ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ
ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ..
ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು ಡಿಸೆಂಬರ್ 14ರಂದು ಜೆ ಎಲ್ ಆಡಿಟೋರಿಯಂ ವಿಟ್ಲದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಬಣೆಯಿಂದ ನಡೆಯಲಿದೆ.
ಬೆಳಗ್ಗೆ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ, ರವಿಶಂಕರ್ ಸಿ ಮೂಡಂಬೈಲು
ಸಮಾರಂಭದ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಅಧ್ಯಕ್ಷರು ಸ್ವರ ಸಿಂಚನ ಸಂಗೀತ ಶಾಲೆ ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನದ ವಿಟ್ಲ ಕೇಶವ್ ಆರ್ ವಿ, ರಾಜ್ಯಪ್ರಶಸ್ತಿ ಪುರಸ್ಕೃತ ಬರಹ ಗಾರರು , ಜೇನುಗಡ್ಡದಾರಿ ಕಲಾ ಪೋಷಕ ಕಲಾ ನಿರ್ದೇಶಕರಾದ ಕುಮಾರ ಪೆರ್ನಾಜೆ ಭಾಗವಹಿಸಲಿದ್ದಾರೆ .ಸನ್ಮಾನ "ಸ್ವರ ಸಿಂಚನ" ಪುರಸ್ಕಾರ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ ಪಿಟೀಲು ವಾದಕರು ದಶಮಾನೋತ್ಸವ, ಸನ್ಮಾನ
ಎಸ್ ಎಲ್ ಗೋವಿಂದ ನಾಯಕ್ ಪಾಲೆಚ್ಚಾರು, ಹಿರಿಯ ಯಕ್ಷಗಾನ ಭಾಗವತರು ಹಾಗೂ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ತದನಂತರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಚೇರಿ,
ಕು.ಸಿಂಚನ ಲಕ್ಷ್ಮಿ ಕೊಡಂದೂರು (ಸಹ ಶಿಕ್ಷಕಿ) ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ನಡೆಯಲಿದ್ದು
ಪಕ್ಕ ವಾದ್ಯದಲ್ಲಿ ಮೃದಂಗವಾದಕರಾಗಿ ವಿದ್ವಾನ್ ಡಾ.ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ,ಪಿಟೀಲು ಅಭಿರಾಮ್ ಕೋಡಂಪಳ್ಳಿ ನಿರೂಪಣೆ ಪದ್ಮರಾಜ ಚಾರ್ವಾಕ ನಮ್ಮ ಹೆಮ್ಮೆಯ ಹಿಮ್ಮೇಳ ಕಲಾವಿದರು ದಿನಪೂರ್ತಿ ಸಂಗೀತದ ರಸದೌತಣ ನೀಡಲಿರುವ ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು ರಘುರಾಮ ಶಾಸ್ತ್ರಿ ಕೊಡಂದೂರು, ಕುಮಾರಿ ಸಿಂಚನ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಸ್ವರಸಿಂಚನ ಸಂಗೀತ ಶಾಲೆಗೆ ದೊಡ್ಡ ಶಕ್ತಿ ಪೆರ್ನಾಜೆ ಕುಟುಂಬ...."
ಮನೆಯಲ್ಲಿ ವೇದಿಕೆಯನ್ನಾಗಿಸಿ ಬೆಳೆದ ಸಂಗೀತ ಕಲಾ ಪ್ರತಿಭೆ ಹೀಗೊಂದು ಸೃಜನಶೀಲ ಹಳ್ಳಿ ಪ್ರತಿಭೆ ಬೆಳಗುತ್ತಿರುವುದು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೋಡಂದೂರು ಮನೆಯ ಸವಿತಾ ಕೊಡಂದೂರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ನಮ್ಮ ಹಿರಿಯರ ಮಾತು ನಿಜವಾಗಿದ್ದು ಬಾಲ್ಯದಲ್ಲೇ ಸಂಗೀತ ಅಭ್ಯಾಸ ಮಾಡಿದ್ದರು ಮದುವೆ ಮಕ್ಕಳು ಆದನಂತರ ಹೆಚ್ಚಿನ ಮುತುವರ್ಜಿಯಲ್ಲಿ ಕಲಿತು ಇಂದು ವೈವಿಧ್ಯಮಯ ಕಾರ್ಯಕ್ರಮಗಳ ಜೊತೆ ನಾಡಿನದ್ಯಂತ ಪ್ರಸ್ತುತ ಪಡಿಸಿದರು.
