ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು-ಗೊಳ್ಳೆ ಶಿವಶರಣ

ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು-ಗೊಳ್ಳೆ ಶಿವಶರಣ

ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು- ಗೊಳ್ಳೆ ಶಿವಶರಣ 

ಕಲಬುರ್ಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯಲ್ಲಿ ಕಾಲೇಜಿನ ಎಂ.ಎ ಮತ್ತು ಎಂ . ಕಾಂ ಮತ್ತು ಎಂ .ಎಸ್. ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮಕ್ಕೆ ಕಲಬುರ್ಗಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಪ್ರೊ. ಗೊಳ್ಳೆ ಶಿವಶರಣ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಸಹ ಪ್ರಾಧ್ಯಾಪಕರಾದ ಡಾ. ಗಣಪತಿ ಸಿನ್ನೂರು ಅವರು ವಿದ್ಯಾರ್ಥಿಗಳಿಗೆ ಜ್ಞಾನವೇ ಮೂಲ ಶಕ್ತಿಯಾಗಬೇಕು ಹಾಗೂ ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿಯವರು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾದ ಡಾ. ಮಲ್ಲೇಶಪ್ಪ ಕುಂಬಾರ ಅವರು ಕಾಲೇಜಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಡಾ ವಿಜಯಕುಮಾರ ಸಾಲಿಮನಿ ಅವರು ಕಲಾ ವಿಭಾಗದ ಬಗ್ಗೆ ಮಾತನಾಡಿದರು. ಡಾ. ರಾಜಕುಮಾರ ಸಲಗರ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ದವಲಪ್ಪ ಬಿ. ಎಚ್ ಅವರು ವಿಜ್ಞಾನ ವಿಭಾಗವನ್ನು ಕುರಿತು ಮಾತನಾಡಿದರು. ಡಾ. ಶ್ರೀಮಂತ ಹೋಳ್ಕರ ಅವರು ವೇದಿಕೆ ಮೇಲೆ ಉಪಚಿತರಿದ್ದರು. ಡಾ. ಸವಿತಾ ಪಾಟೀಲ ಅವರು ವಾಣಿಜ್ಯ ವಿಭಾಗ ಕುರಿತು ಮಾತನಾಡಿದರು. ಡಾ. ರಬಿಯಾ ಇಪತ್ ಗ್ರಂಥಾಲಯದ ವಿಷಯವನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿಗಳಾದ 

 ಡಾ. ರವೀಂದ್ರ ಕುಮಾರ ಭಂಡಾರಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ಅಜಯ್ ಸಿಂಗ್ ತಿವಾರಿ ಅವರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಐ. ಕ್ಯೂ. ಏ. ಸಿ ಸಂಯೋಜಕರಾದ ಡಾ. ರಾಜಶೇಖರ ಮಡಿವಾಳ ಅವರು ಹಾಗೂ ಪಿ.ಜಿ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಡಾ. ಮಹಾಂತೇಶ ಸ್ವಾಮಿ ಹಾಗೂ ಸಾಂಸ್ಕೃತಿಕ ಸಂಚಾಲಕರಾದ ಡಾ. ಬಲ ಭೀಮ ಸಾಂಗ್ಲಿಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ಮೊದಲನೆಯ ಅಧಿವೇಶನಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮನೋವಿಜ್ಞಾನಿಗಳಾದ ಡಾ. ದಿಲೀಪ್ ಕುಮಾರ ಎಸ್ ನವಲೆ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶಾರದಾ ಜಾದವ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಭಾಗ್ಯಲಕ್ಷ್ಮಿ , ಡಾ. ಶಶಿಕಿರಣ ಹಂಚಿನಾಳ ಕಾರ್ಯಕ್ರಮವನ್ನು ನಿರೂಪಿಸಿದರು.

ಎರಡನೆಯ ಅಧಿವೇಶನದಲ್ಲಿ ಸ್ನಾತಕೋತ್ತರ ತರಗತಿಗಳ ಕೋರ್ಸುಗಳ ಸಂರಚನೆ ಮಾಹಿತಿಯನ್ನು ಎಲ್ಲಾ ಡೀನ್ ರವರು ನೀಡಿದರು. ಈ ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ, ಡಾ. ಮಹೇಶ, ಡಾ. ಗೀತಾ ಪಾಟೀಲ, ಡಾ. ನಾಗಪ್ಪ ಗೋಗಿ, ಡಾ . ಮಹಮ್ಮದ್ ಯೂನಿಸ್, ಡಾ . ವಿಜಯಲಕ್ಷ್ಮಿ ಪಾಟೀಲ, ಡಾ. ಮಹಾಂತೇಶ ಪಾಟೀಲ, ಡಾ . ಅರುಣ ಕುಮಾರ ಸಲಗರ, ಡಾ. ಬೆಣ್ಣೂರ, ಡಾ. ನಿವೇದಿತಾ ಸ್ವಾಮಿ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಿಬ್ಬಂದೇತರ ವರ್ಗದವರು ಹಾಗೂ ಕಾಲೇಜಿನ ಎಲ್ಲಾ ಪಿ.ಜಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ವೇತಾ ಪ್ರಾರ್ಥಿಸಿದರು ಡಾ. ಶ್ರೀಮಂತ ಹೊಳ್ಕರ್ ಅವರು ಸ್ವಾಗತಿಸಿದರು. ಡಾ. ರಾಜಶೇಖರ ಮಡಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ಕುಮಾರ ಭಂಡಾರಿ ಅವರು ವಂದಿಸಿದರು. ಡಾ. ಬಲಭೀಮ ಸಾಂಗ್ಲಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.