ಉಡುಪಿ|| ಡಿ.6ರಂದು 'ಕರಾವಳಿ ವಿಕಾಸ ಸಂಭ್ರಮ '
ಉಡುಪಿ|| ಡಿ.6ರಂದು 'ಕರಾವಳಿ ವಿಕಾಸ ಸಂಭ್ರಮ
ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು 'ವಿಕಾಸ'- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ಆರರಂದು ಬೆಳಿಗ್ಗೆ 9:30 ರಿಂದ ಸಂಜೆ 5 .00ರವರೆಗೆ ಉಡುಪಿ ಕೃಷ್ಣ ಮಠದ ರಾಜಾಂಗಣ ಎದುರಿನ ಗೀತಾ ಮಂದಿರದ 5ನೇ ಮಹಡಿಯ ಪುತ್ತಿಗೆ ನರಸಿಂಹ ಸಭಾಭವನದಲ್ಲಿ 'ಕರಾವಳಿ ವಿಕಾಸ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿದೆ .
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ ತೀರ್ಥ ಶ್ರೀಪಾದರು ಮತ್ತು ಕಿರಿಯಪಟ್ಟ ಶ್ರೀ ಸುಶ್ರೀoದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ .ಕುಂದಾಪುರ ಶಾಸಕ ಕಿರಣ್ ಕೊಡ್ಗಿ ,ಮಂಗಳೂರು ನಗರ ಶಾಸಕ ವೇದವ್ಯಾಸ ಕಾಮತ್ , ಉಡುಪಿ ಹಾಲಿ ಶಾಸಕ ಯಶಪಾಲ್ ಸುವರ್ಣ , ಮಾಜಿ ಶಾಸಕ ರಘುಪತಿ ಭಟ್ , ಮಾಜಿ ಎಂಎಲ್ ಸಿ ಕ್ಯಾ .ಗಣೇಶ ಕರ್ಣಿಕ್ , ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ರಾಘವೇಂದ್ರ ಭಟ್, ಉದ್ಯಮಿ ರಘುನಾಥ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು .
ವೈದಿಕ ವಿಜ್ಞಾನ ಜ್ಯೋತಿಷಿ ಡಾ .ಪ್ರಸನ್ನಾಚಾರ್ಯ ಎಸ್ ಕಟ್ಟಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಪತ್ರಕರ್ತರಾದ ಪ್ರಕಾಶ್ ಇಳಂತಿಲ , ಜಿತೇಂದ್ರ ಕುಂದೇಶ್ವರ ಉಪಸ್ಥಿತಿಯಲ್ಲಿ "ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯ ವೈಭವ"-ಶ್ರೀಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರು: ಸಂಪಾದಕರು - ಓಂಪ್ರಕಾಶ್ ಭಟ್ ಉಡುಪಿ ಕೃತಿಯನ್ನು,ಇಂದಿರಾ ನಾಡಿಗ್ ರವರ 'ಹಸಿಗನಸು ' ಕಾದಂಬರಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶೀ ಡಾ.ಹರಿಕೃಷ್ಣ ಪುನರೂರು ,ಆದಿತ್ಯಪ್ರಸಾದ್ ರವರ 'ಗೋಪಾಳದಿಂದ ನೇಪಾಳದಡೆಗೆ' ಪ್ರವಾಸ ಕಥನವನ್ನು ಯುಗಪುರುಷ ಪತ್ರಿಕೆ ಸಂಪಾದಕ ಭುವನಾಭಿರಾಮ ಉಡುಪ ರವರು ಮತ್ತು ಆಸ್ಟ್ರೇಲಿಯಾದ ಉಮೇಶ್ ದತ್ ಬರೆದಿರುವ 'ದಿ ಅಸ್ಟ್ರೋ ಕೊಡೆಸ್ಕ್ಸ್' ಹಿಂದೂ ಧರ್ಮದ ಆಚರಣೆಗಳಿಗೆ ವೈಜ್ಞಾನಿಕ ತಳಹದಿ ಸೂಚಿಸುವ ಸಂಶೋಧನಾ ಪುಸ್ತಕವನ್ನು ಮಂಗಳೂರು ನಗರ ಎಸಿಪಿ ಗೀತಾ ಕುಲಕರ್ಣಿ ಬಿಡುಗಡೆ ಗೊಳಿಸುವರು .
