ಕೃಷಿ ಕಾರ್ಮಿಕರ ಕೊರತೆ ಅನುಭವಿಸುತ್ತಿದ್ದವರಿಗೆ ಬೆಳ್ಳಿ ಚುಕ್ಕಿಯಂತೆ ಕಂಡ ನ್ಯಾನೋ ಯೂರಿಯಾ

ಹಸು ಹೊಗೆ ಬಿಡಲ್ಲ, ಟ್ರಾಕ್ಟರ್ ಸಗಣಿ ಹಾಕಲ್ಲ ಎಂದು ಸಂಪ್ರದಾಯ ಕೃಷಿಗೆ ಒಲವು ತೋರುವ ನಮ್ಮ ರೈತ ಬಾಂದವರು ಈಗೀಗ ಎರಡನ್ನು ಸಮಾನವಾಗಿ ಬಳಸುತ್ತಾರೆ ಆದುದರಿಂದಲೇ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ

ಕೃಷಿ ವಲಯವು ರಾಜ್ಯದ ಆರ್ಥಿಕತೆಗೆ 13% ಕೊಡುಗೆಯನ್ನು ನೀಡುತ್ತದೆ.

 ಸುಮಾರು 30% ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಹಾಗೆಯೇ ಕೃಷಿ ಎಂದರೆ ಮಣ್ಣನ್ನು ಬೆಳೆಸುವ, ಬೆಳೆಗಳನ್ನು ಬೆಳೆಸುವ ಮತ್ತು ಜಾನುವಾರುಗಳನ್ನು ಸಾಕುವ ಕಲೆ ಮತ್ತು ವಿಜ್ಞಾನ. ಇದು ಜನರು ಬಳಸಲು ಸಸ್ಯ ಮತ್ತು ಪ್ರಾಣಿ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಮಾರುಕಟ್ಟೆಗಳಿಗೆ ವಿತರಿಸುವುದನ್ನು ಒಳಗೊಂಡಿದೆ.

ಕೃಷಿಯು ಪ್ರಪಂಚದ ಹೆಚ್ಚಿನ ಆಹಾರ ಮತ್ತು ಬಟ್ಟೆಗಳನ್ನು ಒದಗಿಸುತ್ತದೆ. ಹತ್ತಿ, ಉಣ್ಣೆ ಮತ್ತು ಚರ್ಮ ಎಲ್ಲವೂ ಕೃಷಿ ಉತ್ಪನ್ನಗಳಾಗಿವೆ. ಕೃಷಿಯು ನಿರ್ಮಾಣ ಮತ್ತು ಕಾಗದದ ಉತ್ಪನ್ನಗಳಿಗೆ ಮರವನ್ನು ಸಹ ಒದಗಿಸುತ್ತದೆ.

ಈ ಉತ್ಪನ್ನಗಳು ಹಾಗೂ ಬಳಸುವ ಕೃಷಿ ವಿಧಾನಗಳು ಪ್ರಪಂಚದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗಬಹುದು ಎಂದು ಲೇಖಕ ಸಂತೋಷ್ ಎನ್ ರವರು ವಿವರಿಸುತ್ತಾರೆ.

ಅದರಂತೆಯೇ 

ರೈತರ ಕಠಿಣ ಪರಿಶ್ರಮ ಮತ್ತು ತಪಸ್ಸಿಗೆ ಅತಿವೃಷ್ಟಿ, ಅನಾವೃಷ್ಟಿಯಂತಹ ಗಂಡಾಂತರಗಳಿಗೆ ಎದೆಯೊಡ್ಡುವ ಉದ್ಯೋಗವಾಗಿದೆ.

ಅಕಾಲಿಕ ಮಳೆ, ಬರಗಾಲ, ಪ್ರವಾಹ, ಬಿರುಗಾಳಿ ಇವೆಲ್ಲವುಗಳ ನಡುವೆ ಮಾನ್ಸುನ್ ಜೊತೆಗೆ ಜೂಜಾಟ ಹೊರತಾಗಿಯೂ ಕೃಷಿಯಲ್ಲಿ ಸ್ವಾವಲಂಬನೆ, ಆಹಾರ ಭದ್ರತೆ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಸಾಕಷ್ಟು ಪ್ರಮಾಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಸಾಧ್ಯವಾಗಿರುವುದು ರೈತರ ಹಾಗೂ ರೈತವ್ಯಾಪಿ ಸಮುದಾಯದ ಸಂಘಟಿತ ಪರಿಶ್ರಮದ ಫಲವೆಂದು ಹೇಳಬಹುದು.

