ಸಂಗೀತದಿಂದ ಶಾಂತಿ - ನೆಮ್ಮದಿ ಪ್ರಾಪ್ತಿ : ಶಾಸಕ ಅಲ್ಲಮಪ್ರಭು ಪಾಟೀಲ್
ಪಂಡಿತ ಪುಟ್ಟರಾಜ ಗವಾಯಿ-ತುಲಾಭಾರ -ಸ್ವರ ನಮನ
ಸಂಗೀತದಿಂದ ಶಾಂತಿ - ನೆಮ್ಮದಿ ಪ್ರಾಪ್ತಿ : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ಸಂಗೀತದಿಂದ ಮಾನಸಿಕ ನೆಮ್ಮದಿ ಮತ್ತು ಶಾಂತಿ ಲಭ್ಯವಾಗುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕಲ್ಬುರ್ಗಿಯ ಕನ್ನಡ ಭವನದಲ್ಲಿ ನವಂಬರ್ 23ರಂದು ಕಲ್ಬುರ್ಗಿಯ ಹಿರಿಯ ಮತ್ತು ಕಿರಿಯ ಕಲಾವಿದರ ಸಹಯೋಗದಲ್ಲಿ ನಡೆದ ಪಂಡಿತ ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಪುಣ್ಯಸ್ಮರಣೆ, ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಡಾ. ಕಲ್ಲಯ್ಯ ಅಜ್ಜನವರ ತುಲಾಭಾರ ಮತ್ತು ಸ್ವರ ನಮನ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಘಟನೆ ಮಾಡಿ ಮಾತನಾಡಿ ಗದಗ ವೀರೇಶ್ವರ ಪುಣ್ಯಾಶ್ರಮವು ಅಂತರ ಮತ್ತು ವಿಕಲಚೇತನರಿಗೆ ಸಂಗೀತ ಶಿಕ್ಷಣ ನೀಡಿ ಅವರ ಬಾಳು ಹಸನು ಮಾಡಿದೆ. ಪಂಡಿತ ಪುಟ್ಟರಾಜ ಗವಾಯಿಗಳವರ ಸೇವೆ ಸಂಗೀತ ಕ್ಷೇತ್ರಕ್ಕೆ ಅನನ್ಯವಾಗಿದ್ದು ಕಲ್ಬುರ್ಗಿಯಲ್ಲೂ ಅವರ ಶಿಷ್ಯಂದಿರ ಕೊಡುಗೆ ಅಪಾರ ವಾಗಿದ್ದು ಸಂಗೀತ ಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ ಸಂಗೀತದಿಂದ ಮಾತ್ರ ಶಾಂತಿ ಸಮಾಧಾನ ಹೊರತು ಹಣ ಸಿರಿತನದಿಂದ ಸಿಗದು ಎಂದು ಅಲ್ಲಮಪ್ರಭು ಪಾಟೀಲ್ ಹೇಳಿದರು. ಪಂಡಿತ ಪುಟ್ಟರಾಜ ಗವಾಯಿಗಳಿಂದಾಗಿ ಕಲಬುರಗಿಯೂ ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಪಡೆದು ರಾಜ್ಯದ ಗಮನ ಸೇವಂತಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕರ ನೇಮಕಾತಿ ಮಾಡುವುದರ ಮೂಲಕ ಸಂಗೀತ ಶಿಕ್ಷಣ ಪಡೆದವರಿಗೆ ಅವಕಾಶ ಕಲ್ಪಿಸುವುದು ಅತ್ಯಂತ ಅವಶ್ಯಕ ಎಂದು ಶ್ರೀಶೈಲ ಮತ್ತು ಲಫಲ ಮಠದ ಜಗದ್ಗುರು ಶ್ರೀ ಸಾರಂಗಧರೇಶ್ವರ ದೇಶಿಕೇಂದ್ರ ಸ್ವಾಮೀಜಿಯವರು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ್ ದೇಶಮುಖ ಮಾತನಾಡಿ ಪಂಡಿತ ಪುಟ್ಟರಾಜ ಗವಾಯಿಗಳವರ ಸಂಗೀತ ಕ್ಷೇತ್ರದ ಕೊಡುಗೆ ವಿಶ್ವಮಾನ್ಯವಾದದ್ದು ಮತ್ತು ಅವರ ಪ್ರೇರಣೆಯಿಂದ ಬೆಳೆಯುವ ಕಾರಣವಾಗಿದೆ ಶರಣಬಸವೇಶ್ವರ ಸಂಸ್ಥಾನದಲ್ಲಿ ಮತ್ತು ಪೂಜ್ಯ ಡಾ. ಶರಣಬಸವ ಅಪ್ಪ ವೈಯಕ್ತಿಕವಾಗಿ ಭೇಟಿಯಾಗಿ ವಿಚಾರ ವಿನಿಮಯ ಕೂಡ ಮಾಡಿದ್ದು ಚನ್ನಬಸವೇಶ್ವರ ಸಂಸ್ಥಾನದಲ್ಲಿ ಸಂಗೀತಕ್ಕೆ ಪೂಜೆ ಅಪ್ಪಾಜಿಯವರು