ಕ್ರೀಡೆ, ದೇಹದ ಭಾರ, ಮನಸ್ಸಿನ ಒತ್ತಡ ಕಡಿಮೆಗೊಳಿಸುತ್ತದೆ : ಇಒ ಶಂಕರ ರಾಠೋಡ
ಕ್ರೀಡೆ, ದೇಹದ ಭಾರ, ಮನಸ್ಸಿನ ಒತ್ತಡ ಕಡಿಮೆಗೊಳಿಸುತ್ತದೆ : ಇಒ ಶಂಕರ ರಾಠೋಡ
ಆರ್ ಡಿ ಪಿ ಆರ್ ಇಲಾಖೆ ನೌಕರಸ್ಥರು ಕ್ರೀಡೆ ಅಳವಡಿಸಿಕೊಂಡು ಒತ್ತಡ ಮರೆಯಬೇಕು
ಚಿಂಚೋಳಿ : ಆರ್ ಡಿ ಪಿ ಆರ್ ಇಲಾಖೆ ಕರ್ನಾಟಕದಲ್ಲಿ ಕ್ರೀಡಾಕೂಟ ನಡೆಸಿರುವುದು ಎಲ್ಲೂ ಉಲ್ಲೇಖವಿಲ್ಲ. ಚಿಂಚೋಳಿಯಲ್ಲಿ ಆರ್ ಡಿ ಪಿ ಆರ್ ಇಲಾಖೆ ವತಿಯಿಂದ ಇಲಾಖೆಯ ನೌಕರಸ್ಥರಿಗೆ ಒಂದು ದಿನದ ಕ್ರೀಡಾಕೂಟ ಆಯೋಜಿಸೋಣ ಎಂಬ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ಹೇಳಿದರು.
ಇಲ್ಲಿನ ಪೋಲಕಪಳ್ಳಿಯ ತಾಲೂಕ ಕ್ರೀಡಾಂಗಣದಲ್ಲಿ ಆರ್ ಡಿ ಪಿ ಆರ್ ಇಲಾಖೆಯ ನೌಕರಸ್ಥರಿಗೆ ಆಯೋಜಿಸಲಾದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಲಾಖೆಯ ಪಿಡಿಓ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಪಂಪ್ ಆಪರೇಟರ್ ಗಳಿಗೆ ಆಟದ ಜೊತೆಗೆ ಕೆಲಸ, ಕೆಲಸದ ಜೊತೆಗೆ ಆಟವು ಇರಬೇಕು. ಆಟದಿಂದ ದೇಹದ ಭಾರ ಮತ್ತು ಮನಸ್ಸಿನ ಒತ್ತಡ ಕಡಿಮೆ ಗೊಳಿಸುತ್ತದೆ. ಪ್ರತಿಯೊಬ್ಬರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕೆವಾಗಿ ಗಟ್ಟಿಗೊಳಿಸುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯನಿಗೆ ರಕ್ತದ ಒತ್ತಡ, ಮಧುಮೇಹಗಳಂತಹ ರೋಗಗಳು ದೇಹದೊಳಗೆ ಪ್ರವೇಶಿಸಲು ತಡೆಯುತ್ತವೆ. ಹೀಗಾಗಿ ಆರ್ ಡಿ. ಪಿ ಆರ್ ಇಲಾಖೆಯ ಜವಾಬ್ದಾರಿತನದ ಕೆಲಸವನ್ನು ನೌಕರಸ್ಥರು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಮುನ್ನಡೆಯಲು ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರಸ್ಥ ಸಿಬ್ಬಂದಿಗಳು ಎಲ್ಲಾ ಆಟದ ಕ್ರೀಡೆಯಲ್ಲಿ ಭಾಗವಹಿಸಿ ಒತ್ತಡವನ್ನು ಮರೆತು ಲವಲವಿಕೆಯಿಂದ ಇರಲು ಕ್ರೀಡೆ ಅಳವಡಿಸಿಕೊಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಇಓ ವೀ. ಲಕ್ಷ್ಮಯ್ಯ, ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಎಇಇ ಪ್ರವೀಣಕುಮಾರ, ನರೇಗಾ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಜಯಪ್ಪ ಚಾಪೆಲ್, ಆರ್ ಡಿ ಪಿ ಆರ್ ನ ವಿವಿಧ ಸಂಘದ ಪದಾಧಿಕಾರಿಗಳು, ಗ್ರಾಮ ಪಂ ಪಿಡಿಓ, ಕಾರ್ಯದರ್ಶಿಗಳು, ಕರ ವಸೂಲಿಗಾರರು, ಪಂಪ್ ಆಪರೇಟರ್ ಗಳು ಉಪಸ್ಥಿತರಿದ್ದರು.