ನಿವೃತ್ತಿ ಜೀವನ ಸುಖಮಯವಾಗಲಿ. ವಿಶ್ವನಾಥ ಡೋಣಗಾಪೂರೆ

ನಿವೃತ್ತಿ ಜೀವನ ಸುಖಮಯವಾಗಲಿ. ವಿಶ್ವನಾಥ ಡೋಣಗಾಪೂರೆ

ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶಿವಕಾಂತ ಹಣಮಶೇಟ್ಟೆ ನಿವೃತ್ತಿ ಸಮಾರಂಭ.

ನಿವೃತ್ತಿ ಜೀವನ ಸುಖಮಯವಾಗಲಿ. ವಿಶ್ವನಾಥ ಡೋಣಗಾಪೂರೆ

ಕಮಲನಗರ : ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ನಿವೃತ್ತಿಯಾಗುವ ಮುಖ್ಯ ಶಿಕ್ಷಕ ಶಿವಕಾಂತ ಹಣಮಶೇಟ್ಟೆ ಅವರ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ವಿಶ್ವನಾಥ ಡೋಣಗಾಪೂರೆ ನುಡಿದರು.

ತಾಲೂಕಿನ ಖತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಮುಖ್ಯ ಶಿಕ್ಷಕ ಶಿವಕಾಂತ ಹಣಮಶೇಟ್ಟೆ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ನಿವೃತ್ತಿ ಹೊಂದುತ್ತಿರುವ ಶಿವಕಾಂತ ಹಣಮಶೇಟ್ಟೆ ಅವರ ಬದುಕು ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಶಾಲೆಯ ಶಿಕ್ಷಕಿ ಶೈಲಶ್ರೀ ಮಾತನಾಡಿ, ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಅಪಾರ ಜ್ಞಾನ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಯುವ ಪೀಳಿಗೆಯನ್ನು ಸುಸಂಸ್ಕøತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.

ಮುಖ್ಯಶಿಕ್ಷಕ ಶಿವಕಾಂತ ಹಣಮಶೇಟ್ಟೆ ಅವರು ಅತ್ಯಂತ ಶಿಸ್ತಿನ ಶಿಕ್ಷಕರು, ಶಿವಕಾಂತ ಸರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು, ಉತ್ತಮ ರೀತಿಯಿಂದ ಕೆಲಸ ಮಾಡಿ ಎಂತಹ ದೊಡ್ಡ ಸಮಸ್ಯೆ ಇದ್ದರೂ ಕೂಡಾ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯ ಅವರಲ್ಲಿತ್ತು. 1994 ರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಅಲ್ಲದೇ ಅವರು ಕಲಿಸಿದ ಮಕ್ಕಳು ಕೂಡಾ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ ಎಂದರು.ಶಿಕ್ಷಕ ಸಚಿನ ಮಾತನಾಡಿದರು.

ಸ.ಪ್ರೌ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಬಿರಾದಾರ, ನಿವೃತ್ತ ಶಿಕ್ಷಕ ಸೂರ್ಯಕಾಂತ ಧರಣೆ, ಸೂರ್ಯಕಾಂತ ಬೇಂದ್ರೆ, ಎಸ್‍ಡಿಎಮ್‍ಸಿ ಮಾಜಿ ಅಧ್ಯಕ್ಷ ಸಪ್ನಾ ಚಿವಟೆ, ನಾಗೇಶ ಹರಪಾಳೆ ಹಾಗೂ ಗ್ರಾಮ ಗಣ್ಯರು, ಶಿಕ್ಷಕರು, ಮಕ್ಕಳು ಇದ್ದರು.

ಶರಣಬಸಪ್ಪಾ ಸಲಗಾರ ನಿರೂಪಿಸಿದರು, ಅನುಪ ನೀಲಂಗೆ ವಂದಿಸಿದರು.