ವಿಠಲ್ ಹೇರೂರ ದಿಟ್ಟ ಹೋರಾಟಗಾರ.

ವಿಠಲ್ ಹೇರೂರ ದಿಟ್ಟ ಹೋರಾಟಗಾರ.

ವಿಠಲ್ ಹೇರೂರ ದಿಟ್ಟ ಹೋರಾಟಗಾರ.

ನಾಗರಾಜ್ ದಂಡಾವತಿ ವರದಿ ಶಹಾಬಾದ್ ಕೋಲಿ ಸಮಾಜದ ಕಂಡಿರುವ ಮಹಾನ್ ಮತ್ತು ದಿಟ್ಟನಾಯಕ ದಿ.ವಿಠಲ್ ಹೇರೂರು. ಅವರು ಹೋರಾಟವನ್ನೇ ಉಸಿರಾಗಿಸಿ ಕೊಂಡು ಸಮಾಜದಲ್ಲಿ ಸಂಘಟನೆಯೊಂದಿಗೆ ಮುಂದೆ ಹೆಜ್ಜೆ ಇಟ್ಟವರು ಎಂದು ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ ಹೇಳಿದರು.

ಅಶೋಕ ನಗರದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ, ಕೋಲಿ ಸಮಾಜದ ಹಿರಿಯ ನಾಯಕ ವಿಠಲ್ ಹೇರೂರ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿದರು. ಕೋಲಿ ಸಮಾ ಜದ ಹಲವಾರು ಸಮಸ್ಯೆಗಳ ವಿರುದ್ದ ಹೋರಾಟ ಮಾಡಿದ ಅವರು, ಸದಾ ಸಮಾಜಿಕವಾಗಿ ಎಲ್ಲ ವರ್ಗದ ಚಿಂತನೆ ಮಾಡುವ ಒಬ್ಬ ದಿಟ್ಟ ನೇರ ಮಾತುಗಾರ, ಮಾನವೀಯ ಕಳಕಳಿ ಇರುವ ವ್ಯಕ್ತಿಯಲ್ಲ ಸಮಾಜದ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ಈ ವೇಳೆ ಮುಖಂಡರಾದ ಮೋಹನ ತಳವಾರ, ಮೇಘರಾಜ ಭೀಮನಳ್ಳಿ, ಮಹೇಶ ಯಲ್ಲೇರಿ, ಮರಲಿಂಗ ಗಂಗಬೋ, ಶಿವರಾಜ ನಾಟೀಕಾರ, ಮಂಜುನಾಥ ವಾಲಿಕಾರ, ನಾಗೇಶ ಮಣ್ಣೂರ, ಶಿವರಾಜ ಯಡ್ರಾಮಿ, ನಾಗೇಶ ಬನ್ನೂರ, ಶರಣು ಮಳಖೇಡ, ಶರಣು ತಳವಾರ, ಮರೆಪ್ಪ ಬೈಚಬಾಳ, ಸಾಧು ತಳವಾರ ಇತರರು ಇದ್ದರು.