ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿಯರು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ.

ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿಯರು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ.

ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿಯರು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ.

ವರದಿ: ನಾಗರಾಜ್ ದಂಡಾವತಿ ಕಲ್ಯಾಣ ಕಹಳೆ ವಾರ್ತೆ

ಕಲಬುರಗಿ : ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆಯು ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳಿಗೆ ವಿಭಾಗ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯು ದಿನಾಂಕ 02/12/2025 ಬಸವಕಲ್ಯಾಣದ ಬಸವೇಶ್ವರ ಪಿ ಯು ಕಾಲೇಜಿನಲ್ಲಿ ಜರುಗಿತು. ಸಂತ ಜೋಸೆಫ್ ಪಿ ಯು ಕಾಲೇಜಿನ ವಿದ್ಯಾರ್ಥಿನಿಯರಾದ ಕು. ಚೇತನಾ ತಂದೆ ಮಡಿವಾಳಪ್ಪ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವಳು. ಕು. ಜಾಹಿದಾ ರೀಮಾ ತಂದೆ ಮ. ಅಕ್ಷಾಲ ಜರದಿ ಇಂಗ್ಲೀಷ್ ಮಾದ್ಯಮ ಪ್ರಬಂಧದಲ್ಲಿ ತೃತೀಯ ಸ್ಥಾನ ಪಡೆದು ಇವರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಯು ದಿನಾಂಕ ೧೫-೧೨-೨೦೨೫ ರಂದು ತುಮಕೂರಿನಲ್ಲಿ ಜರುಗಲಿದೆ. ಈ ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಶೈಕ್ಷಣಿಕ ವೀಕ್ಷಕರಾದ ಸಿಸ್ಟರ ಐರೀನ್, ಸಿಸ್ಟರ್ ಅರ್ಪಿತಾ ಪ್ರಾಂಶುಪಾಲರಾದ ಸಿಸ್ಟರ್ ಶರಣಲತಾ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆಂದು ಉಪಪ್ರಾಚಾರ್ಯ ಡಾ. ಚಿ. ಸಿ ನಿಂಗಣ್ಣ ಪತಿಕಾ ಪ್ರಕಟಣೆಗೆ ತಿಳಿಸಿದ್ದಾರೆ.