ಈ ಎಲ್ಲಾ ಚಾಲೆಂಜ್ ಗಳ ನಡುವೆಯೂ ಈಗೀಗ ಯುವ ಜನತೆ ಕಳೆದ ನಾಲ್ಕೈದು ವರ್ಷಗಳಿಂದ ಯುವಜನತೆ ಕೃಷಿಯ ಕಡೆ ಒಲವು ತೋರುತ್ತಿರುವುದು ಖುಷಿಯ ವಿಚಾರವೇ ಸರಿ.

ಆದರೂ ಬದಲಾದ ಕಾಲ ಘಟ್ಟದಲ್ಲಿ ಕೃಷಿಯಲ್ಲಿ ಬಳಸುವ ಹೊಸ ತಂತ್ರಜ್ಞಾನಗಳಾದ ಕೃಷಿ ಯಂತ್ರೋಪಕರಣಗಳು, ನೀರಾವರಿ ತಂತ್ರಜ್ಞಾನ, ಕೀಟನಾಶಕಗಳು ಮತ್ತು ವೈಜ್ಞಾನಿಕ ಕೃಷಿ ವಿಧಾನ ರಸಗೊಬ್ಬರಗಳ ಬಳಕೆ ಮಾಡುವುದು ಅನಿವಾರ್ಯ ಮತ್ತು ಅಗತ್ಯವು ಕಂಡುಬರುತ್ತದೆ. ಇದರೊಟ್ಟಿಗೆ ಸಮಗ್ರ ಮಳೆಯಾಶ್ರಿತ ಕೃಷಿ, ಸಮಗ್ರ ನೀರಾವರಿ ಪದ್ಧತಿ, ಸಾವಯವ ಕೃಷಿಯನ್ನು, ಝೀರೋ ಕಲ್ಟಿವೇಶನಗಳನ್ನು ಮಾಡುವುದು ನಮ್ಮ ಅಭಿವೃದ್ಧಿಗೆ ಇನ್ನೊಂದು ಹೆಜ್ಜೆ ಮುಂದೆ ಕರೆದುಕೊಂಡು ಹೋಗುತ್ತದೆ.

ಇದರೊಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ, ತರುತ್ತಲೇ ಇದೆ. ಅವುಗಳಲ್ಲಿ ಮುಖ್ಯವಾದವು ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಮಗ್ರ ಕೃಷಿ ಅಭಿಯಾನ, ಆತ್ಮ ಯೋಜನೆ, ಕರ್ನಾಟಕ ಕೃಷಿ ಬೆಲೆ ಆಯೋಗ, ರೈತ ಸಿರಿ, ಮತ್ತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಹೀಗೆ ಇನ್ನೂ ಅನೇಕ ಉಪ ಕಾರ್ಯಕ್ರಮಗಳನ್ನು ನೀಡುತ್ತಿದೆ. ಆದರೂ ನಮ್ಮಲ್ಲಿ ಒಂದಿಷ್ಟು ಕೊರತೆಗಳು ಎದ್ದು ಕಾಣುತ್ತಿವೆ.

ನೀರಾವರಿ ಅಥವಾ ಖುಷ್ಕಿ ಕೃಷಿ ಪದ್ಧತಿಯಾಗಲಿ ಬೆಳೆಯ ಉತ್ತಮ ಇಳುವರಿಗೆ ಬಹು ಮುಖ್ಯವಾಗಿ ಮಣ್ಣು, ನೀರು ಮತ್ತು ಗೊಬ್ಬರಗಳ ಮಹತ್ವದ್ದಾಗಿದೆ. ಅದರಾಚೆಗೂ ಇತ್ತೀಚಿನ ದಿನಮಾನಗಳಲ್ಲಿ ಕಂಡು ಬರುತ್ತಿರುವ ಹಾಗೂ ರೈತ ಸಮುದಾಯವನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಕೃಷಿ ಕಾರ್ಮಿಕರ ಕೊರತೆ

ಇದು ಇಂದು ಒಂದು ಸೀಮಿತ ಅಥವಾ ಪ್ರಾದೇಶಿಕ ವಿಭಾಗಕ್ಕೆ ಸಂಬಂಧಿಸದೆ ನಾಡಿನ ಬಹುತೇಕ ರೈತರ ಸಮಸ್ಯೆಯಾಗಿದೆ.

