ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ *ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ ಲೋಕಾರ್ಪಣೆ
ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ *ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ ಲೋಕಾರ್ಪಣೆ
ಯಾದಗಿರಿ:- ಇತ್ತೀಚೆಗೆ ಇಲ್ಲಿಗೆ ಸಮೀಪದ ಗುರುಮಠಕಲ್ ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡದ ಅಸ್ಮಿತೆ ಕಾರ್ಯಕ್ರಮದಲ್ಲಿ ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅವರ ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ.. ಎಂಬ ಅವರ ಹತ್ತನೇ ಪ್ರವಾಸ ಕಥನವನ್ನು ಸಾನಿಧ್ಯ ವಹಿಸಿದ ಪರಮಪೂಜ್ಯ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವೇದಿಕೆಯಲ್ಲಿದ್ದ ಡಾ.ಜೆ.ವಿ.ಪುರುಷೋತ್ತಮ ಅವರು ಹಾಗೂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಡಾ.ಎಂ.ಎಸ್.ಶಿರವಾಳ,ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಾಬುರಾಯ ದೊರೆ, ಇಂಗ್ಲಿಷ್ ಉಪನ್ಯಾಸಕರಾದ ಮಹೇಶ ಚಂದಾಪುರ ಮುಂತಾದವರು ಲೋಕಾರ್ಪಣೆ ಮಾಡಿದರು.ಲೇಖಕ ಸಿದ್ಧರಾಮ ಹೊನ್ಕಲ್ ಉಪಸ್ಥಿತರಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಈ ಹಿಂದೆ ಪ್ರಶಸ್ತಿ ಪಡೆದ ಅವರ ಪ್ರವಾಸ ಕೃತಿ ಪಂಚನದಿಗಳ ನಾಡಿನಲ್ಲಿ, ಗುಲ್ಬರ್ಗಾ ವಿವಿಯ ಪ್ರಶಸ್ತಿ ಪಡೆದ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಗಾಂಧೀಯ ನಾಡಿನಲ್ಲಿ, ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ, ಪಂಚವಟಿಯ ನೆಲದಲ್ಲಿ, ಮೂರು ದೇಶ ನೂರೊಂದು ಅನುಭವ, ಲಕ್ನೋ ಸಾಂಸ್ಕೃತಿಕಯಾನ, ಲೋಕ ಸಂಚಾರಿ, ಹೀಗೆ ವೈವಿಧ್ಯಮಯ ಪ್ರದೇಶಗಳ, ವಿದೇಶಗಳ ಪ್ರವಾಸ ಕಥನ ಬರೆದು ನಾಡಿನಲ್ಲಿ ಅತ್ಯಂತ ಹೆಚ್ಚು ಪ್ರವಾಸ ಕಥನ ಬರೆದ ಲೇಖಕರ ಸಾಲಿನಲ್ಲಿ ಇರುವ ಲೇಖಕ ಸಿದ್ಧರಾಮ ಹೊನ್ಕಲ್ ಅವರ ಹೊಸ ಕೃತಿ "ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ" ಇಂದು ತಮ್ಮ ಕಾಲೇಜಿನಲ್ಲಿ, ಅದು ಈ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಕುರಿತ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಆದದ್ದೂ ತುಂಬಾ ಸಂತೋಷ ಎಂದು ಪ್ರಾಚಾರ್ಯರಾದ ಡಾ.ಜೆ.ವಿ.ಪುರುಷೋತ್ತಮ ಅವರು ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದಿಸಿದರು.ಅವರ ಪ್ರವಾಸ ಕಥನಗಳು ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಪಠ್ಯವಾಗಿ ರೋದು ಈ ಗಿರಿ ನಾಡಿಗೆ ಸಂದ ಗೌರವ ಎಂದು ಮುಂದುವರಿದು ಕೃತಿ ಕುರಿತು ಮಾತನಾಡಿದರು.
ಪೂಜ್ಯರಾದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಿದ್ಧರಾಮ ಹೊನ್ಕಲ್ ರು ಈಗಾಗಲೇ ಎಂಬತ್ತು ಕೃತಿ ರಚಿಸಿ ಗಡಿನಾಡಿನ ಈ ಜಿಲ್ಲೆಗೆ ಹೆಸರು ತಂದಿದ್ದಾರೆ.ಅವರು ನೂರು ಕೃತಿ ತರಲಿ ಎಂದು ಶುಭಾಶೀರ್ವಾದ ಮಾಡಿ ಅಭಿನಂದಿಸಿದರು
.
