ಗಾಂಧೀಜಿಯ ತತ್ವಾದರ್ಷಗಳು ಸಾರ್ವಕಾಲಿಕ ಶ್ರೇಷ್ಠ - ರವಿ ಹಿರೇಮಠ.

ಗಾಂಧೀಜಿಯ ತತ್ವಾದರ್ಷಗಳು ಸಾರ್ವಕಾಲಿಕ ಶ್ರೇಷ್ಠ - ರವಿ ಹಿರೇಮಠ.

ಗಾಂಧೀಜಿಯ ತತ್ವಾದರ್ಷಗಳು ಸಾರ್ವಕಾಲಿಕ ಶ್ರೇಷ್ಠ - ರವಿ ಹಿರೇಮಠ.

ಶಹಪುರ : ಸತ್ಯವನ್ನು ಗೆಲ್ಲುವುದು ಅಷ್ಟ ಸುಲಭದ ಮಾತಲ್ಲ,ಸತ್ಯವನ್ನು ಸಾಧಿಸಲು ಅಹಿಂಸೆ ಅತ್ಯಗತ್ಯ ಹಾಗೂ ದ್ವೇಷಿಸುವವರನ್ನು ಪ್ರೀತಿಸುವ ಮಾರ್ಗ ಮಹಾತ್ಮ ಗಾಂಧೀಜಿಯವರಿಂದ ಮಾತ್ರ ಸಾಧ್ಯ ಎಂದು ಹಿರಿಯ ಪತ್ರಕರ್ತ,ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ರವಿ ಹಿರೇಮಠ ಹೇಳಿದರು.

ನಗರದ ದೇಶಮುಖ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ಪ್ರತಿಷ್ಠಾನದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರುಗಳ ಸಹಯೋಗದಲ್ಲಿ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಗಾಂಧಿ ಸ್ಮರಣೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು,ಸತ್ಯಾಗ್ರಹದ ಮೂಲಕ ವ್ಯಕ್ತಿಗಳು ತಮ್ಮ ಆಧ್ಯಾತ್ಮಿಕ ವಿಕಾಸ ಸಾಧಿಸಬಹುದು ಎಂದು ನುಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಶಿವರಾಜ ದೇಶಮುಖ ಮಾತನಾಡಿ ಸತ್ಯ ಅನ್ವೇಷಣೆಯಲ್ಲಿ ತೊಡಗಿದ್ದವರು,ಅವರ ಪರಿಶುದ್ಧ ಜೀವನ,ತ್ಯಾಗ,ಸ್ವದೇಶಿ ಮತ್ತು ಶ್ರಮಕ್ಕೆ ಹೆಚ್ಚು ಒತ್ತು ನೀಡುವ ಮೂಲ ಮಂತ್ರ ಗಾಂಧೀಜಿಯವರದಾಗಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರನಾಥ್ ಚೌಧರಿ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ವೀರಭದ್ರಪ್ಪ ಆನೆಗುಂದಿ,ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಣುಕಾ,ರಾಜೇಶ್ವರಿ,ಯಾದಗಿರಿ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಚನ್ನಬಸಪ್ಪ ಕೆ.ಎಸ್.ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪಂಡಿತ ಟೋಕಪೂರ ಮತ್ತು ತಂಡ ಸುಗಮ ಸಂಗೀತ,ಬೇಬಿ ರಾಠೋಡ ಮತ್ತು ತಂಡ ಬಂಜಾರು ನೃತ್ಯ, ಮನೋಹರ್ ವಿಶ್ವಕರ್ಮ ಮತ್ತು ತಂಡ ಜಾನಪದ ಸಂಗೀತ,ಸವಿತಾ ಕಳಸದ ಸುಗಮ ಸಂಗೀತ,ಲಕ್ಷ್ಮಿ ಕುಂಬಾರ ಮತ್ತು ತಂಡ ಸಮೂಹ ನೃತ್ಯಗಳ ಜೊತೆಗೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ತಿಪ್ಪಣ್ಣ ಕ್ಯಾತನಾಳ ನಿರೂಪಿಸಿದರು ವೀರೇಶ್ ಉಳ್ಳಿ ಸ್ವಾಗತಿಸಿದರು,ದೇವರಾಜ್ ಬೀರನೂರ ಸ್ವಾಗತಿಸಿದರು ಗುರುರಾಜ ಸಜ್ಜನ್ ವಂದಿಸಿದರು.