ಪಿಎಸ್ಐ ಪರಶುರಾಮ ಸಾವು ಕುರಿತು ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ಸಮತಾ ಸೈನಿಕ ದಳ ಆಗ್ರಹ
ಕಲಬುರಗಿ: ೦೬ನೇ ಆಗಸ್ಟ್ ,
ಕನಾ೯ಟಕ ಸಮತಾ ಸೈನಿಕದಳ KSSD ಕಲಬುರಗಿ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಕಾಮಿ೯ಕ ಘಟಕದ ವತಿಯಿಂದ ಯಾದಗಿರಿ ಪೋಲೀಸ ಠಾಣೆಯ ಪಿಎಸ್ಐ ಪರಶುರಾಮ ಛಲವಾದಿ ಅವರ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತದಿಂದ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ - ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಕಲಬುರಗಿ ಇವರ ಮುಖಾಂತರವಾಗಿ ಮನವಿಯನ್ನು ಸಲ್ಲಿಸಿದರು .
ಈ ಸಂದಭ೯ದಲ್ಲಿ KSSD ವಿಭಾಗೀಯ ಅದ್ಯಕ್ಷರಾದ ಸಂಜೀವ ಟಿ ಮಾಲೆ, ಜಿಲ್ಲಾ ಕಾಮಿ೯ಕ ಘಟಕದ ಅದ್ಯಕ್ಷರಾದ ವಿಜಯಕುಮಾರ್ ಉದ್ದಾ, ಸಂಘಟನೆಯ ಪ್ರಮುಖರು ಹಾಗೂ ನ್ಯಾಯವಾದಿ ಮಹಾದೇವ ನಾಟಿಕರ, ಅಪ್ಪಾರಾವ ಎಸ್ ಭಾವಿಮನಿ, ಮಲ್ಲಿಕಾಜು೯ನ ಉದಯಕರ ,ಯಶೋದಾ ರಾಠೋಡ, ಇಂದುಮತಿ ಭರತನೂರ ,ಎಂ.ಎನ್.ಸುಗಂಧಿ ಖತಲಪ್ಪ ಕಟ್ಟಿಮನಿ, ಮಲ್ಲಿಕಾಜು೯ನ ನಂದೂರ ಮತ್ತು ಹಿರಿಯ ಮುಖಂಡರಾದ ಅಮೃತರಾವ ನಾಯಕೊಡಿ, ಮಲ್ಲಿಕಾಜು೯ನ ಸಿಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.