿ ಜಿಲ್ಲೆಗೆ ಹಾಗೂ ಸಂಸ್ಥೆಗೆ ಮತ್ತು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

 ನವೆಂಬರ್ 13 ರಿಂದ 15 ರವರಗೆ ದಕ್ಷಿಣ ಗೋವಾದ ಫಟೋರ್ಡಾದ ಡಾನ್ ಬಾಸ್ಕೋ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ 15 ಕ್ಕೂ ಹೆಚ್ಚು ದೇಶಗಳು ಸುಮಾರು 150 ಕ್ಕೂ ಹೆಚ್ಚು ಪ್ರತಿನಿಧಿಗಳ ಹೊಸ ಹೊಸ ಸಂಶೋಧನಾ ಆವಿಷ್ಕಾರಗಳ ಪ್ರೋಜೆಕ್ಟಗಳು ಪ್ರದರ್ಶನಗೊಂಡಿದ್ದವು.

ಅದರಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸಂಕೇತ ಕಾರ್,ಅವಂತಿಕಾ ಇನಾಂದಾರ್, ದಿವ್ಯ ದಾವಣಗೆರೆ,ನವೀದ್ ಅಖ್ತರ್ ಮತ್ತು ಸಾನಿದಾಸ್ ತಂಡದ ಸಂಶೋಧನಾ ಪ್ರೋಜೆಕ್ಟ ತಾಂತ್ರಿಕ ಕೌಶಲ್ಯದ ಬಳಕೆ, ಅತ್ಯುತ್ತಮವಾದ ಕಾರ್ಯವಿಧಾನದಿಂದ ತಿರ್ಪುಗಾರರ ಗಮನ ಸೆಳೆದು ಬೆಳ್ಳಿ ಪದಕವನ್ನು ಪಡೆಯಿತು

ಈ ಐನೆಕ್ಸ 2024 ರ ಸ್ಪರ್ಧೆಗಳನ್ನು ಗೋವಾ ರಾಜ್ಯದ ಆವಿಷ್ಕಾರ ಮಂಡಳಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಂಡಿಯನ್ ಇನ್ನೋವೆಟರ್ಸ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸಲಾಗಿತ್ತು.ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ.

ಇಂತಹ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳ ತಂಡಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಅಭಿನಂದನೆ ಸಲ್ಲಿಸಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡುವುದರೊಂದಿಗೆ ಕಲಬುರ್ಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಪ್ರಾಚಾರ್ಯರಾದ ಡಾ ಸಿದ್ಧರಾಮ ಪಾಟೀಲ್,ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ,ಡಾ ಭಾರತಿ ಹರಸೂರ, ಐಎಸ್ ಮತ್ತು ಎಐಎಂಎಲ್ ವಿಭಾಗದ ಮುಖ್ಯಸ್ಥರಾದ ಡಾ ಉದಯ ಬಾಲಗಾರ, ಸಿ ಎಸ್ ವಿಭಾಗದ ಡಾ ಸುಜಾತಾ ತೇರ್ಡಾಳ, ಮಾರ್ಗದರ್ಶಕರಾದ ನಾಗೇಶ್ ಸಾಲಿಮಠ,ಡಾ ವಿಷ್ಣುಮೂರ್ತಿ ಬುರಕಪಳ್ಳಿ, ಅಶೋಕ್ ಪಾಟೀಲ್,ಪ್ರಿಯಾಂಕ ದೇವಣಿ, ಅಶ್ವಿನಿ ಹಟ್ಟಿ ವಿದ್ಯಾರ್ಥಿಗಳ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.