ನರೇಗಲ್‌ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ–ಕಲೋತ್ಸವ ಯಶಸ್ವಿ

ನರೇಗಲ್‌ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ–ಕಲೋತ್ಸವ ಯಶಸ್ವಿ

ನರೇಗಲ್‌ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ–ಕಲೋತ್ಸವ ಯಶಸ್ವಿ

ನರೇಗಲ್: ಪಟ್ಟಣದ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಸಮೂಹ ಸಂಪನ್ಮೂಲ ಕೇಂದ್ರ ನರೇಗಲ್ ಹಾಗೂ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ ಮತ್ತು ಶ್ರೀ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆ ನರೇಗಲ್ ಇವರ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ/ಕಲೋತ್ಸವ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ 2025–26ರ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ಜರುಗಿತು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ನಿಂಗನಗೌಡ ಲಕ್ಕನಗೌಡ್ರ ಹಾಗೂ ಸ್ಪರ್ಧಾಳುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ಸನ್ಮಾನ್ಯ ಕೆ.ಪಿ. ಸಾಲಿಮಠ ಅವರನ್ನು ಉಭಯ ಶಾಲೆಗಳ ವತಿಯಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಉತ್ಸಾಹದಿಂದ ಭಾಗವಹಿಸಬೇಕು. ಸ್ಪರ್ಧಾಮನೋಭಾವದಿಂದ ಪಾಲ್ಗೊಳ್ಳುವ ಜೊತೆಗೆ ನಿರ್ಣಾಯಕರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಪೂಜ್ಯರು ತಪೋಗೈದ ಸ್ಥಳದಲ್ಲಿ ಗೌರವ ಸಿಕ್ಕಿರುವುದು ಸಂತಸದ ವಿಷಯ ಎಂದು ಕೆ.ಪಿ. ಸಾಲಿಮಠ ಹೇಳಿದರು.

ಶಾಲಾ ಮುಖ್ಯಸ್ಥರಾದ ಎಸ್.ಎನ್. ಹೂಲಗೇರಿ ಸ್ವಾಗತಿಸಿ, ಎ.ಟಿ. ಮಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಬಸವೇಶ್ವರ ಸಿ.ಬಿ.ಎಸ್.ಇ ಪ್ರಾಚಾರ್ಯರಾದ ಬಿ.ಎಚ್. ಬಂಡಿಹಾಳ ವಂದಿಸಿದರು. ಶಿಕ್ಷಕರಾದ ಕುಮಾರ ಹರ್ಲಾಪೂರ ಮತ್ತು ಎಸ್. ಶಿವಮೂರ್ತಿ ನಿರೂಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಬಿ.ಎಂ ಉಚಿತ ಪ್ರಸಾದನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜ್ಯೋತಿ ಬೇಲೆರಿ ಸಿ.ಆರ್.ಪಿ ನರೇಗಲ್, ಎಂ.ಬಿ. ಸಜ್ಜನ ಮುಖ್ಯಶಿಕ್ಷಕರು ಶ್ರೀ ಅನ್ನದಾನ ವಿಜಯ ಪ್ರೌಢಶಾಲೆ, ನರೇಗಲ್, ಬಿ.ಡಿ. ಯರಗೊಪ್ಪ ಅಧ್ಯಕ್ಷರು ಕ.ರಾ.ಮಾ.ಶಾ. ನೌಕರರ ಸಂಘ ಗಜೇಂದ್ರಗಡ ತಾಲೂಕು, ಶ್ವೇತಾ ಗೋವಿಂದ, ಶ್ರೀಮತಿ ಎಸ್.ಎಫ್. ಧರ್ಮಾಯತ, ಎಂ.ಎಸ್. ಅತ್ತಾರ, ಶ್ರೀಮತಿ ಆರ್.ಎಂ. ಗುಳಬಾಳ, ಕುಮಾರಿ ಜ್ಯೋತಿ ಪೂಜಾರ, ಜಗದೀಶ ಹಾಳಕೆರೆ, ಬಸವರಾಜ ಕುಂಬಾರ, ದೀಪಾ ಕಾಣಾಪುರಿ, ಗೀತಾ ಬಡಿಗೇರ, ಜ್ಯೋತಿ ಯರಗೇರಿ, ವಿಶಾಲಾಕ್ಷಿ ಯಳ್ಳುರೊಟ್ಟಿ ಸೇರಿದಂತೆ ನರೇಗಲ್ ಕ್ಲಸ್ಟರ್‌ನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