ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳಾ ಸೇವಾ ರತ್ನ ಪ್ರಶಸ್ತಿ ಪ್ರದಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳಾ ಸೇವಾ ರತ್ನ ಪ್ರಶಸ್ತಿ ಪ್ರದಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳಾ ಸೇವಾ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸಂಘದ ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಐದು ಮಹಿಳಾ ಸಾಧಕರಿಗೆ ಮಹಿಳಾ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಕರಾಗಿ ಹಿರಿಯ ಸಾಹಿತಿ ಶ್ರೀಮತಿ ಶಕುಂತಲಾ ಪಾಟೀಲ್ ಭಾಗವಹಿಸಿ ಸಾಧಕ ಮಹಿಳೆಯರನ್ನು ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಮಹಿಳಾ ನೌಕರ ಸಂಘದ ಅಧ್ಯಕ್ಷರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀಮತಿ ಉಷಾರಾಣಿ ಪಾಟೀಲ್, ಕೆಕೆಆರ್‌ಡಿಬಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀಮತಿ ಖುಷಿದ ಬಾನು, ಸಹಾಯಕ ಇಂಜಿನಿಯರ್ ಶ್ರೀಮತಿ ಗಿರಿಜಾದೇವಿ ಉಪಸ್ಥಿತರಿದ್ದರು.

ಅತಿಥಿಗಳಾಗಿ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ನಿಬಂಧಕರಾದ ಶ್ರೀ ಭೀಮಣ್ಣ ನಾಯಕ್, ಸಂಘದ ಸಲಹೆಗಾರರು ಹಾಗೂ ಸಹಾಯಕ ಇಂಜಿನಿಯರ್ ಶ್ರೀ ಶರಣಬಸಪ್ಪ ಪಾಟೀಲ್, ಸಹಾಯಕ ಇಂಜಿನಿಯರ್ ಮತ್ತು ಸಂಘದ ಸಲಹೆಗಾರ ಶ್ರೀ ಮಂಜುನಾಥ ಧೂಳಿ ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಅಧ್ಯಕ್ಷ ಶ್ರೀ ಶರಣರಾಜ್ ಚಪ್ಪರಬಂದಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಶ್ರೀಮತಿ ಶಶಿಕಲಾ ಎಸ್. ಪಾಟೀಲ್ (ಕಡಗಂಚಿ), ಶ್ರೀಮತಿ ವನಿತಾ ಚಂದ್ರಕಾಂತ್ ಗುತ್ತೇದಾರ, ಶ್ರೀಮತಿ ಮಾಲಕಣಿ, ಶ್ರೀಮತಿ ಆರಾಧನಾ ಕುಲಕರ್ಣಿ, ಡಾ. ಸೀಮಾ ದೇಶಪಾಂಡೆ ಅವರಿಗೆ ಮಹಿಳಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಸಂಜು ಮಾಲೆ, ಶ್ರೀಮತಿ ದಿವ್ಯಶ್ರೀ (ಸಹಾಯಕ ಇಂಜಿನಿಯರ್) ಸೇರಿದಂತೆ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷರು ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿತೇಂದ್ರ, ಸಹ ಕಾರ್ಯದರ್ಶಿಗಳಾದ ಶಶಿನಾಥ ಸೋನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಖ್ತರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕಿಶನ್ ಸಿಂಗ್, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ ಮಜಾರ್, ಸೈಯದ್ ಬಾಸು, ಶ್ರೀಮತಿ ಅಕ್ಷತಾ ಜಂಶೆಟ್ಟಿ ಸೇರಿದಂತೆ ನಾಲ್ಕುಚಕ್ರ ತಂಡದ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಶೀಲಾ ಕಲಬುರಗಿ, ಪೂರ್ಣಿಮಾ ಕುಲಕರ್ಣಿ, ಜಯಶ್ರೀ ಜೈನ್, ಲಿಂಗರಾಜ್ ಡಾಂಗೆ, ಸುಭಾಷ್ ಮೇತ್ರೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.