ಠಾಣೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ, ಮಡಿವಾಳ ಕಾಯಕ ಜೀವಿ : ಆಶಾ ರಾಠೋಡ್

ಠಾಣೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ,  ಮಡಿವಾಳ ಕಾಯಕ ಜೀವಿ : ಆಶಾ ರಾಠೋಡ್

ಠಾಣೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ, 

ಮಡಿವಾಳ ಕಾಯಕ ಜೀವಿ : ಆಶಾ ರಾಠೋಡ್ 

ಕಮಲನಗರ : ಮಡಿವಾಳ ಮಾಚಿದೇವರು ಹನ್ನೇರಡನೆ ಶತಮಾನದ ಶರಣರಲ್ಲಿ ಒಬ್ಬರಾಗಿದ್ದಾರೆ. ಇವರ ತತ್ವಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ಜೀವಿಗಳಾಗಬೇಕು ಎಂದು ಪಿಎಸ್‍ಐ ಆಶಾ ರಾಠೋಡ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಅವರು ಪೂಜೆ ಸಲ್ಲಿಸಿ ಮಾತನಾಡಿದರು.

ಮಡಿವಾಳ ಮಾಚಿದೇವರು ತಮ್ಮ ನಿತ್ಯ ಕಾಯಕದೊಂದಿಗೆ ಅನುಭವ ಮಂಟಪದಲ್ಲಿ ಶರಣರೊಂದಿಗೆ ಭಾಗವಹಿಸಿ ವಚನಗಳು ಬರೆದು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಸಿಬ್ಬಂದಿಗಳಾದ ಲೊಕೇಶ ತೇಲಂಗ್, ವಸಂತ ಮೇತ್ರೆ, ಸುನೀಲ್, ಸಂತೋಷ, ರಾಜಕುಮಾರ, ಇಮ್ರಾನ, ಅಂಕುಶ ಭವರಾ, ಶಿವಾನಂದ, ಪರಶುರಾಮ ಹಾಗೂ ಇತರರು ಇದ್ದರು.