ಕಳೆದ 40 ವರ್ಷಗಳಿಂದ ಶ್ರೀ ಪುತ್ತಿಗೆ ಮಠದಿಂದ ಪ್ರಕಟವಾಗುತ್ತಿರುವ ಆಧ್ಯಾತ್ಮಿಕ ಮಾಸಪತ್ರಿಕೆ ಸುಗುಣಮಾಲ ನಡೆದು ಬಂದ ದಾರಿಯ ಕುರಿತು ಸಂಪಾದಕೀಯ ಸಲಹಾ ಮಂಡಳಿ ಸದಸ್ಯ ಓಂ ಪ್ರಕಾಶ್ ಭಟ್ ಮಾತನಾಡುವರು ,ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಎಂ ಪ್ರಸನ್ನ ಆಚಾರ್ಯ , ಸಂಪಾದಕ ಶ್ರೀ ಮಹಿತೋಷ ಆಚಾರ್ಯ ಉಪಸ್ಥಿತರಿರುವರು .
'ವಿಕಾಸ ಉಡುಪಿ ಶ್ರೀಕೃಷ್ಣ ಸದ್ಭಾವನ ಪ್ರಶಸ್ತಿ'ಯನ್ನು ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಗಾಯತ್ರಿ ಚಂದ್ರಶೇಖರ್ , ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಬಿ.ಎಸ್ ಶಿವಕುಮಾರ್, ಉದ್ಯಮಿ ಅಗರಿ ರಾಘವೇಂದ್ರ ರಾವ್ ಅವರಿಗೆ ನೀಡಿ ಗೌರವಿಸಲಾಗುವುದು .
ವೈದ್ಯಲೋಕ - ಹೆಲ್ತ್ ವಿಷನ್ ಪ್ರಾಯೋಜಿತ 'ವಿಕಾಸ ವೈದ್ಯರತ್ನ 'ಪ್ರಶಸ್ತಿಯನ್ನು ಡಾ. ಆನಂದ ಶೆದ್ಬಳಾ ರವರಿಗೆ, ಸಂಪದ ಸಾಲು ಪ್ರಾಯೋಜಿತ 'ವಿಕಾಸ ಸಂಗೀತ ರತ್ನ ' ಪ್ರಶಸ್ತಿಯನ್ನು ವಿದುಷಿ ಪವನಾ ಬಿ ಆಚಾರ್ ರವರಿಗೆ ನೀಡಿ ಪುರಸ್ಕರಿಸಲಾಗುವುದು .
'ಮಾಧ್ಯಮ ಲೋಕದ ಸವಾಲುಗಳು ' ಕುರಿತು ವಿಚಾರಗೋಷ್ಠಿಯಲ್ಲಿ ಮಣಿಪಾಲ್ ಮಾಹೆಯ ಪ್ರೊ. ಸತ್ಯಬೋಧ ಜೋಶಿ ,ಹಿರಿಯ ಪತ್ರಕರ್ತೆ ಡಾ .ಆಶಾ ಕೃಷ್ಣಸ್ವಾಮಿ ಉದಯವಾಣಿ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಎಸ್ ಪಡ್ರೆ ಭಾಗವಹಿಸಿ ವಿಚಾರ ಮಂಡಿಸುವರು . ಮಾಹೆಯ ಪತ್ರಿಕೋದ್ಯಮ ವಿಭಾಗದ ಶ್ರೀರಾಜ್ ಗುಡಿ ನಿರ್ವಹಣೆ ಮಾಡುವರು.
ಹಲವಾರು ಹಿರಿಯ ಪತ್ರಕರ್ತರ ಸ್ಮರಣಾರ್ಥ ನೀಡುವ 'ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ'ಗೆ ಈ ಕೆಳಗಿನ ಸಾಧಕರು ಭಾಜನರಾಗಿದ್ದಾರೆ .ಮಂಗಳೂರಿನ ಕಲ್ಕೂರ ಜಾಹೀರಾತು ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಕುಮಾರ್ ಕಲ್ಕೂರ ರವರು ಸನ್ಮಾನಿಸುವರು .
