ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆ :..

ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆ :..
ಶಹಾಬಾದ : - ನಿಜ ಸುಖಿ ಹಡಪದ ಅಪ್ಪಣ್ಣನವರ 891ನೇ ಜಯಂತ್ಯುತ್ಸವವನ್ನು ತಾಲ್ಲೂಕಾದ್ಯಂತ ಜುಲೈ 10 ರಂದು ಬೆಳಗ್ಗೆ 11 ಗಂಟೆಗೆ ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ತಾಲ್ಲೂಕ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು.
ಅಪ್ಪಣ್ಣನವರ ಜಯಂತ್ಯೋತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಲೋಪ ಬಾರದಂತೆ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ ಯವರು ಅಧಿಕಾರಿಗಳಿಗೆ ಮತ್ತು ಸಮಾಜದ ಬಾಂಧವರಿಗೆ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಶಾಲಾ-ಕಾಲೇಜು, ವಿವಿಧ ಕಚೇರಿಗಳಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಅಣವೀರಪ್ಪ, ಬಸವರಾಜ ಹಳ್ಳಿ ಹಡಪದ, ದೂಳಪ್ಪ ಹಡಪದ, ಸಿದ್ರಾಮ ಹಡಪದ ಯಾಗಾಪೂರ, ನಾಗಣ್ಣ ಮುತ್ತುಕೋಡ, ಶಿವಲಿಂಗ ಹಡಪದ, ಭಾಗಣ್ಣ ದಂಡಗುಂಡ, ಶಿವಕುಮಾರ, ನೀಲಕಂಠ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.