ಉದಾಹರಣೆಗೆ ಖುಷ್ಕಿ ಭೂಮಿಯಲ್ಲಿ ಮಾನ್ಸುನ್ ಆರಂಭದಲ್ಲಿ ಉತ್ತಮ ಮಳೆಯಾದಾಗಲೇ ಉಳುಮೆ ಆರಂಭವಾಗುತ್ತದೆ, ಅದೇ ಸಂದರ್ಭದಲ್ಲಿ ಎಲ್ಲಾ ರೈತರು ಬಿತ್ತನೆ, ಕುಂಟೆ, ಕಳೆ ಕೀಳುವುದು ಕೀಟನಾಶಕ ಸಿಂಪರಣೆ, ಬೆಳೆಗಳಿಗೆ ಗೊಬ್ಬರ ಎರಚುವುದು ಹೀಗೆ ಆರಂಭಗೊಂಡಾಗ ಕೃಷಿ ಕಾರ್ಮಿಕರ ಕೊರತೆ ವರ್ಣಿಸಲಸಾಧ್ಯ ಎನ್ನುವಂತೆ ಕಂಡು ಬರುತ್ತದೆ. ಯಾತ್ರೋಪಕರಣಗಳನ್ನು ತಂತ್ರಜ್ಞಾನದ ಮೂಲಕ ಕೈಗೊಂಡರು ಕೆಲವು ಕಾರ್ಯ ಗಳಿಗೆ ಕಾರ್ಮಿಕರ ಕೊರತೆಯ ಕುರಿತು ಹೇಳುವುದಕ್ಕಿಂತ ಅನುಭವಿಸುವವರ ನೋವೇ ಹೆಚ್ಚಾಗಿರುತ್ತದೆ. ಸಕಾಲಕ್ಕೆ ಯೂರಿಯಾ ಗೊಬ್ಬರದ ಕೊರತೆಯೂ ಅನೇಕ ಕಡೆ ಕಂಡುಬದಿರುವುದು ತಮಗೆಲ್ಲರಿಗೂ ತಿಳಿದ ಸಂಗತಿಯೂ ಹೌದು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ಕಾರವು ನ್ಯಾನೋ ಯೂರಿಯಾವನ್ನು ಪರಿಚಯಿಸಿರುವುದು ಅಮೃತ ಗಳಿಗೆ ಎಂದು ಹೇಳಬಹುದು.

ನ್ಯಾನೋ ಯೂರಿಯಾ ಉಪಯೋಗ, ಬಳಕೆ ಮತ್ತು ನ್ಯಾನೋ ಯೂರಿಯಾದಿಂದಾಗುವ ಲಾಭಗಳ ಕುರಿತು ಸರ್ಕಾರ ಸಂಬಂದಿಸಿದ ಇಲಾಖೆಗಳ ಮೂಲಕ ಎಲ್ಲಾ ರೈತರಿಗೆ ಪ್ರಾಯೋಗಿಕವಾಗಿ ತಿಳಿಸಿ ರೈತಭಾಂದವರುಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಈ ಮೂಲಕ ಯೂರಿಯಾ ಗೊಬ್ಬರ ತಯಾರಿಕೆ, ಹಾಗೂ ಸಾಗಣಿಕೆಯ ಸಾರಿಗೆ ವೆಚ್ಚ, 

ಮಾನವ ನಿರ್ವಹಣೆಯ ವೆಚ್ಚ, (ಚೀಲಗಳಿಗೆ ತುಂಬುವ ಹಾಗೂ ಲೋಡು ಅನ್ ಲೋಡ್ ಮಾಡುವ) ರೈತರು ಜಮೀನುಗಳಿಗೆ ಸಾಗಿಸುವ ವೆಚ್ಚ, ಗೊಬ್ಬರ ಎರಚುವ ಕೂಲಿ ಕಾರ್ಮಿಕರ ವೆಚ್ಚ ಹೀಗೆ ಹತ್ತು ಹಲವು ವೆಚ್ಚಗಳಿಗೆ ಕಡಿವಾಣ ಹಾಕಲು ನ್ಯಾನೋ ಯೂರಿಯಾ ಬಳಕೆಯು ಬಹು ಉಪಯೋಗಿಯಾಗಿದೆ.

