ಕಲಬುರಗಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕಿನ್ ಅಧ್ಯಕ್ಷರಾಗಿ ಸಿತಿಕಂಠ ತಡಕಲ್ ಮಹಾಗಾಂವ, ಉಪಾಧ್ಯಕ್ಷರಾಗಿ ಸುಭಾಷ ಬಬಲಾದ ಅವಿರೋಧವಾಗಿ ಆಯ್ಕೆಯಾದರು. 

ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕಿನ್ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಎಲ್ಲರ ಒಪ್ಪುಗೆ ಮೇರೆಗೆ ಮುಂದಿನ ಐದು ವರ್ಷಗಳ ಅವಧಿಗೆ ಸಾಲಗಾರ ಮತಕ್ಷೇತ್ರಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು. ಸಾಲಗಾರರಲ್ಲದ ಕಲಬುರಗಿ ಮತಕ್ಷೇತ್ರಕ್ಕೆ ಅಣವೀರಪ್ಪ ಕಾಳಗಿ ಆಯ್ಕೆಯಾಗಿದ್ದಾರೆ. 

ಸದಸ್ಯರಾಗಿ ಮುರಗಯ್ಯ ಹರಸೂರ, ವೀರಭದ್ರಪ್ಪ ಶ್ರೀನಿವಾಸ ಸರಡಗಿ, ಶಿವಶರಣಪ್ಪ ನಾಗೂರ, ಸುರೇಶ ಕಿರಣಗಿ, ತುಳಜಪ್ಪ ಅವರಾದ (ಬಿ), ನಾಗಣ್ಣ ಕಲಬುರಗಿ, ನಾಗೇಂದ್ರಪ್ಪ ಫರಹತಬಾದ, ಲಕ್ಷ್ಮಿಂಕಾಂತ ತಾಜಸುಲ್ತಾನಪೂರ, ಸಾಯಬಣ್ಣ ಡೋಂಗರಗಾAವ, ಶಾಂತಬಾಯಿ ಕವಲಗಾ (ಬಿ), ಮಹಾದೇವಿ ಕಮಲಾಪೂರ, ನಾಗಣ್ಣ ಪಟ್ಟಣ, ಅಣವೀರಪ್ಪ ಕಲಬುರಗಿ ಆಯ್ಕೆಯಾಗಿದ್ದಾರೆ. 

ಪದಾಧಿಕಾರಿಗಳನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸೋಮಶೇಖರ ಗೋನಾಯಕ ಅವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಮ ನಾಟೀಕಾರ, ರೇವಣಸಿದ್ದಪ್ಪಾ ಭೂಸನೂರ, ಅರಣಕುಮಾರ ಪಾಟೀಲ ಗೊಬ್ಬೂರ, ಶಿವಶರಣಯ್ಯ ಮಠಪತಿ, ಮರೆಪ್ಪಾ ಪೂಜಾರಿ, ರವಿ ಪಾಟೀಲ ಸೇರಿದಂತೆ ಇತರರು ಇದ್ದರು.