ಇಂದಿರಾ ಕ್ಯಾಂಟೀನ್ ಉದ್ಘಾಟನೆ : ಶುದ್ಧತೆಯ ಪಾಲನೆಗೆ ಸಚಿವ ಪ್ರಿಯಾಂಕ್ ಖರ್ಗೆ, ಕಡ್ಡಾಯ ಸೂಚನೆ

ಇಂದಿರಾ ಕ್ಯಾಂಟೀನ್ ಉದ್ಘಾಟನೆ : ಶುದ್ಧತೆಯ ಪಾಲನೆಗೆ  ಸಚಿವ ಪ್ರಿಯಾಂಕ್ ಖರ್ಗೆ, ಕಡ್ಡಾಯ ಸೂಚನೆ

ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಶುತಿತ್ವ ಕಾಪಾಡಿಕೊಳ್ಳುವಂತೆ ಐಟಿಬಿಟಿ ಸಚಿವರು ಸೂಚನೆ.

ಕಲಬುರಗಿ :ಡಿಸೆಂಬರ್ 6 ( ಕಲ್ಯಾಣ ಕಹಳೆ ವಾರ್ತೆ) ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ನಗರ ಅಭಿವೃದ್ದಿ ಕೋಶ ಅಡಿಯಲ್ಲಿ ಕಲಬುರಗಿ ನಗರದ ಎಮ್ ಎಸ್ ಕೆ ಮಿಲ್ಲನ ಕಣ್ಣಿ ಮಾರುಕಟ್ಟೆ ಬಳಿ ನೂತನವಾಗಿ ಸ್ಥಾಪಿಸಲಾಗಿರುವ ' ಇಂದಿರಾ ಕ್ಯಾಂಟೀನ್ ' ನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಬಡ , ಮಧ್ಯಮ ವರ್ಗದ ಜನರು, ಕೃಷಿ ಕೂಲಿ- ಕಾರ್ಮಿಕರು ಸೇರಿದಂತೆ ಎಲ್ಲರೂ ಅತಿ ಕಡಿಮೆ ಹಣವನ್ನು ಪಾವತಿಸಿ ಊಟ ಮಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಸ್ಥಾಪಿಸಿದೆ ಎಂದು ಹೇಳಿದರು.

ಕಲಬುರಗಿ ನಗರದ ಜನದಟ್ಟಣೆಯ ಪ್ರದೇಶದ ಕಣ್ಣಿ ಮಾರುಕಟ್ಟೆ ಬಳಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಶುಚಿತ್ವ ಕಾಪಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದ ಸಚಿವರು, ರುಚಿಕರವಾದ ಆಹಾರ ತಯಾರಿಸಿ ಸಾರ್ವಜನಿಕರಿಗೆ ಒದಗಿಸಬೇಕು. ನಮ್ಮ ಯೋಜನೆಯ ಲಾಭ ಎಲ್ಲರೂ ಪಡೆಯುವಂತಾಗಬೇಕು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಿರಂತರ ಕ್ರಮವಹಿಸಬೇಕು ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮ ಅಧ್ಯಕ್ಷೆ ಕನಿಜಾ ಫಾತಿಮಾ, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, , ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ಜಾನೆ, ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನೂಮ್, ಜಿಲ್ಲಾ ಪಂಚಾಯತ ಸಿಇಓ ಭವರ್ ಸಿಂಗ್ ಮಿನಾ, ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ ಶಿಂಧೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಮ್ ಖಾನ್ ಸೇರಿದಂತೆ ಸೇಡಂ ಸಹಾಯಕ ಆಯುಕ್ತ ಪ್ರಭರೆಡ್ಡಿ ಡಿಯುಡಿಸಿ ಯೋಜನಾ ನಿರ್ದೇಶಕ ಮುನ್ನ ವರ್ ದೌಲ್ , ಹಲವರು ಇದ್ದರು.