ಮೈಸೂರಲ್ಲಿ ದಾವಣಗೆರೆ ರಂಗಾಯಣದ ಪ್ರತಿಗಂಧರ್ವ ನಾಟಕ ಪ್ರದರ್ಶನಗಳು

ಮೈಸೂರಲ್ಲಿ ದಾವಣಗೆರೆ ರಂಗಾಯಣದ ಪ್ರತಿಗಂಧರ್ವ ನಾಟಕ ಪ್ರದರ್ಶನಗಳು

ದಾವಣಗೆರೆ ರಂಗಾಯಣದ ಪ್ರಥಮ ನಾಟಕ 'ಪ್ರತಿಗಂಧರ್ವ' ಮೊದಲ ಪ್ರದರ್ಶನದಲ್ಲೇ ಯಶಸ್ಸಿನ ಮೆಟ್ಟಿಲೇರಿತು. ಅದೀಗ ಮೈಸೂರಿನ ಪ್ರತಿಷ್ಠಿತ 'ನಿರಂತರ ನಾಟಕೋತ್ಸವ'ಕ್ಕೆ ಆಯ್ಕೆಯಾಗಿದೆ. ಇದೇ ಡಿಸೆಂಬರ್ ೧೯ರಂದು ಸಂಜೆ ಮೈಸೂರಿನ ಕಿರುರಂಗಮಂದಿರದಲ್ಲಿ ಪ್ರದರ್ಶನ ಗೊಳ್ಳುವುದು. ಮೈಸೂರು ರಂಗಾಯಣದ ಬಹುರೂಪಿ ಉತ್ಸವದ ಮುನ್ನುಡಿ ನಾಟಕ ಮೇಳಕ್ಕೂ ಆಯ್ಕೆಯಾಗಿದೆ. ಡಿಸೆಂಬರ್ ೨೧ ರಂದು ಸಂಜೆ ಭೂಮಿಗೀತ ರಂಗಮಂದಿರದಲ್ಲಿ ಪ್ರತಿಗಂಧರ್ವ ಪ್ರದರ್ಶನಗೊಳ್ಳಲಿದೆ. 

ಮುಂಬಯಿ ಸೇರಿದಂತೆ ಇತರೆ ಭಾಗಗಳಲ್ಲಿ ಪ್ರತಿಗಂಧರ್ವ ನಾಟಕ ಪ್ರದರ್ಶನಕ್ಕೆ ಆಮಂತ್ರಣ ಬರುತ್ತಿವೆ. ದಾವಣಗೆರೆ ನಗರದಲ್ಲಿ ಮುಂಬರುವ ಫೆಬ್ರವರಿಯಲ್ಲಿ ಜರುಗಲಿರುವ ೨೦೨೬ರ ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲೂ ಪ್ರತಿಗಂಧರ್ವ ಪ್ರದರ್ಶನ ಕಾಣಲಿದೆ ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮತ್ತು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.