ಪುರಾಣ ಪ್ರವಚನಗಳಿಂದ ಭಕ್ತಿ ಹೆಚ್ಚುತ್ತದೆ ಡಾ.ಮಹಾಂತಪ್ಪ ಹಾಳಮಳ್ಳಿ
ಮಠ ಮಂದಿರಗಳಲ್ಲಿ ಪುರಾಣ ಪ್ರವಚನಗಳು ಹೇಳುವುದರಿಂದ ಮನಸ್ಸನ್ನು ಶಾಂತಗೊಳಿಸುವುದರೊಂದಿಗೆ ಭಕ್ತಿ ಭಾವನೆ ಹೆಚ್ಚಿಸುತ್ತವೆ ಎಂದು ಡಾ.ಮಹಾತಂಪ ಹಾಳಮಳ್ಳಿ ಹೇಳಿದರು.
ಅಪಜಲಪುರ ತಾಲೂಕಿನ ಸುಕ್ಷೇತ್ರ ನೀಲೂರು ಗ್ರಾಮದ ಶ್ರೀ ಬಂಗಾರ ಜಡೆ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡಿರುವ ಶ್ರೀ ಲಚ್ಯಾಣ ಸಿದ್ದಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಠ ಮಂದಿರಗಳು ಜನರ ನೆಮ್ಮದಿಯ ಮತ್ತು ಮಾರ್ಗದರ್ಶನ ಕೇಂದ್ರಗಳಾಗಿವೆ.ಹಾಗೂ ಆಧ್ಯಾತ್ಮಿಕತೆಯನ್ನು ಬಲಪಡಿಸಿ, ಮಾನಸಿಕ ಸಮಾಧಾನವನ್ನು ನೀಡುತ್ತವೆ. ಪ್ರಾರ್ಥನೆ, ಭಜನೆ, ಯಾತ್ರೆ ಮಾಡುವುದರಿಂದ ಮಕ್ಕಳಲ್ಲಿ ಭಕ್ತಿಯ ಹೆಚ್ಚುತ್ತಿದೆ ಎಂದರು.
ಶ್ರೀಮಠದ ಧರ್ಮದರ್ಶಿಗಳಾದ ಪರಮಪೂಜ್ಯ ಶ್ರೀ ವೇದಮೂರ್ತಿ ಶರಣಯ್ಯ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟಿಸಿದು, ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕರಾದ ಶರಣಗೌಡ ಪಾಟೀಲ್ ಪಾಳಾ ಮಾತನಾಡಿದರು,
ಭಗವಂತರಾವ್ ಕಾಮಜಿ, ಭೀಮಾಶಂಕರ ಪಗಡಿ, ಅಂಬಾರಾಯ ಕೋಣೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,
ವೇ. ಪಂ.ಶಿವಲಿಂಗಯ್ಯ ಸ್ವಾಮಿ ಗರೂರು ಪುರಾಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಿವಲಿಂಗಯ್ಯ ಸ್ವಾಮಿ ಚಿನ್ಮಯಗಿರಿ ಸಂಗೀತ, ಶಾಂತಕುಮಾರ ಜೇರಟಗಿ ತಬಲಾ ಸೇವೆ ಸಲ್ಲಿಸುತ್ತಿದ್ದರು.
ನೀಲೂರ ಗ್ರಾಮದ ಮುಖಂಡರಾದ ಮಲ್ಲಿನಾಥ ಹಾಳಮಳಿ, ನಾಗಪ್ಪ ಠಕ್ಕಾ ವೀರಭದ್ರಪ್ಪ ಪೊಲೀಸ್ ಪಾಟೀಲ್, ಮಲ್ಲಿನಾಥ್ ಕಾಮದಿ, ಈರಣ್ಣ ಲೋಣಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ್ ಪಾಟೀಲ್, ಸಾಯಬಣ್ಣ ಗುರನಂಜಿ,ಗಣಪತಿ ಜೋಗದನಕರ, ಶಿವಪುತ್ರ ಜಂಬಗಿ, ಭೀಮಶ ಮಾಂಗ್, ಉಪಸ್ಥಿತರಿದ್ದರು.
ಸಂದರ್ಭದಲ್ಲಿ ಗುಡೂರ ಗ್ರಾಮ ಪಂಚಾಯತಿಯ ವತಿಯಿಂದ ನೀಲೂರಿನ ಶ್ರೀಮಠದ ಆವರಣದ ಮುಖ್ಯ ರಸ್ತೆ ಬದಿಯಲ್ಲಿ ಹೈಮಾಸ್ ವಿದ್ಯುತ್ ದೀಪವನ್ನು ಅಳವಡಿಸಿ ಗ್ರಾಂ ಪಂ.ಅಧ್ಯಕ್ಷರು ಚಾಲನೆಗೊಳಿಸಿದರು. ಸಾಯಬಣ್ಣಾ ಹೂಗಾರ ನೀಲೂರ ನಿರೂಪಿಸಿದರು,