ಇಷ್ಟಲಿಂಗ ಧಾರಣೆ ಮತ್ತು ದೀಕ್ಷಾ ಕಾರ್ಯಕ್ರಮ: 20 ಜುಲೈ, ಕಲಬುರಗಿಯಲ್ಲಿ

ಆಶಾಢ ಮಾಸದ ಇಷ್ಟಲಿಂಗ ಧಾರಣೆ ಮತ್ತು ದೀಕ್ಷಾ ಕಾರ್ಯಕ್ರಮ: 20 ಜುಲೈ, ಕಲಬುರಗಿಯಲ್ಲಿ
ಕಲಬುರಗಿ: ಶ್ರೀ ಬಸವ ಸಮಿತಿ, ಕಲಬುರಗಿ ವತಿಯಿಂದ ಆಶಾಢ ಮಾಸದ ಅಂಗವಾಗಿ *ಇಷ್ಟಲಿಂಗ ಧಾರಣೆ ಹಾಗೂ ದೀಕ್ಷಾ ಕಾರ್ಯಕ್ರಮ*ವನ್ನು ದಿನಾಂಕ 20-07-2025, ಭಾನುವಾರ ಬೆಳಿಗ್ಗೆ 7:00 ಗಂಟೆಗೆ, ಜಯನಗರದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ, ಬಸವ ಧರ್ಮದ ಪರಿಪೂರ್ಣತೆಗಾಗಿ ಅತ್ಯವಶ್ಯಕವಾದ ಇಷ್ಟಲಿಂಗ ಧಾರಣೆ ಮತ್ತು ದೀಕ್ಷೆ ಕಾರ್ಯಕ್ರಮವನ್ನು ಶ್ರೀ ಶರಣಬಸವ ಮಹಾಸ್ವಾಮಿಗಳು, ಬಸವ ಬೆಳವಿಯವರು (ತಾಲೂಕ: ಹುಕ್ಕೇರಿ, ಜಿಲ್ಲೆ: ಬೆಳಗಾವಿ) ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ ಎಂದು ಬಸವ ಸಮಿತಿಯ ಅಧ್ಯಕ್ಷ ಶ್ರೀ ಮತಿ ವಿಲಾಸವತಿ ಖುಬಾ ತಿಳಿಸಿದ್ದಾರೆ.
ಬಸವ ಭಕ್ತರು, ಶರಣರು, ಲಿಂಗಾಯತ ಧರ್ಮದ ಆಸಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಷ್ಟಲಿಂಗ ದೀಕ್ಷೆ ಪಡೆದು ಶರಣ ಸಂಪ್ರದಾಯದ ಜೀವನವೈಖರಿಯನ್ನು ಅನುಸರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶರಣಬಸವ ಸ್ವಾಮೀಜಿ ಮಾತನಾಡುತ್ತಾ, ಲಿಂಗಾಯತರೆಲ್ಲರೂ ಲಿಂಗ ಕಟ್ಟಿಕೊಳ್ಳಿ. ಲಿಂಗವಿಲ್ಲದ ಭವಿಗೆ ಶರಣ ಧರ್ಮದಲ್ಲಿ ಪ್ರವೇಶವಿಲ್ಲ. ಸರ್ವರೂ ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಬೇಕು," ಎಂದು ಧರ್ಮೋಪದೇಶ ನೀಡಿದರು.
ಡಾ.ಆನಂದ ಸಿದ್ದಾಮಣಿ, ಶರಣಗೌಡ ಪಾಟೀಲ ಪಾಳಾ,ಶ್ರೀ ಶಾಂತಲಿಂಗ ಪಾಟೀಲ್ ಕೋಳಕೂರ,ಬಂಡೆಪ್ಪ ಕೆಸುರ, ಕಾರ್ಯಕ್ರಮದಲ್ಲಿ ಭಾಗವಹಿಸುವರು
ಇಚ್ಛಾಶಕ್ತಿ ಮತ್ತು ಶ್ರದ್ಧೆ ಇರುವ ಎಲ್ಲ ಶರಣ ಅಭಿಮಾನಿಗಳು, ಈ ಧಾರ್ಮಿಕ ಸನ್ನಿವೇಶದ ಸದುಪಯೋಗ ಪಡೆಯಬೇಕು ಎಂದು ಬಸವ ಸಮಿತಿ ಕೋರಿದೆ.