ಎಸ್. ಬಿ. ಜಂಗಮಶೆಟ್ಟಿ ಜೋಡಿ ರಂಗ ಪ್ರಶಸ್ತಿಗೆ ಅರ್ಜಿ ಆಹ್ವಾನ

ಎಸ್. ಬಿ. ಜಂಗಮಶೆಟ್ಟಿ ಜೋಡಿ ರಂಗ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕಲಬುರಗಿ: ನಗರದ ರಂಗ ಸಂಗಮ ಕಲಾ ವೇದಿಕೆ (ರಿ) ಸಂಸ್ಥೆಯಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ
ಎಸ್. ಬಿ. ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಈ ವರ್ಷವೂ ಅರ್ಹ ರಂಗಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು
ಕನ್ನಡ ರಂಗಭೂಮಿಯಲ್ಲಿ ಶ್ರಮಪಟ್ಟು ಕೆಲಸ ಮಾಡಿದ ಪ್ರತಿಭಾವಂತ ಪುರುಷ ಮತ್ತು ಮಹಿಳಾ ಕಲಾವಿದರಿಗೆ ತಲಾ ₹10,000 ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡ ಈ ಪ್ರಶಸ್ತಿ ಜುಲೈ 18, 2025ರಂದು ಕಲಬುರ್ಗಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದರು
ಪ್ರಶಸ್ತಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪುರಸ್ಕೃತ ಕಲಾವಿದರ ಅರ್ಜಿಗಳನ್ನು ಪರಿಗಣಿಸಲಾಗದು. ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವುದೇ ವೇದಿಕೆಯ ಉದ್ದೇಶವಾಗಿದೆ.
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ: ಜೂನ್ 20, 2025ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ
:ಶ್ರೀಮತಿ ಶಿವಗೀತಾ, ಅಧ್ಯಕ್ಷರು, ರಂಗ ಸಂಗಮ ಕಲಾ ವೇದಿಕೆ,ಕೆ/ಆಫ್ ಎಚ್.ಎಸ್. ಬಸವಪ್ರಭು, #1-892-72/10 ‘ಲಕ್ಷ್ಮಿ’,ಗಣೇಶ್ ನರ್ಸಿಂಗ್ ಹೋಮ್ ಹಿಂದುಗಡೆ, ಗಣೇಶ್ ನಗರ, ಹಳೆ ಜೇವರ್ಗಿ ರಸ್ತೆ,ಕಲಬುರ್ಗಿ – 585102ಮೊಬೈಲ್: 8660259857