ರಾಷ್ಟ್ರೀಯ ಬಾಯಿ ನೈರ್ಮಲ್ಯ ದಿನಾಚರಣೆ

ರಾಷ್ಟೀಯ ಬಾಯಿ ನೈರ್ಮಲ್ಯ ದಿನಾಚರಣೆ
ಕಲಬುರಗಿ: ಆರೋಗ್ಯ್ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಾಯಿ ಆರೋಗ್ಯ್ ಕಾರ್ಯಕ್ರಮ ಹಾಗೂ ಎಸ್ ನಿಜಿಲಿಂಗಪ್ಪ ದಂತ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಬಾಯಿ ನೈರ್ಮಲ್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಅರ್ಬನ್ ಆಶಾ ಕಾರ್ಯಕರ್ತೆಯರಿಗೆ ಎಚ್ ಕೆ ಇ ಎಸ್ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಾಯಿ ಆರೋಗ್ಯ ಅರಿವು, ತಪಾಸಣಾ ಮತ್ತು ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ ಶರಣಬಸಪ್ಪಾ ಖ್ಯಾತನಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ ಅರವಿಂದ್ ಮೊಲ್ದಿ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದರು,
ಮುಖ್ಯ ಅತಿಥಿಗಳಾಗಿ ಡಾ ಸಂಧ್ಯಾ ಕಾನೇಕರ್,ಡಾ ಸುರೂಪ ಬೆಳಗಲಿ, ಜಿಲ್ಲಾ ಆಶಾ ಸಂಯೋಜಕರು ಬಸ್ಸಮ್ಮ ಭಾಗವಹಿಸಿದರು,
ಇಲಾಖೆಯ ಹೆಚ್ ಓ ಡಿ ಗಳಾದ ಡಾ ಜಯಶ್ರೀ ಮುದ್ದಾ, ಡಾ ವೀಣಾ ಪಾಟೀಲ್, ಡಾ ಬಿಂದು ಪಾಟೀಲ್, ಡಾ ಲಷ್ಮಿ, ಹಾಗೂ ದಂತ ಮಹಾವಿದ್ಯಾಲಯದ ಪ್ರಚಾರ್ಯಕರು ಇದ್ದರು. ಆಶಾ ಕಾರ್ಯಕರ್ತರ ಬಾಯಿ ಆರೋಗ್ಯ ತಪಾಸನೆ ಮತ್ತು ಚಿಕಿತ್ಸೆ ಮಾಡಲಾಯತು.