ಹೆಚ್ಚಿನ ಆದ್ಯತೆಯನ್ನು ನೀಡಿ ಕಲೆ ಚಿತ್ರಕಲೆ ಸಂಗೀತ ಬೆಳೆಯಲು ಕಾರಣೀಭೂತರಾಗಿದ್ದಾರೆ ಎಂದರು. ಮಾತನ ಹಿಪ್ಪರಗದ ಪೂಜ್ಯ ಅಭಿನವ ಶಿವಲಿಂಗ ಸ್ವಾಮೀಜಿ ಅವರು ಮಾತನಾಡಿ ಕಲಾವಿದರ ಭಾರ ಹೊತ್ತವರಿಗೆ ಮಾತ್ರ ಸಮಾಜದಲ್ಲಿ ತುಲಾಭಾರ ಸಲ್ಲುತ್ತದೆ. ಗದಗ ವೀರೇಶ್ವರ ಪುಣ್ಯಾಶ್ರಮವು ಸಮಾಜದಲ್ಲಿ ಅತ್ಯಂತ ಕಷ್ಟದಲ್ಲಿರುವ ಅಂಗವಿಕಲರು ಮತ್ತು ದೃಷ್ಟಿ ವಿಕಲಚೇತನರಿಗೆ ಕಾಯಕ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ಪೀಠದ ಉತ್ತರಾಧಿಕಾರಿಗಳಾದ ಪೂಜ್ಯ ಡಾ. ಕಲ್ಲಯ್ಯ ಅಜ್ಜನವರ ಸೇವೆಗೆ ಸರ್ವರ ಬೆಂಬಲ ಅಗತ್ಯ ಎಂದು ಹೇಳಿದರು. ಮುಗುಳು ನಾಗಾವಿ ಕಟ್ಟಿಸಂಗಾವಿ ಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮಿಜಿ ಮಾತನಾಡಿ ಪುಟ್ಟರಾಜ ಗವಾಯಿಗಳವರು ಸಂತ ಪರಂಪರೆಯಲ್ಲಿ ಎವರೆಸ್ಟ್ ಶಿಖರದಂತೆ ಎತ್ತರಕ್ಕೆ ಬೆಳೆದು ನಿಂತು ಸಂಗೀತ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಎಂದರು . ಅಫ್ಜಲ್ಪುರ ಕ್ಷೇತ್ರದ ಶಾಸಕರಾದ ಎಂ ವೈ ಪಾಟೀಲ್ ಆಕಾಶ ವಾಣಿಯ ವಿಶ್ರಾಂತ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾoವ್, ಸಿದ್ದರಾಮಪೊಲೀಸ್ ಪಾಟೀಲ್ ಕುಕನೂರು, ಸಿದ್ದಣ್ಣ ದೇಸಾಯಿ ಕಲ್ಲೂರ್, ಬಾಬುರಾವ್ ಕೋಬಾಳ್, ಬಸಯ್ಯ ಗುತ್ತೇದಾರ್ ತೆಲ್ಲೂರ್, ಶಂಕರ್ ಹೂಗಾರ್ ದೇಸಾಯಿ ಕಲ್ಲೂರು, ಜಡೇಶ ದೇಸಾಯಿ ಕಲ್ಲೂರ್, ಆನಂದ ಶಿವಾನಂದ ಹಿತ್ತಲಶಿರೂರು, ಶಿವಕುಮಾರ್ ಪಾಟೀಲ್ ಬೆಟ್ಟ ಜೇವರ್ಗಿ, ಚೇತನ್ ಕುಮಾರ್ ಎಸ್ ಬೀದಿಮನಿ, ನಿಂಗಯ್ಯ ಗವಾಯಿ ಉಪಸ್ಥಿತರಿದ್ದರು. ಸಂಘಟಕರಾದ ಕಲಾವಿದ ಅಣ್ಣಾ ರಾವ್ ಪಾಟೀಲ್. ಬಂಡಯ್ಯ ಶಾಸ್ತ್ರಿ ಸುಂಟನೂರು ಹಾಗೂ ನಾಗಲಿಂಗಯ್ಯ ಸ್ವಾಮಿ ನಿರೂಪಣೆ ಮಾಡಿದರು.
ಮನ ಸೆಳೆದ ಸಂಗೀತ ಕಾರ್ಯಕ್ರಮ
ಸ್ವರ ನಮನ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಹಿಂದುಸ್ತಾನಿ ಗಾಯನ, ಕೊಳ ಲು, ಸಿತಾರ್ ಮತ್ತು ತಬಲಾ ವಾದನ ಪ್ರಸ್ತುತಪಡಿಸುವುದರೊಂದಿಗೆ ಸಂಗೀತಪ್ರಿಯರ ಮೆಚ್ಚುಗೆ ಪಡೆದರು. ಹಿಂದುಸ್ತಾನಿ ಗಾಯನದಲ್ಲಿ ಖ್ಯಾತ ಕಲಾವಿದರಾದ ಸಂಗೀತ ಕಟ್ಟಿ ಕುಲಕರ್ಣಿ, ಪಂಡಿತ್ ಕುಮಾರ್ ಎಸ್ ಮರಡೂರ, ಪಂಡಿತ್ ವಿಶ್ವನಾಥ್ ಗವಾಯಿ ಹಾಡಿ ರಂಜಿಸಿದರು. ತಬಲಾ ತ್ರಿಬಲ್ ಬಂದಿ ಸೋಲೋ ಕಾರ್ಯಕ್ರಮದಲ್ಲಿ ಪಂಡಿತ್ ಶಾಂತಲಿಂಗ ದೇಸಾಯಿ ಕಲ್ಲೂರ, ಮಳೆ ಮಲ್ಲೇಶ, ರಘು ನಂದನಗೋಪಾಲ ಹಾಗೂ ಸಿತಾರ ವಾದನದಲ್ಲಿ ಭಾಗ್ಯಶ್ರೀ ಎಸ್. ಧಾರವಾಡ ಸಂಗೀತಪ್ರಿಯರನ್ನು ರಂಜಿಸಿದರು.