ಶಾಮನೂರು ಶಿವಶಂಕ್ರಪ್ಪನವರ ಅಗಲಿಕೆಯಿಂದ ಸಾಮಾಜ ಬಡವ ಆಗಿದೆ : ಮೋತಕಪಳ್ಳಿ
ಶಾಮನೂರು ಶಿವಶಂಕ್ರಪ್ಪನವರ ಅಗಲಿಕೆಯಿಂದ ಸಾಮಾಜ ಬಡವ ಆಗಿದೆ : ಮೋತಕಪಳ್ಳಿ
ಚಿಂಚೋಳಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪನವರ ಅಗಲಿಕೆಯು ಇಡೀ ದೇಶದ ಲಿಂಗಾಯತ ಸಮುದಾಯಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಚಿಂಚೋಳಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಕೀಲ ಶರಣು ಪಾಟೀಲ ಮೋತಕಪಳ್ಳಿ ತಿವ್ರ ಸಂತಾಪ ವ್ಯಕ್ತಪಡಿಸಿದರು.
ಅವರು ಪಟ್ಟಣದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದಿ ನಾಯಕ ಶಾಮನೂರು ಶಿವಶಂಕ್ರಪ್ಪನವರ ಅಗಲಿಕೆ ಹಿನ್ನಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನಾಚಾರಣೆ ಮತ್ತು ಸಂತಾಪ ಸೂಚಿಸುವ ಕಾರ್ಯಕ್ರಮ ಜರುಗಿಸಿ, ಮಾತನಾಡಿದರು.
ಶಾಮನೂರು ಶಿವಶಂಕ್ರಪ್ಪನವರು ಸಮುದಾಯಕ್ಕೆ ಒಳ್ಳೆತನು ಬಯಸುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ಲಿಂಗಾಯತ ಸಮಾಜವನ್ನು ಗಟ್ಟಿ ಉರುವಂತೆ ಕಟ್ಟಿ ಬೆಳೆಸಿದ ಸಮಾಜದ ಮುತ್ಸದಿ ನಾಯಕರಾಗಿದ್ದರು. ಅವರು ಕಾಂಗ್ರೇಸ್ ಪಕ್ಷದಲ್ಲಿದ್ದರೂ ಸಮಾಜಕ್ಕೆ ಧಕ್ಕೆ ಬಂದಾಗ ಪಕ್ಷಾತೀತವಾಗಿ ಧ್ವನಿ ಎತ್ತಿ ಮಾತನಾಡುವವರಾಗಿದ್ದರು. ಇಂತಹ ಮಾಹಾನ ನಾಯಕನ ಅಗಲಿಕೆಯಿಂದ ಲಿಂಗಾಯತ್ ಸಮಾಜಜ ಬಡವ ಆಗಿದಲ್ಲದೇ, ಸಮಾಜಕ್ಕೆ ದೊಡ್ಡ ಪೆಟ್ಟುಕೊಟ್ಟಂತಾಗಿದ್ದು, ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ಕರುಣಸಲಿ ಎಂದು ಒಂದು ನಿಮಿಷ ಮೌನಾಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಪಾಲಾಪೂರ, ಯುವ ಅದ‍್ಯಕ್ಷ ವೀರೇಶ ಯಂಪಳ್ಳಿ, ನೀಲಕಂಠ ಸಿಳ್ಳಿನ್, ಗೋಪಾಲರಾವ ಕಟ್ಟಿಮನಿ, ರಾಜಶೇಖರ ಹಿತ್ತಲ್, ಮಲ್ಲಿಕಾರ್ಜುನ ಸ್ವಾಮಿ ಯಲ್ಮಡಗಿ, ಅನೀಲ ಬಿರಾದಾರ, ಜಗನ್ನಾಥ ಭೀರನಳ್ಳಿ, ಆನಂದ ಹಿತ್ತಲ್, ಚಂದ್ರಕಾಂತ ಕೆರೋಳ್ಳಿ, ಶಿವಕುಮಾರ ಸ್ವಾಮಿ, ಚೇತನ ಸುಲೇಪೇಟ, ಶಂಭುಲಿಂಗ ಶಿವಪುರಿ, ಸುರೇಶ ದೇಶಪಾಂಡೆ, ನಾರಾಯಣ ನಾಟಿಕಾರ, ವಿಜಯಕುಮಾರ ಶಾಬಾದಿ, ಭಾಗ್ಯಕುಮಾರ ಶಾರದಾ, ಶಾಂತಕುಮಾರ ಯಂಪಳ್ಳಿ, ಗುಂಡಯ್ಯಸ್ವಾಮಿ ಸೇರಿದಂತ ಸಮುದಾಯ ಮುಖಂಡರು ಭಾಗವಹಿಸಿ, ಅಗಲಿದ ನಾಯಕನಿಗೆ ಶ್ರಾಂದಾಜಲಿ ಅರ್ಪಿಸಿದರು.