ಕೆಲವು ಕೀಟ ನಾಶಕಗಳ ಜೊತೆ ಜೊತೆಯಾಗಿ ನ್ಯಾನೋ ಯೂರಿಯಾವನ್ನು ಅತೀ ಕಡಿಮೆ ವೆಚ್ಚದಲ್ಲಿ ಬಳಸಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದಲ್ಲದೆ. ಭೂಮಿಯನ್ನು ಮಾಲಿನ್ಯ/ ಬರಡು ಮಾಡದಂತೆ ಕಾಪಾಡಿಕೊಳ್ಳಬಹುದು.

ನ್ಯಾನೋ ಯೂರಿಯಾ ಹಾಗೂ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡವರೆ ಕೃಷಿ ಕಾರ್ಮಿಕರ ಕೊರತೆಯನ್ನು ದಾಟಿ ಮುನ್ನೆಡೆಯಬಹುದು.

ಮುಗಿಸುವ ಮುನ್ನ : ರೈತ ತನ್ನೆಲಾ ಶ್ರಮವನ್ನು ವ್ಯಯಿಸಿ ಬೆಳೆದ ಬೆಳೆಗೆ ತಾನೇ ಬೆಲೆಯನ್ನು ನಿರ್ಧರಿಸುವ ಕಾಲ ಬಹು ಬೇಗ ಕೂಡಿ ಬರಲಿ ಎನ್ನುವುದು ನನ್ನ ಆಶಯ.

ಕೃಷಿ ಕಾರ್ಮಿಕರ ಕೊರತೆ ಅನುಭವಿಸುತ್ತಿದ್ದವರಿಗೆ ಬೆಳ್ಳಿ ಚುಕ್ಕಿಯಂತೆ ಕಂಡ ನ್ಯಾನೋ ಯೂರಿಯಾ

ಹಸು ಹೊಗೆ ಬಿಡಲ್ಲ, ಟ್ರಾಕ್ಟರ್ ಸಗಣಿ ಹಾಕಲ್ಲ ಎಂದು ಸಂಪ್ರದಾಯ ಕೃಷಿಗೆ ಒಲವು ತೋರುವ ನಮ್ಮ ರೈತ ಬಾಂದವರು ಈಗೀಗ ಎರಡನ್ನು ಸಮಾನವಾಗಿ ಬಳಸುತ್ತಾರೆ ಆದುದರಿಂದಲೇ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ

ಕೃಷಿ ವಲಯವು ರಾಜ್ಯದ ಆರ್ಥಿಕತೆಗೆ 13% ಕೊಡುಗೆಯನ್ನು ನೀಡುತ್ತದೆ.

 ಸುಮಾರು 30% ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಹಾಗೆಯೇ ಕೃಷಿ ಎಂದರೆ ಮಣ್ಣನ್ನು ಬೆಳೆಸುವ, ಬೆಳೆಗಳನ್ನು ಬೆಳೆಸುವ ಮತ್ತು ಜಾನುವಾರುಗಳನ್ನು ಸಾಕುವ ಕಲೆ ಮತ್ತು ವಿಜ್ಞಾನ. ಇದು ಜನರು ಬಳಸಲು ಸಸ್ಯ ಮತ್ತು ಪ್ರಾಣಿ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಮಾರುಕಟ್ಟೆಗಳಿಗೆ ವಿತರಿಸುವುದನ್ನು ಒಳಗೊಂಡಿದೆ.

