ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಸಿ - ಬಸನಗೌಡ ಮಾಲಿ ಪಾಟೀಲ್

ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ  ಮೌಲ್ಯಗಳು ಬೆಳೆಸಿ - ಬಸನಗೌಡ ಮಾಲಿ ಪಾಟೀಲ್

ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಸಿ - ಬಸನಗೌಡ ಮಾಲಿ ಪಾಟೀಲ್

ಶಹಪುರ : ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳು ಕಲಿಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.

ಶಹಾಪುರ ತಾಲೂಕಿನ ಸಗರ ಗ್ರಾಮದ ಶ್ರೀ ಚರಬಸವೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು, ಪ್ರತಿಯೊಬ್ಬರನ್ನು ಪರಸ್ಪರ ಪ್ರೀತಿಯಿಂದ ಕಂಡು,ಹಿರಿಯರನ್ನು ಗೌರವಿಸುವ ಗುಣಗಳು ಬೆಳೆಸಿಕೊಳ್ಳಬೇಕು ಅಲ್ಲದೆ ಇತರರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಪ್ರೇರೇಪಿಸಬೇಕೆಂದು ನುಡಿದರು.

ಹಿರಿಯ ಸಾಹಿತಿ ಲಿಂಗಣ್ಣ ಪಡಶೆಟ್ಟಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳಿಂದಲೇ ಉತ್ತಮ ಸಮಾಜ ನಿರ್ಮಾಣವಾಗಲು ಮತ್ತಷ್ಟು ಸಾಧ್ಯವಾಗಬೇಕಾದರೆ,ಮಕ್ಕಳು ಮನೆಯಲ್ಲಿ ದೊಡ್ಡವರನ್ನು ನೋಡಿ ಕಲಿಯುತ್ತಾರೆ,ಆದ್ದರಿಂದ ಮೊದಲು ನಾವು ಸರಿಯಾಗಿದ್ದು ಮೌಲ್ಯ ಆಧಾರಿತ ಜೀವನ ನಡೆಸಬೇಕು ಆಮೇಲೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಒಕ್ಕಲಿಗರ ಹಿರೇಮಠದ ಪರಮಪೂಜ್ಯ ಶ್ರೀ ಮರುಳ ಮಹಾಂತ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು,ಶಾಲೆಯ ಮುಖ್ಯ ಗುರುಗಳಾದ ಚಂದಣ್ಣ ಚಡಗುಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಗ್ರಾಮದ ಹಿರಿಯ ಮುಖಂಡರಾದ ಭೀಮರಾಯ ಸೇರಿ,ನಿಂಗಣ್ಣ ಮುದ್ದಾ,ಮಲ್ಲಣ್ಣವಮ್ಮಾ,ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ದೇವೇಂದ್ರಪ್ಪ ಹಡಪದ,ಸಂಗಮೇಶ ಕನಗುಂಡ, ಶಿಕ್ಷಕ ರಿಯಾಜ್ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,

ನಂತರ ಶಾಲಾ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಕಾರ್ಯಕ್ರಮವನ್ನು ಬಸವರಾಜ ನಿರೂಪಿಸಿದರು,ಅಮರಮ್ಮ ಪಾಟೀಲ್ ವರದಿ ವಾಚಿಸಿದರು ಶಿಕ್ಷಕಿ ಉಮಾಶ್ರೀ ಸ್ವಾಗತಿಸಿದರು, ಚಂದ್ರಪ್ಪ ದೊರೆ ವಂದಿಸಿದರು.