ವಿದ್ಯಾರ್ಥಿಗಳಿಂದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಜರುಗಿತು.

ವಿದ್ಯಾರ್ಥಿಗಳಿಂದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಜರುಗಿತು.

ವಿದ್ಯಾರ್ಥಿಗಳಿಂದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಜರುಗಿತು.

ಕಲಬುರಗಿ: ನಗರದ ವನಿತಾ ವಿಕಾಸ ಮಂಡಲ ಕಚೇರಿಯಲ್ಲಿ ವನಿತಾ ವಿಕಾಸ ಮಂಡಲದ ಆವರಣದಲ್ಲಿ ರಾಮಪ್ಯಾರಿ ಲಾಹೋಟಿ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಜರುಗಿತು.

ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅಧ್ಯಾಯಗಳ ಪಾಠವನ್ನು ಸ್ಪಷ್ಟತೆ, ಶ್ರವ್ಯತೆ ಮತ್ತು ಅರ್ಥಗ್ರಹಣದೊಂದಿಗೆ ವಾಚಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಆಕಾಶ ರಾಜಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬೀನಾ ಲಾಹೋಟಿ ಸೇರಿದಂತೆ ವನಿತಾ ವಿಕಾಸ ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮನೋಬಲ, ನೈತಿಕ ಮೌಲ್ಯಗಳು ಹಾಗೂ ಭಾಷಾ ಪ್ರಾವೀಣ್ಯತೆ ಅಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಾಯಕವಾಗುತ್ತವೆ ಎಂದು ಆಯೋಜಕರು ತಿಳಿಸಿದ್ದಾರೆ.