ಕೀರ್ತಿ ಶೇಷ ಪಾ.ವೆಂ ಆಚಾರ್ಯ ಸ್ಮರಣಾರ್ಥ - ಕಿರಣ್ ಮಂಜನ ಬೈಲು ,ಸಂಯುಕ್ತ ಕರ್ನಾಟಕ
ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ -ಡಾ .ಮಂದಾರ ರಾಜೇಶ ಭಟ್ ,ಮೂಡುಬಿದರೆ
ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ - ಸಾಂತೂರು ಶ್ರೀನಿವಾಸ ತಂತ್ರಿ ,
ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ -ಚಂದ್ರಶೇಖರ ಕುಳಮರ್ವ, ಉಪಯುಕ್ತ ನ್ಯೂಸ್ ,ಮಂಗಳೂರು
ಮಾಧವ ಆಚಾರ್ಯ ಸ್ಮರಣಾರ್ಥ - ಆರ್ ಸಿ ಭಟ್ ,ಸುಳ್ಯ ,ವಿಜಯ ಕರ್ನಾಟಕ
ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ - ವೆಂಕಟೇಶ ಪೈ ,ಸಂಜೆ ಪ್ರಭ
ದಾಮೋದರ ಐತಾಳ ಸ್ವರಣಾರ್ಥ - ಶ್ವೇತ ಇಂದಾಜೆ ,ಆಕಾಶವಾಣಿ ಮಂಗಳೂರು
ಕೊಡೆತ್ತೂರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ- ಶಾಮ್ ಹೆಬ್ಬಾರ್, ಬೆಂಗಳೂರು ವೈರ್
ಈಶ್ವರಯ್ಯ ಅನಂತಪುರ - ಶ್ರೀಕೃಷ್ಣ ಭಟ್ ಮಾಯ್ಲೆಂಗಿ - ವೈದ್ಯಲೋಕ ಮತ್ತು ಹೆಲ್ತ್ ವಿಷನ್
ಮಂಜುನಾಥ ಭಟ್ ಸ್ಮರಣಾರ್ಥ - ಹರೀಶ್ ಕೆ ಆದೂರು , ಹೊಸದಿಗಂತ ,ಮೂಡುಬಿದರೆ
'ನಮ್ಮ ಹಿರಿಯರು -ನಮ್ಮ ಹೆಮ್ಮೆ ' ವಿಭಾಗದಲ್ಲಿ : ಶ್ರೀ ಎ ಎಸ್ ಎನ್ ಹೆಬ್ಬಾರ್ ಕುಂದಾಪುರ, ವಿಜಯಕುಮಾರ್ ಹೊಳ್ಳ ಕೋಟ ,ಜಿ ಯು ಭಟ್ ಹೊನ್ನಾವರ ,ರಾಮಕೃಷ್ಣ ಮೈರುಗ ಕಾಸರಗೋಡು ,ಗಣೇಶ್ ಪ್ರಸಾದ್ ತಾಂಡೇಲು, ಜಿಕೆ ಭಟ್ ,ರಾಮಚಂದ್ರ ಆಚಾರ್ಯ , ಲಕ್ಷ್ಮಿ ಮಚ್ಚಿನ, ಪುರುಷೋತ್ತಮ ಭಟ್ , ಸೂರ್ಯನಾರಾಯಣ ಭಟ್ ಈ ಮಹನೀಯರನ್ನು ಗೌರವಿಸಲಾಗುವುದು .
ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಯು ಎಸ್ ಶೆಣೈ , ಕೆಯುಡಬ್ಲ್ಯೂ ಜೆ ಖಜಾಂಚಿ ವಾಸುದೇವ ಹೊಳ್ಳ , ಉಡುಪಿ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ,ರಾಜ್ಯ ಕಾರ್ಯಕಾರಣಿ ಸದಸ್ಯ ಶ್ರೀನಿವಾಸ ನಾಯಕ ಇಂದಾಜೆ ರವರಿಗೆ ಅಭಿನಂದನೆ ಸಲ್ಲಿಸಲಾಗುವುದು .
ಸಭಾ ಕಾರ್ಯಕ್ರಮ ನಿರೂಪಣೆ ಯನ್ನು ಪ್ರಣವ ಮೀಡಿಯಾ ಹೌಸ್ ನ ಡಾ. ಗುರುರಾಜ ಪೋಶೆಟ್ಟಿಹಳ್ಳಿ , ಯೋಗ ಥೆರಪಿಸ್ಟ್ ಕು. ಸ್ಫೂರ್ತಿ ಯಾವಗಲ್ ಪ್ರಾರ್ಥನಾ ಕಥಕ್ ನೃತ್ಯ ನಡೆಸಿಕೊಡುವರು ಎಂದು ಆಯೋಜಕರಾದ ವಿಕಾಸದ ಅಧ್ಯಕ್ಷ ಶ್ರೀನಾಥ್ ಜೋಶಿ ಮತ್ತು ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ.ಯಾವಗಲ್ ಹಾಗೂ ಕಾರ್ಯಕಾರಿ ಸಮಿತಿಯವರು ತಿಳಿಸಿರುತ್ತಾರೆ.