ಕುಮಾರ್ ಪೆರ್ನಾಜೆ ಇವರ ಸಾರತ್ಯದಲ್ಲಿ
ಸ್ವರ ಸಿಂಚನ ಅಂತ ಹೆಸರನ್ನು ಇತ್ತವರು ಇವರೇ. ಎಲ್ಲರಿಗೂ ಬೇಕಾಗುವ ಹಣ್ಣು ಕೈ ಸೇರುತ್ತದೆ,
ಬೇಡವಾದ ಬೀಜ ಭೂಮಿ ಸೇರುತ್ತದೆ. ತಿರಸ್ಕರಿಸುವವರೇ ಪುರಸ್ಕರಿಸುವಂತಹ ಕಾಲವೇ ಸಾಧನೆ ಎಂಬಂತೆ ಪ್ರಾರಂಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನೀಡಿದ್ದು ಹೆಗ್ಗಳಿಕೆ ಅಲ್ಲದೆ ಇದೇ ವೈವಿಧ್ಯ ವೇದಿಕೆಯಲ್ಲಿ ಆರು ವರ್ಷ ಕ್ಕೂ ಮಿಕ್ಕಿ ಸತತ ಕರ್ನೂರು ಸತೀಶ್ ರವರ ಪ್ರಯೋಜಕತ್ವದಲ್ಲಿ ಕಾರ್ಯಕ್ರಮ ನೀಡಿದ್ದು ವಿಶೇಷ ಹಾಗೆ ಕಾವು ,ಕುಕ್ಕೆ ಸುಬ್ರಹ್ಮಣ್ಯ ,ಧರ್ಮಸ್ಥಳ, ಐವರ್ನಾಡು , ಪರ್ಪುಂಜ ,ಕನಕಮಜಲು ಕೋಟೆ ಮುಂತಾದ ಕಡೆಗಳಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗಳಿಸಿದ್ದು . ಸ್ಯಾಕ್ಸೋಫೋನ್ ಸಂಗೀತ ಪ್ರದರ್ಶನ ಕರ್ನಾಟಕದಲ್ಲಿ ಇದನ್ನು ಮೊತ್ತಮೊದಲಿಗೆ ಈಶ್ವರಮಂಗಳದಲ್ಲಿ ಪ್ರದರ್ಶಿಸಿ ತದನಂತರ ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅಲ್ಲದೆ ನವ ಮಾತೃಕೆಯರ ಗೀತ ಗಾಯನ ,ಸಪ್ತ ಮಾತ್ರಿಕೆಯರ ಗೀತ ಗಾನ ವೈಭವ ನವ ಬಾಲಕಿಯರ, ಅಮ್ಮ ಮಗಳ ದ್ವಂದ್ವ ಗಾನ ವೈಭವ ಭಕ್ತಿ ಸಂಭ್ರಮ ಮಿಮಿಕ್ರಿ ನಗೆ ಹಬ್ಬ ರಸಮಂಜರಿ ಹೀಗೆ ವೈವಿಧ್ಯಮಯ ವಿಶೇಷ ಗಾಯನ ಹಾಗೆ ಊರವರ ಜೊತೆಯಲ್ಲಿ ವೇದಿಕೆ ಈ ಪ್ರತಿಭೆ ತೋರಿಸಿದ್ದಾರೆ.
ವಿಟ್ಲ ಗುರುಕುಲದಲ್ಲೂ ಸಂಗೀತ ಕ್ಲಾಸ್ ನೀಡುತ್ತಿದ್ದಾರೆ ಅಲ್ಲದೆ ಪಡಿಬಾಗಿಲಿನಲ್ಲೂ ಸಂಗೀತ ಕ್ಲಾಸ್ ನೀಡುತ್ತಿದ್ದಾರೆ .ನೂರಾರು ವಿದ್ಯಾರ್ಥಿಗಳು ಪುಟ್ಟ ಪುಟ್ಟ ಮಕ್ಕಳಿಂದ ಹಿರಿಯರ ತನಕ ಸಂಗೀತ ಕಲಿಯಲು ವಯಸ್ಸು ಮುಖ್ಯವಲ್ಲ ಅಭಿರುಚಿ ಆಸಕ್ತಿ ಮುಖ್ಯ ವೈವಿಧ್ಯಮಯ ಡ್ರೆಸ್ ವಿನ್ಯಾಸ ಹೊಂದಿದ ತಂಡಗಳು ಒಂದೇ ವೇದಿಕೆಯಲ್ಲಿ ಅಲ್ಲದೆ ಸಂಗೀತ ಪರೀಕ್ಷೆಯಲ್ಲಿ. ಸತತ ನೂರು ಶೇಕಡ ಫಲಿತಾಂಶ ಪಡೆದುಕೊಂಡ ಕಲಾ ಶಾಲೆಯಾಗಿದೆ.
