ಯಡ್ರಾಮಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

ಯಡ್ರಾಮಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ
ಕಲಬುರಗಿ : ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಭೆ ನಡೆಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಯಡ್ರಾಮಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಭೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಭೀಮಶಾ ಖನ್ನಾ ಅವರು ಉದ್ಘಾಟಿಸಿ ಮಾತನಾಡಿ ದ.ಸಂ.ಸ ಈ ನಾಡಿನಲ್ಲಿ 4 ದಶಕಗಳ ಕಾಲ ನಿರಂತರವಾಗಿ ಶೋಷಿತ ಸಮುದಾಯದ ಪರವಾಗಿ ಹೋರಾಟ ಮಾಡಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಬೇಕು ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರವರು ಬರೆದಂತಹ ಸಂವಿಧಾನ ಅಪಾಯದ ಅಂಚಿನಲ್ಲಿದೆ ಇದನ್ನು ಉಳಿಸಿಕೊಳ್ಳಬೇಕಾದರೆ, ಶೋಷಿತ ಸಮುದಾಯ ಜಾಗೃತರಾಗಬೇಕು ಮತ್ತು ಬುದ್ಧ,ಬಸವ, ಡಾ|| ಬಾಬಾಸಾಹೇಬ ಅಂಬೇಡ್ಕರವರ ವಿಚಾರಧಾರೆಯ ಮೇಲೆ ನಡೆಯಬೇಕು ಮತ್ತು ಮೂಡ ನಂಬಿಕೆಯAತಹ ಅನಿಷ್ಠ ಪದ್ದತಿಯಿಂದ ದೂರು ಇರಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂ.ಸAಚಾಲಕರಾದ ಸುರೇಶ ಮೆಂಗನ್, ವಹಿಸಿಕೊಂಡು ಮಾತನಾಡಿ, ಬುದ್ಧ,ಬಸವ, ಡಾ. ಬಾಬಾಸಾಹೇಬ ಅಂಬೇಡ್ಕರವರು ಆಧುನಿಕ ಭಾರತದ ನಿರ್ಮಾಪಕರು ದೇಶದಲ್ಲಿ ಆರ್.ಎಸ್.ಎಸ್ ಚಡ್ಡಿ ಸರ್ಕಾರದಿಂದ ನಾವೆಲ್ಲ ಜಾಗೃತರಾಗಬೇಕು ಈ ನಾಡಿನಲ್ಲಿ ಪ್ರೊ.ಬಿ.ಕೃಷ್ಣಪ್ಪರವರು ಕಟ್ಟಿದಂತಹ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ, ಈ ನಾಡಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಡ್ರಾಮಿ ತಾಲೂಕ ಸಂಚಾಲಕರಾಗಿ ಶಶಿಕುಮಾರ ಗೆಜ್ಜಿ, (ದಲಿತ ಹಿಂದುಳಿದ ಅಲ್ಪಸಂಖ್ಯಾತರು) ತಾಲೂಕ ಸಂ. ಸಂಚಾಲಕರಾಗಿ ನಿಂಗಣ್ಣ ಕಾಕ್ಕಂಡಗಿ, (ಆಂತರಿಕ ಶಿಸ್ತು) ತಾಲೂಕ ಸಂ. ಸಂಚಾಲಕರಾಗಿ ಪರಸು ಹೊಸಮನಿ, (ಪೌರ ಚರ್ಮ ಬಾಲಕಾರ್ಮಿಕ) ತಾಲೂಕ ಸಂ. ಸಂಚಾಲಕರಾಗಿ ರಾಮಣ್ಣ ಹೊಸಮನಿ, (ಸಾಂಸ್ಕೃತಿಕ) ತಾಲೂಕ ಸಂ. ಸಂಚಾಲಕರಾಗಿ ನಿಂಗಣ್ಣ ಎಂ. ಮ್ಯಾಗೇರಿ, ತಾಲೂಕ ಖಜಾಂಚಿಯಾಗಿ ಮಹೇಶ ಹೊಸಮನಿ, ತಾಲೂಕ ಸಂ. ಸಂಚಾಲಕರಾಗಿ ಪರಶು ಹೊಸಮನಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಡ್ರಾಮಿ ಹೊಬಳಿ ಶಾಖೆ ಸಂಚಾಲಕರಾಗಿ ಮಲ್ಲು ಹಂಚನಾಳ, ಯಡ್ರಾಮಿ ಹೊಬಳಿ ಶಾಖೆ ಸಂ. ಸಂಚಾಲಕರಾಗಿ ರವಿಕುಮಾರ, ಯಡ್ರಾಮಿ ಹೊಬಳಿ ಶಾಖೆ ಸಂ. ಸಂಚಾಲಕರಾಗಿ ಸಿದ್ದು ಬರ್ಮಾ, ಯಡ್ರಾಮಿ ಹೊಬಳಿ ಶಾಖೆ ಸಂ. ಸಂಚಾಲಕರಾಗಿ ಮಹೇಶ ಬಾಲೂರ, ಯಡ್ರಾಮಿ ಹೋಬಳಿ ಶಾಖೆ, ಖಜಾಂಚಿಯಾಗಿ ಕೃಷ್ಣ ಹೆಚ್. ತಳವಾರ ಇವರನ್ನು ನೇಮಕ ಮಾಡಲಾಯಿತು. ಎಂದು ಜಿಲ್ಲಾ ಸಂಚಾಲಕರಾದ ಭೀಮಶಾ ಖನ್ನಾ ಅವರು ತಿಳಿಸಿದ್ದಾರೆ.
ಈ ಸಭೆಯಲ್ಲಿ ದ.ವಿ.ಓ ಜಿಲ್ಲಾ ಸಂಚಾಲಕ ಮಡಿವಾಳಪ್ಪ ಕಟ್ಟಿಮನಿ, ನಗರ ಸಂ.ಸಂಚಾಲಕ ಅರುಣಕುಮಾರ ಇನಾಂದಾರ, ಜಿಲ್ಲಾ ಸಂ ಸಂಚಾಲಕ ದವಲಪ್ಪ ಮದನ, ಭಾಗಣ್ಣ ಕಟ್ಟಿ, ಮಡಿವಾಳಪ್ಪ ಮಲ್ಲಾಬಾದ, ಶಿವಪುತ್ರ ಹಾಗರಗಿ, ಶರಣು ಪೂಜಾರಿ, ಶಿವಕುಮಾರ ಅಜಾದಪೂರ, ಭರತ ಧನ್ನಾ, ಬಸವರಾಜ ಮಯೂರ್ ಮತ್ತು ವಿಜಯಪೂರ ಜಿಲ್ಲಾ ಸಂ. ಸಂಚಾಲಕರಾದ ಶರಣು ಶಿಂಧೆ, ಲಕ್ಕಪ್ಪ ಬಡಿಗೇರ, ಕಲಬುರಗಿ ನಗರ ಸಂಚಾಲಕರಾದ ಅಭಿಷೇಕ ಉಪಾಧ್ಯಯ, ಗೌತಮ ಉಪಾಧ್ಯಯ, ಅರುಣಕುಮಾರ ಇನಾಂದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.