ಕೃಷಿಯು ಪ್ರಪಂಚದ ಹೆಚ್ಚಿನ ಆಹಾರ ಮತ್ತು ಬಟ್ಟೆಗಳನ್ನು ಒದಗಿಸುತ್ತದೆ. ಹತ್ತಿ, ಉಣ್ಣೆ ಮತ್ತು ಚರ್ಮ ಎಲ್ಲವೂ ಕೃಷಿ ಉತ್ಪನ್ನಗಳಾಗಿವೆ. ಕೃಷಿಯು ನಿರ್ಮಾಣ ಮತ್ತು ಕಾಗದದ ಉತ್ಪನ್ನಗಳಿಗೆ ಮರವನ್ನು ಸಹ ಒದಗಿಸುತ್ತದೆ.

ಈ ಉತ್ಪನ್ನಗಳು ಹಾಗೂ ಬಳಸುವ ಕೃಷಿ ವಿಧಾನಗಳು ಪ್ರಪಂಚದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗಬಹುದು ಎಂದು ಲೇಖಕ ಸಂತೋಷ್ ಎನ್ ರವರು ವಿವರಿಸುತ್ತಾರೆ.

ಅದರಂತೆಯೇ 

ರೈತರ ಕಠಿಣ ಪರಿಶ್ರಮ ಮತ್ತು ತಪಸ್ಸಿಗೆ ಅತಿವೃಷ್ಟಿ, ಅನಾವೃಷ್ಟಿಯಂತಹ ಗಂಡಾಂತರಗಳಿಗೆ ಎದೆಯೊಡ್ಡುವ ಉದ್ಯೋಗವಾಗಿದೆ.

ಅಕಾಲಿಕ ಮಳೆ, ಬರಗಾಲ, ಪ್ರವಾಹ, ಬಿರುಗಾಳಿ ಇವೆಲ್ಲವುಗಳ ನಡುವೆ ಮಾನ್ಸುನ್ ಜೊತೆಗೆ ಜೂಜಾಟ ಹೊರತಾಗಿಯೂ ಕೃಷಿಯಲ್ಲಿ ಸ್ವಾವಲಂಬನೆ, ಆಹಾರ ಭದ್ರತೆ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಸಾಕಷ್ಟು ಪ್ರಮಾಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಸಾಧ್ಯವಾಗಿರುವುದು ರೈತರ ಹಾಗೂ ರೈತವ್ಯಾಪಿ ಸಮುದಾಯದ ಸಂಘಟಿತ ಪರಿಶ್ರಮದ ಫಲವೆಂದು ಹೇಳಬಹುದು.

ಈ ಎಲ್ಲಾ ಚಾಲೆಂಜ್ ಗಳ ನಡುವೆಯೂ ಈಗೀಗ ಕಳೆದ ನಾಲ್ಕೈದು ವರ್ಷಗಳಿಂದ ಯುವಜನತೆ ಕೃಷಿಯ ಕಡೆ ಒಲವು ತೋರುತ್ತಿರುವುದು ಖುಷಿಯ ವಿಚಾರವೇ ಸರಿ.

ಆದರೂ ಬದಲಾದ ಕಾಲ ಘಟ್ಟದಲ್ಲಿ ಕೃಷಿಯಲ್ಲಿ ಬಳಸುವ ಹೊಸ ತಂತ್ರಜ್ಞಾನಗಳಾದ ಕೃಷಿ ಯಂತ್ರೋಪಕರಣಗಳು, ನೀರಾವರಿ ತಂತ್ರಜ್ಞಾನ, ಕೀಟನಾಶಕಗಳು ಮತ್ತು ವೈಜ್ಞಾನಿಕ ಕೃಷಿ ವಿಧಾನ ರಸಗೊಬ್ಬರಗಳ ಬಳಕೆ ಮಾಡುವುದು ಅನಿವಾರ್ಯ ಮತ್ತು ಅಗತ್ಯವು ಕಂಡುಬರುತ್ತದೆ. ಇದರೊಟ್ಟಿಗೆ ಸಮಗ್ರ ಮಳೆಯಾಶ್ರಿತ ಕೃಷಿ, ಸಮಗ್ರ ನೀರಾವರಿ ಪದ್ಧತಿ, ಸಾವಯವ ಕೃಷಿಯನ್ನು, ಝೀರೋ ಕಲ್ಟಿವೇಶನಗಳನ್ನು ಮಾಡುವುದು ನಮ್ಮ ಅಭಿವೃದ್ಧಿಗೆ ಇನ್ನೊಂದು ಹೆಜ್ಜೆ ಮುಂದೆ ಕರೆದುಕೊಂಡು ಹೋಗುತ್ತದೆ.

ಇದರೊಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ, ತರುತ್ತಲೇ ಇದೆ. ಅವುಗಳಲ್ಲಿ ಮುಖ್ಯವಾದವು ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಮಗ್ರ ಕೃಷಿ ಅಭಿಯಾನ, ಆತ್ಮ ಯೋಜನೆ, ಕರ್ನಾಟಕ ಕೃಷಿ ಬೆಲೆ ಆಯೋಗ, ರೈತ ಸಿರಿ, ಮತ್ತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಹೀಗೆ ಇನ್ನೂ ಅನೇಕ ಉಪ ಕಾರ್ಯಕ್ರಮಗಳನ್ನು ನೀಡುತ್ತಿದೆ. ಆದರೂ ನಮ್ಮಲ್ಲಿ ಒಂದಿಷ್ಟು ಕೊರತೆಗಳು ಎದ್ದು ಕಾಣುತ್ತಿವೆ.

ನೀರಾವರಿ ಅಥವಾ ಖುಷ್ಕಿ ಕೃಷಿ ಪದ್ಧತಿಯಾಗಲಿ ಬೆಳೆಯ ಉತ್ತಮ ಇಳುವರಿಗೆ ಬಹು ಮುಖ್ಯವಾಗಿ ಮಣ್ಣು, ನೀರು ಮತ್ತು ಗೊಬ್ಬರಗಳ ಮಹತ್ವದ್ದಾಗಿದೆ. ಅದರಾಚೆಗೂ ಇತ್ತೀಚಿನ ದಿನಮಾನಗಳಲ್ಲಿ ಕಂಡು ಬರುತ್ತಿರುವ ಹಾಗೂ ರೈತ ಸಮುದಾಯವನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಕೃಷಿ ಕಾರ್ಮಿಕರ ಕೊರತೆ

ಇದು ಇಂದು ಒಂದು ಸೀಮಿತ ಅಥವಾ ಪ್ರಾದೇಶಿಕ ವಿಭಾಗಕ್ಕೆ ಸಂಬಂಧಿಸದೆ ನಾಡಿನ ಬಹುತೇಕ ರೈತರ ಸಮಸ್ಯೆಯಾಗಿದೆ.

ಉದಾಹರಣೆಗೆ ಖುಷ್ಕಿ ಭೂಮಿಯಲ್ಲಿ ಮಾನ್ಸುನ್ ಆರಂಭದಲ್ಲಿ ಉತ್ತಮ ಮಳೆಯಾದಾಗಲೇ ಉಳುಮೆ ಆರಂಭವಾಗುತ್ತದೆ, ಅದೇ ಸಂದರ್ಭದಲ್ಲಿ ಎಲ್ಲಾ ರೈತರು ಬಿತ್ತನೆ, ಕುಂಟೆ, ಕಳೆ ಕೀಳುವುದು ಕೀಟನಾಶಕ ಸಿಂಪರಣೆ, ಬೆಳೆಗಳಿಗೆ ಗೊಬ್ಬರ ಎರಚುವುದು ಹೀಗೆ ಆರಂಭಗೊಂಡಾಗ ಕೃಷಿ ಕಾರ್ಮಿಕರ ಕೊರತೆ ವರ್ಣಿಸಲು ಸಾಧ್ಯ ಎನ್ನುವಂತೆ ಕಂಡು ಬರುತ್ತದೆ. ಯಾತ್ರೋಪಕರಣಗಳನ್ನು ತಂತ್ರಜ್ಞಾನದ ಮೂಲಕ ಕೈಗೊಂಡರು ಕೆಲವು ಕಾರ್ಯ ಗಳಿಗೆ ಕಾರ್ಮಿಕರ ಕೊರತೆಯ ಕುರಿತು ಹೇಳುವುದಕ್ಕಿಂತ ಅನುಭವಿಸುವವರ ನೋವೇ ಹೆಚ್ಚಾಗಿರುತ್ತದೆ. ಸಕಾಲಕ್ಕೆ ಯೂರಿಯಾ ಗೊಬ್ಬರದ ಕೊರತೆಯೂ ಅನೇಕ ಕಡೆ ಕಂಡುಬದಿರುವುದು ತಮಗೆಲ್ಲರಿಗೂ ತಿಳಿದ ಸಂಗತಿಯೂ ಹೌದು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ಕಾರವು ನ್ಯಾನೋ ಯೂರಿಯಾವನ್ನು ಪರಿಚಯಿಸಿರುವುದು ಅಮೃತ ಗಳಿಗೆ ಎಂದು ಹೇಳಬಹುದು.

