ಗುರೂಜಿ,ಕೆವಿಪಿ ದಣ್ಣೂರಿ ಕಾಲೇಜಿನ ಕೊಡುಗೆ ಅಪಾರವಾದದ್ದು ಡಾ.ಕೆ. ಗಿರಿಮಲ್ಲ

ಗುರೂಜಿ,ಕೆವಿಪಿ ದಣ್ಣೂರಿ ಕಾಲೇಜಿನ ಕೊಡುಗೆ ಅಪಾರವಾದದ್ದು ಡಾ.ಕೆ. ಗಿರಿಮಲ್ಲ

ಗುರೂಜಿ,ಕೆವಿಪಿ ದಣ್ಣೂರಿ ಕಾಲೇಜಿನ ಕೊಡುಗೆ ಅಪಾರವಾದದ್ದು ಡಾ.ಕೆ. ಗಿರಿಮಲ್ಲ 

ಕಲಬುರಗಿ: ನಗರದ ಪ್ರತಿಷ್ಠಿತ ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆವಿಪಿ ದಣ್ಣೂರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನೆರವೇರಿಸಲಾಯಿತು.

ನಗರದ ತಾಜಸುಲ್ತಾನಪೂರದ ರಿಂಗ್ ರಸ್ತೆಯ ಬಳಿ ಇರುವ ಗುರೂಜಿ ಕಲಾ ಮತ್ತು ವಾಣ ಜ್ಯ ಮಹಾವಿದ್ಯಾಲಯ ಮತ್ತು ಕೆವಿಪಿ ದಣ್ಣೂರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವಿಜೃಂಭಣೆಯಿಕದ ಜರುಗಿತು ಸಮಾರಂಭದಲ್ಲಿ ಭಾಗವಹಿಸಿದ ಖ್ಯಾತ ಉದ್ಯಮಿ ಮಲ್ಲಿಕಾರ್ಜುನ್ ಕೇಮಜಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ವೇಳೆ ಮಾತನಾಡಿದ ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆವಿಪಿ ದಣ್ಣೂರಿ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ್ ಶೀಲವಂತ ಅವರು, ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆವಿಪಿ ದಣ್ಣೂರಿ ಪದವಿ ಪೂರ್ವ ಕಾಲೇಜು ಕಳೆದ ಹಲವು ವರ್ಷಗಳಿಂದ ಶೈಕ್ಷಣಕ ಸಭೆಯಲ್ಲಿ ತೊಡಗಿಕೊಂಡಿದ್ದು, ಈ ವರೆಗೂ ಹಲವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ ಎಂದು ಅಭಿಪ್ರಾಯಪಟ್ಟರು. 

ನಂತರ ಮಾತನಾಡಿದ ಪ್ರಾಚಾರ್ಯ ಡಾ. ಕೆ. ಗಿರಿಮಲ್ಲ ಅವರು, ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆವಿಪಿ ದಣ್ಣೂರಿ ಪದವಿ ಪೂರ್ವ ಕಾಲೇಜಿನ ಶೈಕ್ಷಣಕ ಸೇವಾ ಕೊಡುಗೆ ಅಪಾರವಾದದ್ದು ಎಂದ ಹೇಳಿದರು. 

ಇದೆ ವೇಳೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

ಈ ಸಮಾರಂಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಉದಯ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಸಂಯುಕ್ತ ಪ.ಪೂ.ಕಾಲೇಜು ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಧ್ಯಕ್ಷ ಬಿ.ಎಸ್ ಮಾಲಿಪಾಟೀಲ್, ಉಪನ್ಯಾಸಕರಾದ ಧರ್ಮರಾಜ ಜವಳಿ, ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ, ಎಂಪಿಎಸ್‌ಎಚ್ ಕಾಲೇಜಿನ ಪ್ರಥಮ ದರ್ಜೆಯ ಸಹಾಯಕ ವೀರಭದ್ರಯ್ಯ ಸ್ವಾಮಿ, ಗುರೂಜಿ ಕಲಾ ಮತ್ತು ವಾಣ ಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದಣ್ಣ ಹಾಗರಗಿ, ಕೆ ವಿ ಪಿ ದಣ್ಣೂರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ವೇತಾ ಶೆಟ್ಟಿ, ಉಪನ್ಯಾಸಕರಾದ ತ್ರಿಶಲಾದೇವಿ, ಕು. ಅನುಲತಾ, ಸವಿತಾ, ಗೀತಾ ಪಾಟೀಲ್, ಶಾಂತಪ್ಪ, ಮಹೇಶ್ ಕಾಸರ, ಕುಮಾರಿ ಚೈತ್ರಾ, ಶರಣಕುಮಾರ, ಜ್ಯೋತಿ, ಅನಸೂಯಾ ಸೇವಕಿ ಮತ್ತು ವಸೀಮ್ ಮತ್ತು ಅನಿಲ ಸೇವಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.