ಅಳ್ಳಳ್ಳಿ ಮಹಾತ್ಮ ಪೀಠದಲ್ಲಿ ರಂಗ ಶಿಕ್ಷಣ ಕೇಂದ್ರ ಆರಂಭಿಸಿ: ಪ್ರಭಾಕರ್ ಜೋಶಿ

ಅಳ್ಳಳ್ಳಿ ಮಹಾತ್ಮ ಪೀಠದಲ್ಲಿ ರಂಗ ಶಿಕ್ಷಣ ಕೇಂದ್ರ ಆರಂಭಿಸಿ: ಪ್ರಭಾಕರ್ ಜೋಶಿ

ಅಳ್ಳಳ್ಳಿ ಮಹಾತ್ಮ ಪೀಠದಲ್ಲಿ ರಂಗ ಶಿಕ್ಷಣ ಕೇಂದ್ರ ಆರಂಭಿಸಿ: ಪ್ರಭಾಕರ್ ಜೋಶಿ

ಚಿತ್ತಾಪುರ: ಹಳ್ಳಳ್ಳಿ ಅಯ್ಯಪ್ಪಯ್ಯ ಮಹಾತ್ಮ ಪೀಠವು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ನೂರಾರು ಕಲಾವಿದರನ್ನು ಸೃಷ್ಟಿ ಮಾಡಿದ್ದಾರೆ. 400ಕ್ಕೂ ಅಧಿಕ ನಾಟಕಗಳಿಗೆ ಸಂಗೀತ ಸೇವೆ ಸಲ್ಲಿಸಿದ್ದಾರೆ.

 900 ನಾಟಕ ಪ್ರದರ್ಶನಗಳನ್ನು ನೀಡಿ. ರಂಗಭೂಮಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಮಠಕ್ಕೆ ಕನ್ನಡ ವಿಶ್ವವಿದ್ಯಾಲಯದವರು ರಂಗ ಶಿಕ್ಷಣ ಕೇಂದ್ರ ಸ್ಥಾಪಿಸಿ ಈ ಭಾಗದಲ್ಲಿ ರಂಗ ಕಲೆ ನಿರಂತರವಾಗಿ ಉಳಿಯಲು ಪ್ರಯತ್ನಿಸಬೇಕೆಂದು ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ್ ಜೋಶಿ ಅವರು ಹೇಳಿದರು.

 ತಾಲೂಕಿನ ಆಳ್ಳೊಳ್ಳಿ ಮಹಾತ್ಮ ಪೀಠದಲ್ಲಿ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಂಗ ಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಎಂಬ ಒಂದು ದಿನದ ವಿಚಾರ ಸಂಕಿರಣದಲ್ಲಿ.

 ರಂಗ ಪರಂಪರೆಯ ಗೋಷ್ಠಿಯಲ್ಲಿ ಗ್ರಾಮೀಣ ರಂಗ ಪರಂಪರೆಗೆ ಚಿತ್ತಾಪುರ ತಾಲೂಕಿನ ಕೊಡುಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ಗ್ರಾಮೀಣ ರಂಗ ಪರಂಪರೆಗೆ ಹಳ್ಳಳ್ಳಿ ಮಹಾತ್ಮ ಪೀಠದ ಕೊಡುಗೆ ಅನನ್ಯವಾಗಿದೆ.

 ಇಲ್ಲಿಯ ನಾಗಪ್ಪಯ್ಯ ಸ್ವಾಮಿಗಳವರು ನಾಟಕ ಪ್ರಯೋಗ ತಪಸ್ಸಿ ಗಳಾಗಿದ್ದಾರೆ. ಆದರೆ ಈ ಮಠದ ರಂಗಭೂಮಿಯ ಕೊಡುಗೆಯನ್ನು ಸರ್ಕಾರ ಗುರುತಿಸುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದರು. ಕನ್ನಡ ವಿಶ್ವವಿದ್ಯಾಲಯಾವು ಈ ಮಠದ ರಂಗಕಲೆಯ ಪರಂಪರೆಯನ್ನು ಗುರುತಿಸಿ. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಾಹಿತಿ ಮೈಪಾಲ್ ರೆಡ್ಡಿ ಮುನೂರ್ ಪ್ರಮುಖ ರಂಗ ಪ್ರಯೋಗಗಳು ಮತ್ತು ರಂಗ ತಾಂತ್ರಿಕತೆಯ ಕುರಿತು ಮಾತನಾಡಿ. ರಂಗತಂತ್ರಗಾರಿಕೆಯನ್ನು ಅಯ್ಯಪ್ಪಯ್ಯ ಮಹಾತ್ಮ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ಆಳ್ಳೊಳ್ಳಿ ಮಠದ ರಂಗ ತಾಂತ್ರಿಕತೆಗೆ ವಿಭಿನ್ನ ಕೊಡಿಗೆ ನೀಡಿದ್ದಾರೆ.

 ನವೀನ ರಂಗ ತಾಂತ್ರಿಕತೆ ಬೆಳೆಸುವಲ್ಲಿ ಇಲ್ಲಿಯ ಕಲಾವಿದರು ನಿಪುಣರಾಗಿದ್ದಾರೆ ಎಂದು ಹೇಳಿದರು.

 ಸಂಜೀವ್ ಸಿ ರ ನೂ ರಕ್ ಮಾತನಾಡಿ ಚಿತ್ತಾಪುರ ತಾಲೂಕಿನ ಸಂಗೀತ ಪರಂಪರೆ ಚಾರಿತ್ರಿಕ ನೋಟ ಕುರಿತು ಮಾತನಾಡಿದರು. ನಾಗಪ್ಪಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ಬಾಬು ಕಾಶಿ, ಚಂದರ್ ಚವ್ಹಾಣ, ಇದ್ದರು.