ಪ್ರತಿಯೊಬ್ಬರೂ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಿ : ರವಿಗೌಡ
ಪ್ರತಿಯೊಬ್ಬರೂ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಿ : ರವಿಗೌಡ
ಬ್ಯಾoಕ್ ಗಳು ನೀಡುವ ಸೌಲಭ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಲಬುರಗಿ ಲೀಡ್ ಬ್ಯಾoಕ್ ವ್ಯವಸ್ಥಾಪಕರಾದ ರವಿಗೌಡ ಅವರು ಹೇಳಿದರು. ಅವರು ರಾವೂರ ಗ್ರಾಮದದಲ್ಲಿ ಎಸ್. ಬಿ. ಐ ಬ್ಯಾoಕ ವತಿಯಿಂದ ನಡೆದ ವಿಮೆ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನನಿತ್ಯದ ಜೀವನದಲ್ಲಿ ಸಾವುಗಳು ಸಂಭವಿಸುತ್ತಿರುವುದನ್ನು ನಾವು ನೀಡುತ್ತಿದ್ದೇವೆ. ಸಾವು ಅನಿರೀಕ್ಷಿತ ಇಂತಹ ಸಂದರ್ಭದಲ್ಲಿ ಬ್ಯಾoಕ್ ಗಳನ್ನು ಖಾತೆಗಳನ್ನು ತೆಗೆದು ವಿಮೆ ಮಾಡಿಸಿದ್ದರೆ ಜೀವ ಕಳೆದುಕೊಂಡ ನಾಮಿನಿ ಅವರಿಗೆ ವಿಮೆಯ ಹಣ ಬರುವುದರಿಂದ ಅವರ ಜೀವನ ಕ್ಕೆ ಭದ್ರತೆ ಸಿಗುತ್ತದೆ ಮತ್ತು ಜೀವನ ಆರ್ಥಿಕವಾಗಿ ಸುಗಮ ರೀತಿಯಲ್ಲಿ ಸಾಗುತ್ತದೆ.ಆದ್ದರಿಂದ ಪ್ರತಿಯೊಬ್ಬರೂ ಸರಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ತಾಪುರ ಎಸ್ ಏಫ್ ಎಲ್ ರೇಖಾ ತಳವಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. ವಿಮೆ ಫಲಾನುಭವಿಗಳಾದ ರಾವೂರ ಗ್ರಾಮದ ಶಿವಲೀಲಾ ಗಂಡ ಶಿವಯೋಗಿ ಮತ್ತು ಗಾಧಿನಗರದ ಬಸಮ್ಮ ಗೋವಿಂದ ಅವರಿಗೆ 2ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು.
ವೇದಿಕೆ ಮೇಲೆ ರಾವೂರ ಎಸ್. ಬಿ. ಐ ಬ್ಯಾoಕ್ ವ್ಯವಸ್ಥಾಪಕ ಗೋಪಿಕೃಷ್ಣ ರಾಠೋಡ, ಗ್ರಾ.ಪ o ಅಧ್ಯಕ್ಷೆ ಸುಮಿತ್ರಾ ತುಮಕೂರ. ಗ್ರಾಮದ ಮುಖಂಡರಾದ ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ಚೇತನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶರಣು ಜ್ಯೋತಿ, ಮೋಹನ್ ಸೂರೇ, ಜಾಕೀರ್ ಹುಸೇನ್, ಹಸನ್ ಪಟೇಲ್, ಬಸವರಾಜ ತೋಟದ್, ಗುರುರಾಜ ವೈಷ್ಣವ, ಬಸವರಾಜ ಪರಿಟ್, ಸದಾಶಿವ ಜ್ಯೋತಿ,ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಿವಲೀಲಾ ಹಳ್ಳಿ ನಿರೂಪಿಸಿ ವಂದಿಸಿದರು.
