ಗದಗ ಜಿಲ್ಲೆಯ ಸಂರಕ್ಷಣೆ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕೋತ್ಸವ ಕಾರ್ಯಕ್ರಮ
ಗದಗ ಜಿಲ್ಲೆಯ ಸಂರಕ್ಷಣೆ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕೋತ್ಸವ ಕಾರ್ಯಕ್ರಮ
ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯಲ್ಲಿ ವಿಕಲಚೇತನರು ಮತ್ತು ಮಹಿಳಾ ಕುಟುಂಬಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು . ಗದಗ ಜಿಲ್ಲಾದಲ್ಲಿ ಸಂರಕ್ಷಣೆ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಚನೆ ಮಾಡಿದ್ದು ಇದು ಒಂದು ವರ್ಷದಿಂದ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು 13 ಜನ ಆಡಳಿತ ಮಂಡಳಿ ಹೊಂದಿದ್ದು ವಿಕಲಚೇತನರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ಸುಮಾರು 500 ವಿಕಲಚೇತನ ಸೇರು ಸದಸ್ಯರನ್ನು ಹೊಂದಿರುತ್ತದೆ. ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಗೊಳಿಸಲು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಜೊತೆಗೆ ನಿನ್ನೆ ಗದಗ್ ಸಂರಕ್ಷಣೆ ಕೋ ಆಪರೇಟಿವ್ ಕಚೇರಿಯಲ್ಲಿ . ನಿರ್ದೇಶಕರಾದ ಮತ್ತು ಹಿರಿಯರು ಶ್ರೀ ಚಂದ್ರಮ ಗ್ರಾಮ ಪುರೋಹಿತ್ ಹಾಗೂ ಮಂಡಳಿಯ ಎಲ್ಲಾ ಸದಸ್ಯರು ಸೇರಿ ಕೇಕ್ ಕಟ್ ಮಾಡುವುದರ ಮೂಲಕ ವಿಶ್ವವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಸಂರಕ್ಷಣೆ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶರಣಪ್ಪ ಹಾದಿಮನಿ ಹಾಗೂ ಉಪಾಧ್ಯಕ್ಷರಾದ ವಿಜಯನಗೌಡ ಪಾಟೀಲ್. ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಉಮಾ ಅ ಚಿಲಗೌಡರ್ ಇವರಿಗೆ ನಿರ್ದೇಶಕ ಮಂಡಳಿಯಿಂದ ಸನ್ಮಾನ ಮಾಡಲಾಯಿತು. ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ತರಬೇತಿ ಸಂಯೋಜಕರಾದ ಶಿವಕುಮಾರ್ ಶಿರೋಳ್ ಇವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
