ಯುವ ತರಣರು ಕ್ರೀಡೆಗಳನ್ನು ಮೈಗೂಡಿಸಿಕೊಂಡು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ : ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಕೀಲ್

ಯುವ ತರಣರು ಕ್ರೀಡೆಗಳನ್ನು ಮೈಗೂಡಿಸಿಕೊಂಡು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ : ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಕೀಲ್

ಯುವ ತರಣರು ಕ್ರೀಡೆಗಳನ್ನು ಮೈಗೂಡಿಸಿಕೊಂಡು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ : ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಕೀಲ್

ಚಿಂಚೋಳಿ :ಯುವ ತರಣರು ಕ್ರೀಡೆಗಳನ್ನು ಮೈಗೂಡಿಸಿಕೊಂಡು ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಕಡೆಗೆ ಗಮನಹರಿಸದೆ ಮೊಬೈಲ್ ಗಳಿಗೆ ಅಂಟಿಕೊಂಡಿದ್ದಾರೆ ಎಂದು ಕಲಬುರಗಿ ಬ್ಲಾಕ್ ಯುವ ಕಾಂಗ್ರೇಸ್ ಸಮಿತಿಯ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ್ ಹೇಳಿದರು.

ಅವರು ತಾಲೂಕಿನ ನಿಮ್ಮಾಹೊಸಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರೀಕೆಟ್ ಟುರ್ಲಮೆಂಟ್ ಉದ್ಘಾಟಿಸಿ ಮಾತನಾಡಿ, ಯುವರಕು ಹೆಚ್ಚಾಗಿ ಮೊಬೈಲ್ ಗಳಲ್ಲಿ ತಲೀನರಾಗಿ ಆರೋಗ್ಯ ಹಾಳು ಮಾಡಿಕೊಳದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಿರಲು ಕ್ರೀಡೆಗಳು ಅವಶ್ಯಕವಾಗಿದೆ. ಹೀಗಾಗಿ ಯುವ ತರುಣರು ದೈಹಿಕ ಸಾಮರ್ಥ್ಯ ಹೆಚ್ಚಿಸುವಂತಹ ಕ್ರಿಕೆಟ್ ಸೇರಿದಂತೆ ಸದೃಢಗೊಳಿಸುವಂತಹ ಇತರೆ ಸ್ವದೇಶಿ ಕ್ರೀಡೆಗಳು ದಿನನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದರು.

ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ, ಅಬ್ದುಲ್ ಬಾಶೀದ್ ಅವರು ಮಾತನಾಡಿ, ಕ್ರೀಡೆ ಗೆಲುವಿಗಾಗಿ ಆಟವಾಡದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಗಟ್ಟಿಗೊಳ್ಳಲು ಕ್ರೀಡೆಯಲ್ಲಿ ಭಾಗವಹಿಸಿ, ಮೈಗೂಡಿಸಿಕೊಳ್ಳಬೇಕೆಂದರು.

ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ನೊಂದಣಿ ಮಾಡಿಕೊಂಡಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 30 ಸಾವಿರ, ದ್ವೀತಿಯ ಸ್ಥಾನಕ್ಕೆ 15 ಸಾವಿರದೊಂದಿಗೆ ಕಪ್ ವಿತರಿಸಲಾಗುತ್ತದೆ ಎಂದು ಪಂದ್ಯ ಆಯೋಜಕರಾದ ಮಹ್ಮದ್ ಮೈನೋದ್ದಿನ್ ಹೈದ್ರಾಬಾದ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ಪುರಸಭೆ ಮಾಜಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಗ್ರಾ.ಪಂ.ಮಾಜಿ ಅಧ್ಯಕ್ಷ ಜಾಕೀರ್ ಪೋಲಕಪಳ್ಳಿ, ಸೈಯದ್ ಶಬ್ಬಿರ್,ಮಸ್ತಾನ್ ಹೊಸಳ್ಳಿ, ಇದ್ರೀಸ್ ಪಟೇಲ್, ಫಾರೂಕ್, ಖದೀರ ಪಟೇಲ್ ಪಸ್ತಾಪೂರ, ಅಸ್ಲಾಂ ಪಟೇಲ್, ನಾಗೇಶ ಗುಣಾಜಿ, ಪ್ರದೀಪಕುಮಾರ, ಮಾರುತಿ ಪೂಜಾರಿ, ರಾಘವೇಂದ್ರ, ಅಹ್ಮದ್ ಜೇವರ್ಗಿ, ಸಂಜುಕುಮಾರ, ಅಕ್ರಂ ಪಟೇಲ ಅವರು ಸೇರಿ ಕ್ರಿಕೆಟ್ ಕ್ರೀಡಾಪಟುಗಳು ಇದ್ದರು.