ಅಫಜಲಪುರ ||ಕಸಾಪ.ಸಾಹಿತ್ಯ ಸಮ್ಮೇಳನದ: ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎಂ.ರಾವ್ ಆಯ್ಕೆ
ಕಸಾಪ.ಸಾಹಿತ್ಯ ಸಮ್ಮೇಳನದ: ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎಂ.ರಾವ್ ಆಯ್ಕೆ
ಅಫಜಲಪುರ: ತಾಲೂಕು ಮಟ್ಟದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಂಡಾಯ ಹಿರಿಯ ಸಾಹಿತಿ,ಶಿಕ್ಷಕ ಬಿ.ಎಂ.ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಪ್ರಭು ,ಪುಲಾರಿ ಅವರು ತಿಳಿಸಿದ್ದಾರೆ.
ಅಫಜಲಪುರ ಪಟ್ಟಣದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇ ಮಠದಲ್ಲಿ ಪೂರ್ವಭಾವಿ ಸಭೆಯ ಜರುಗಿತು , ನಂತರ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಅವರು ತಾಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ - ಮಾಡಲಾಗಿದ್ದು ಸಮ್ಮೇಳನವು ಮುಂಬರುವ ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ತಾಲೂಕಿನ ಕನ್ನಡಪರ ಸಂಘಟನೆಗಳು , ಸಂಘ-ಸಂಸ್ಥೆಗಳು, ಮುಖಂಡರು ,ಮಹಾಜನತೆ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದರು.
ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಚಾಂದಕವಟೆ ಕಸಾಪ ಗೌರವಾಧ್ಯಕ್ಷ ಬಸಣ್ಣ - ಗುಣಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ಶಕೀಲ್ ಚೌಧರಿ, ಪರಮಾನಂದ - ಸರಸಂಬಿ, ಸಿದ್ದರಾಮ ಶಿವಣಗಿ, ದಾದಾಗೌಡ ಬಿರಾದಾರ, ಬಸವರಾಜ ನಿಂಬರ್ಗಿ, ಬಾಪುಗೌಡ ಬಿರಾದಾರ, ಚಂದುಬನ್ನಟ್ಟಿ, ಪ್ರಭಾವತಿ ಮೇತ್ರಿ, ಪ್ರೇಮಾವತಿ ರಾಜಾನವರ, ಬಾಹುಬಲಿ ಮಾಲಗತ್ತಿ, ಕಾಲೇಸಾಬ ಬಾಗವಾನ, ಶ್ರೀಶೈಲ ಮ್ಯಾಳೇಶಿ ವಲಯಾಧ್ಯಕ್ಷರಾದ ಮಹಾದೇವ ವಿಶ್ವಕರ್ಮ, ಧೂಳಪ್ಪ ಈಶ್ವರಗೊಂಡ, ಅರ್ಚನಾ ಜೈನ್, ಭೀಮಾಶಂಕರ ಮೇಳಕುಂದಿ,ಚಂದ್ರಶೇಖರ ಹೊಸೂ ರಕರ್, ಮಲ್ಲಯ್ಯ ಹೊಸಮಠ ರಮೇಶ ಹೂಗಾರ, ಬೀರಣ್ಣ ಕನಕಟೇಲರ್, ಸೋಂದು ಬಾಗವಾನ, ಶ್ರೀಕಾಂತ ದಿವಾಣಜಿ, ಈರಣ್ಣ ಮಗಿ ಮಹಾಂತೇಶ ಬಳೂಂಡಗಿ, ರವಿ ಗೌರ, ಗೌತಮ ಸಕ್ಕರಗಿ, ಅರುಣಕುಮಾರ ಹೂಗಾರ, ಬಿಲಾಲ್ ಅಹ್ಮದ್, ಸಿದ್ದು ಪೂಜಾರಿ, ಸಾಯಬಣ್ಣ ಜಮಾದಾರ, ಪ್ರತಿಭಾ ಮಹಿಂದ್ರಕರ್, ಗೋಪಾಲ ಹಳ್ಯಾಳ, ರಹೀಂ ಖೇಡಿಗಿ,ಶಿವಾನಂದ ಹೂಗಾರ, ಬಿಲಾಲ್ ಅಹ್ಮದ್, ಸುಭಾಷ ತೇಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು .
ಬಿ.ಎಮ್. ರಾವ್ ಗೆ, ಗೌರವದ ಮಹಾಪೂರ
ಪೂರ್ವಭಾವಿ ಸಭೆಯ ನಂತರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ,ಶಿಕ್ಷಕ ಬಿ. ಎಂ.ರಾವ್ ಅವರ ನಿವಾಸಕ್ಕೆ ತೆರಳಿದ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಅಧಿಕೃತವಾಗಿ ಆಹ್ವಾನ ನೀಡಿ ಗೌರವಿಸಿ ಸತ್ಕರಿಸಿದರು