ದೇಶ ಕಾಯುವ ಯೋಧರ,ಅನ್ನ ನೀಡುವ ರೈತರ ಬದುಕು ಬಂಗಾರವಾಗಲಿ: ಶ್ರೀ ಗೋಸ್ವಾಮಿ ನಾಗರಾಜ

ದೇಶ ಕಾಯುವ ಯೋಧರ,ಅನ್ನ ನೀಡುವ ರೈತರ ಬದುಕು ಬಂಗಾರವಾಗಲಿ: ಶ್ರೀ ಗೋಸ್ವಾಮಿ ನಾಗರಾಜ 

ಬಳ್ಳಾರಿ : ದೇಶವನ್ನು ಕಾಯುವ ಯೋಧರು ಮತ್ತು ಅನ್ನವನ್ನು ಉತ್ಪಾದಿಸುವ ರೈತರ ತ್ಯಾಗ ಮತ್ತು ಶ್ರಮಕ್ಕೆ ಸದಾ ಗೌರವವಿರಬೇಕು. ಅವರ ಜೀವನ ಸುಖ, ಸಂತೋಷ ನೆಮ್ಮದಿ ಹಾಗೂ ಆರೋಗ್ಯವಂತರಾಗಲಿ ಅವರ ಬದುಕು ಸಮೃದ್ಧಿಯಾಗಲಿ ಎಂದು ಶ್ರೀ ಮಠದ ಗುರು ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳು ಹೇಳಿದರು 

ಫೆ.10: ನಗರದ ಶ್ರೀ ಕನಕದುರ್ಗಮ್ಮದೇವಸ್ಥಾನದಲ್ಲಿ 9ರಂದು ಭಾನುವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಜಾಲಿಬೆಂಚಿ ಗ್ರಾಮದ ಶ್ರೀ ಕೋದಂಡರಾಮ ದೇವಸ್ಥಾನದವರೆಗೆ ಇದೇ 5 ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.

ಪಾದಯಾತ್ರೆಯಲ್ಲಿ ನೂರಾರು ಭಕ್ತಾದಿಗಳೊಂದಿಗೆ ಭಜನೆ, ಡೋಳ್ಳು , ವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಗ್ರಾಮದೊಳಗೆ ತೆರಳಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

2025 ನೇ ವರ್ಷದ ಕ್ಯಾಲೆಂಡ‌ ಬಿಡುಗಡೆ ಮಾಡಿದರು ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳವರು ಗ್ರಾಮಗಳಲ್ಲಿ ಸಕಲ ಕಾಲಕ್ಕೂ ಮಳೆ ಬೆಳೆ ಚೆನ್ನಾಗಿ ಬಂದು ರೈತರು ಎಲ್ಲೆಡೆ ಸಂತೋಷದಿಂದ ಇದ್ದು ಜನರು ಸಂತೋಷದಿಂದ ಬದುಕಲಿ ಎಂದರು ಜಾಲಿಬೆಂಚಿ ಗ್ರಾಮವನ್ನು ಬಂಗಾರದ ಬೆಂಜೆ ಮಾಡುತ್ತೇನೆ ಎಂದು ಹೇಳಿದರು.

ಪ್ರತಿ ವರ್ಷ ಪಾದಯಾತ್ರೆ ಮೂಲಕ ಗ್ರಾಮಕ್ಕೆ ಆಗಮಿಸಿ ಸುತ್ತಮುತ್ತಲಿನಿಂದ ಗ್ರಾಮಗಳಿಂದ ಆಗಮಿಸುವ ಭಕ್ತಾದಿಗಳಿಗೆ ಆಶೀರ್ವದಿಸಿದರು. ನಾಲವಾರದ ಶ್ರೀ ಕೋರಿಸಿದ್ದೇಶ್ವರ ಶ್ರೀ ಮಠದ ಪರಮಪೂಜ್ಯ ಶ್ರೀ ಡಾ.ಸಿದ್ದತೋಟೇಂದ್ರ ಶಿವಾಚಾರ್ಯರರ ಭಾವಚಿತ್ರದೊಂದಿಗೆ ಪಾದಯಾತ್ರೆ ಕೈಗೊಂಡರು 

ಈ ಸಂದರ್ಭದಲ್ಲಿ ಸೈಯದ್ ಮಾನಸ ವಲಿ ಖಾದ್ರಿ ಹುಳುಕಲ್ಲು, ಸೈಯದ್ ಅಜರತ್ ಮೋಷನ್ ಖಾದ್ರಿ, ಮುತವಲ್ಲಿ ಸಜ್ಜದ ನಾಸಿನ್, ಹಜರತ್, ನರೇಂದ್ರಸ್ವಾಮಿ ಬಳ್ಳಾರಿ. ಬೆಂಗಳೂರು ಶಿವಲಿಂಗ , ಮಾಂತೇಶ ಉಲ್ಲೂರು, ತೆಕ್ಕಲಕೋಟೆ ಆಂಜಿನಪ್ಪ ಶರಣರು, ಹಾಗೂ ಊರಿನ ಟಿ.ಮಲ್ಲಿಕಾರ್ಜುನ, ಶೇಖಣ್ಣ, ರಾಧಾ ಗೌಡ, ತೋರಣಗಲ್ಲು ಗೋವಿಂದಪ್ಪ, ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.