ನ್ಯಾನೋ ಯೂರಿಯಾ ಉಪಯೋಗ, ಬಳಕೆ ಮತ್ತು ನ್ಯಾನೋ ಯೂರಿಯಾದಿಂದಾಗುವ ಲಾಭಗಳ ಕುರಿತು ನ್ಯಾನೋ ಯೂರಿಯಾ ತಯಾರಿಸುವ ಕಂಪನಿ ಗಳು ಎಲ್ಲಾ ರೈತರಿಗೆ ಪ್ರಾಯೋಗಿಕವಾಗಿ ತಿಳಿಸಿ ರೈತಭಾಂದವರುಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಈ ಮೂಲಕ ಯೂರಿಯಾ ಗೊಬ್ಬರ ತಯಾರಿಕೆ, ಹಾಗೂ ಸಾಗಣಿಕೆಯ ಸಾರಿಗೆ ವೆಚ್ಚ, 

ಮಾನವ ನಿರ್ವಹಣೆಯ ವೆಚ್ಚ, (ಚೀಲಗಳಿಗೆ ತುಂಬುವ ಹಾಗೂ ಲೋಡು ಅನ್ ಲೋಡ್ ಮಾಡುವ) ರೈತರು ಜಮೀನುಗಳಿಗೆ ಸಾಗಿಸುವ ವೆಚ್ಚ, ಗೊಬ್ಬರ ಎರಚುವ ಕೂಲಿ ಕಾರ್ಮಿಕರ ವೆಚ್ಚ ಹೀಗೆ ಹತ್ತು ಹಲವು ವೆಚ್ಚಗಳಿಗೆ ಕಡಿವಾಣ ಹಾಕಲು ನ್ಯಾನೋ ಯೂರಿಯಾ ಬಳಕೆಯು ಬಹು ಉಪಯೋಗಿಯಾಗಿದೆ.

ಕೆಲವು ಕೀಟ ನಾಶಕಗಳ ಜೊತೆ ಜೊತೆಯಾಗಿ ನ್ಯಾನೋ ಯೂರಿಯಾವನ್ನು ಸಿಂಪಿರಣೆ ಮಾಡುವುದರಿಂದ ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದಲ್ಲದೆ. ಭೂಮಿಯ/ ಮಣ್ಣಿನ ಆರೋಗ್ಯ/ ಬರಡು ಮಾಡದಂತೆ ಕಾಪಾಡಿಕೊಳ್ಳಬಹುದು.

ನ್ಯಾನೋ ಯೂರಿಯಾ ಹಾಗೂ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿ ಕಾರ್ಮಿಕರ ಕೊರತೆಯನ್ನು ದಾಟಿ ಮುನ್ನೆಡೆಯಬಹುದು.

ಮುಗಿಸುವ ಮುನ್ನ : ರೈತರು ತನ್ನೆಲಾ ಪಶ್ರಮವನ್ನು ವ್ಯಯಿಸಿ ಬೆಳೆದ ಬೆಳೆಗೆ ತಾನೇ ಬೆಲೆಯನ್ನು ನಿರ್ಧರಿಸುವ ಕಾಲ ಬಹು ಬೇಗ ಕೂಡಿ ಬರಲಿ ಎನ್ನುವುದು ನನ್ನ ಆಶಯ.

 ಎಂ.ಚನ್ನವೀರಸ್ವಾಮಿ (MCS)

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಂಜುನಾಥ ಸ್ವಾಮಿ ರೈತ ಉತ್ಪಾದಕರ ಕಂಪನಿ (ಲಿ) ತುರುವನೂರು ಚಿತ್ರದುರ್ಗ

9620266826