ಕವಿ ಕುಲದ ಗುರು ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು

ಕವಿ ಕುಲದ ಗುರು ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು

ಕವಿ ಕುಲದ ಗುರು ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು

ಕಮಲನಗರ ; ತಾಲೂಕಿನ ಟೋಕರಿ ಕೋಳಿ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಉತ್ಸವ ನಿಮಿತ್ಯ ಮಹರ್ಷಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತ್ತು.

ಪಿ. ಎಸ್. ಐ ಚಂದ್ರಶೇಖರ ನಿರ್ಣೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಮಪ್ರಭು ವೃತದಿಂದ ಹೋರಾಟ ಮೆರವಣಿಗೆಯು ಪ್ರವಾಸಿ ಮಂದಿರ, ಸರಕಾರಿ ಕನ್ಯಾ ಶಾಲೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ ಕಾರ್ಯಲಯಕ್ಕೆ ಬಂದು ತಲುಪಿತು.

ಈ ಸಂದರ್ಭದಲ್ಲಿ ಅಮಿತ ಕುಮಾರ್ ಕುಲಕರ್ಣಿ ಮಾತನಾಡಿ ವಾಲ್ಮೀಕಿ ರಾಮಾಯಣ ಗ್ರಂಥ ಕೃರ್ತು. ಮಹರ್ಷಿ ಮಹಾನ ಸಂತರು. ಅವರ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಬೋಧನೆಗಳಿಗೆ ವಿಶ್ವವೇ ಗೌರವಿಸುತ್ತದೆ. ರಾಮಾಯಣದಲ್ಲಿ ರಾಮ ಮತ್ತು ಸೀತೆ ನೈಜ ಕಥೆಗಳಿಗೆ 

ಜೀವಂತಿಕೆ ತುಂಬಿ ಸತ್ಯ ಪರಿಪಾಲನೆ ಮತ್ತು ಧರ್ಮದ ಸಿದ್ಧಾಂತಗಳನ್ನು ಎತ್ತಿ ಹಿಡಿದ ಮಹಾನ್ ಋಷಿಗಳಲ್ಲಿ ವಾಲ್ಮೀಕಿ ಒಬ್ಬರು.

ಗ್ರೇಡ್ 2 ತಹಸೀಲ್ದಾರ್ ರಮೇಶ್ ಪೆದ್ದೆ, ಉಪತಹಸೀಲ್ದಾರ್ ಗೋಪಾಲಕೃಷ್ಣ ,ಜಿ .ಪಂ. ಮಾಜಿ ಅಧ್ಯಕ್ಷ ಧೂಳಪ್ಪ ಸುರಂಗೆ, ಹಣಮಂತರಾವ ಟೋಕರೆ, ಉಮಾಕಾಂತ ಬೆಳಕಟ್ಟಿ, ಬಾಲಾಜಿ ಟೋಕರೆ,ತಾನಾಜಿ ಬೆಳಕಟ್ಟೆ,ಲಕ್ಷೀಣ ಗಾದಗೆ, ಸುಭಾಷ್ ಟೋಕರೆ,ಸಂತೋಷ ನಿಟ್ಟೂರೆ,ದೀಪಕ ಟೋಕರೆ, ಮಹೇಶ್ ಪಾಟೀಲ್,ಪವನ ಖೇಳಗೆ,ಗುಂಡಪ್ಪಾ ಶೆಂಬೆಳ್ಳೆ,ಧುಳಪ್ಪಾ ನಿಟ್ಟೂರೆ, ಸಂತೋಷ್ ಟೋಕರೆ, ವೈಜಿನಾಥರಾವ ಕೋಳಿ, ಬಾಬುರಾವ,ಕ್ಯಾದೆಪ್ಪಾ ಮತ್ತು ಇತರರಿದ್ದರು.