ಕಮಲನಗರ ; ಹೊಳಿ ಹಬ್ಬ ಸಂಭ್ರಮದಿಂದ ಆಚರಣೆ

ಕಮಲನಗರ ; ಹೊಳಿ ಹಬ್ಬ ಸಂಭ್ರಮದಿಂದ ಆಚರಣೆ

ಕಮಲನಗರ ; ಹೊಳಿ ಹಬ್ಬ ಸಂಭ್ರಮದಿಂದ ಆಚರಣೆ

ಕಮಲನಗರ : ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧೆಡೆ ಹೊಳಿ ಹಬ್ಬದ ನಿಮಿತ್ತ ಬುಧವಾರ ಯುವಕರು, ಮಹಿಳೆಯರು, ಹಿರಿಯರೆಲ್ಲರೂ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಬುಧವಾರ ಬೆಳಗ್ಗೆಯಿಂದಲೇ ಮಕ್ಕಳು ಬಣ್ಣ ಎರಚುತ್ತಾ ಸಂಭ್ರಮಿಸಿದರೆ, ಯುವಕರು ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮ ಪಟ್ಟರು. ಒಟ್ಟಿನಲ್ಲಿ ತಾಲ್ಲೂಕಿನಾದ್ಯಂತ ರಂಗೀನಾಟ ರಂಗೇರಿತು. 

ತಾಲ್ಲೂಕಿನ ಖೇಡ್, ತೊರಣಾ, ಮುಧೋಳ(ಬಿ) ಸೇರಿದಂತೆ ವಿವಿಧೆಡೆ ಯುವಕರು ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು

ಯುವಕರು ಗುಂಪುಗೂಡಿ ಮನೆ-ಮನೆಗೆ ತೆರಳಿ ತಮ್ಮ ಸ್ನೇಹಿತರನ್ನು ಬಣ್ಣದ ನೀರಿನಲ್ಲಿ ಮುಳುಗಿಸಿದರು.

ಪಟ್ಟಣದ ಜೋಶಿನಗರ ಬಡಾವಣೆ ಯುವಕರು, ಗ್ರಾಮದ ಮುಖಂಡ ಶಿವಾಣಂದ ವಡ್ಡೆ, ಅವಿನಾಶ ಶಿವಣಕರ, ವಿಜಯಕುಮಾರ ಕೊಡಗೆ, ಖೇಡ್ ಗ್ರಾಮದ ರಾಮಶೆಟ್ಟಿ ದಾನಾ, ರಾಜಕುಮಾರ್ ದಾನಾ, ಓಂಕಾರ್ ಮಾನಕರ್, ಅಮಿತ್ ಕಾಕನಾಳೆ, ನೀಲಕಂಠ ಹೂಗಾರ್, ಸಂಗಮೇಶ ಮಾನಕಾರ್, ಸಾಗರ ಕಿವಡೆ, ಮಲ್ಲೇಶ್ ಪಾರಾ, ಗುರು ಹೂಗಾರ್, ಅನಿಲ್ ಬಿರಾದಾರ, ರವಿ ಪಾರಾ, ಸೋಮನಾಥ ಮಾನಕಾರ್, ಅಭಿμÉೀಕ ಬಚ್ಚಣ್ಣ ಇದ್ದರು.