ಡಿಸೆಂಬರ್ 10,ಲಿಂಗಾಯತರ ಮೇಲಿನ ದೌರ್ಜನ್ಯ ದಿನ - ಬಸವ ಜಯ ಮೃತ್ಯುಂಜಯ ಶ್ರೀಗಳು
ಡಿಸೆಂಬರ್ 10,ಲಿಂಗಾಯತರ ಮೇಲಿನ ದೌರ್ಜನ್ಯ ದಿನ - ಬಸವ ಜಯ ಮೃತ್ಯುಂಜಯ ಶ್ರೀಗಳು
ಶಹಾಪುರ : 2ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಲಿಂಗಾಯಿತರ ಮೇಲಿನ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 10,ಲಿಂಗಾಯಿತರ ಮೇಲಿನ ದೌರ್ಜನ್ಯ ದಿನ ಎಂದು ನೋವಿನಿಂದ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಶಹಾಪುರ ತಾಲೂಕಿನ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮಾತನಾಡಿದರು, ಪಾದಯಾತ್ರೆ ಪ್ರವರ್ತಕ,ಮೀಸಲಾತಿ ಕ್ರಾಂತಿಯೋಗಿ,ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಹಾಗೂ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು,ಧರ್ಮಕ್ಷೇತ್ರ ಕೂಡಲಸಂಗಮ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ,ಇದೆ ಡಿಸೆಂಬರ್ 10.2025 ರಂದು ಬೆಳಗ್ಗೆ 5 ರಿಂದ ಸಾಯಂಕಾಲ 5 ರ ವರೆಗೆ ಜರಗುವುದು.
ಪಂಚಮಸಾಲಿ,ಮಲೆ ಗೌಡ, ಲಿಂಗಾಯತ ಗೌಡ,ದೀಕ್ಷ ಲಿಂಗಾಯತ,ಮೀಸಲಾತಿ ಚಳುವಳಿಗಾರರ ಮೇಲೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸರಕಾರ ನಡೆಸಿದ ಮಾರಣಾಂತಿಕ ಅಲ್ಲಿಗೆ ಒಂದು ವರ್ಷದ ನೋವಿನ ನೆನಪಿನಲ್ಲಿ ಒಂದು ದಿನದ ಮೌನ ಸತ್ಯಾಗ್ರಹಕ್ಕೆ ಕರೆ ನೀಡಿದರು.
ನಾಡಿನ ಸಮಾಜದ ಹಾಲಿ,ಮಾಜಿ ಸಚಿವ,ಶಾಸಕರು ಜನಪ್ರತಿನಿಧಿಗಳು ಪಂಚ ಸೇನಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ರೈತ ಮುಖಂಡರು,ವಿದ್ಯಾರ್ಥಿಗಳು,
ಹಿರಿಯರು,ಕಿರಿಯರು,ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡರು,ಪ್ರತಿಯೊಬ್ಬರು ಕೈಯಲ್ಲಿ ಕೋಲು ( ಶ್ರೀಶೈಲ ಬಡಗಿ ) ಹಿಡಿದು,ಪಂಚಮಸಾಲಿ ದ್ವಜ ಕಟ್ಟಿಕೊಂಡು,ಮೌನ ಸತ್ಯಾಗ್ರಹಕ್ಕೆ ಹಾಜರಾಗಿ ಯಶಸ್ವಿಗೊಳಿಸಬೇಕೆಂದು ನುಡಿದರು,ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಮುಖಂಡರಾದ ದೇವೇಂದ್ರಪ್ಪ ತೋಟಗೇರ,ಮಲ್ಲಣ್ಣ ಸಾಹು ಹೊಸೂರು,ಅನಿಲ್ ಬಿರಾದಾರ, ಶಾಂತು ದಿಗ್ಗಿ,ಶರಣು ಹೊಸೂರ,ಗುರು ಅಂಗಡಿ,ಸೇರಿದಂತೆ ಸಮಾಜದ ನೂರಾರು ಭಕ್ತರು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.
