ಶಿಶುಪಾಲನಾ ಕೇಂದ್ರ ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ : ನ್ಯಾಯಾಧೀಶರು ಗೌರವಾನ್ವಿತರು ಶ್ರೀಮತಿ ಸ್ಮೀತಾ ನಾಗಲಾಪುರ

ಶಿಶುಪಾಲನಾ ಕೇಂದ್ರ ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ : ನ್ಯಾಯಾಧೀಶರು ಗೌರವಾನ್ವಿತರು ಶ್ರೀಮತಿ ಸ್ಮೀತಾ ನಾಗಲಾಪುರ

ಶಿಶುಪಾಲನಾ ಕೇಂದ್ರ ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ : ನ್ಯಾಯಾಧೀಶರು ಗೌರವಾನ್ವಿತರು ಶ್ರೀಮತಿ ಸ್ಮೀತಾ ನಾಗಲಾಪುರ

ಕಲಬುರಗಿ: ಸರಕಾರದಿಂದ ಸ್ಥಾಪನೆ ಆದ ಶಿಶುಪಾಲನಾ ಕೇಂದ್ರಗಳಿಂದ ಬೇರೆ ಕಡೆ ಕೆಲಸಕ್ಕೆ. ಹೋಗುವ ಮಹಿಳೆಯರಿಗೆ ತಮ್ಮ. ಮಕ್ಕಳನ್ನು. ಬಿಟ್ಟು. ಹೋಗಲು ಅನಕೂಲವಾಗಿದೆ ಎಂದು ಮಾನ್ಯ ಜಿಲ್ಲಾ ನ್ಯಾಯಲಯ ಮತ್ತು jMFC 2 ನೇ ನ್ಯಾಯಾಧೀಶರು ಗೌರವಾನ್ವಿತರು ಶ್ರೀಮತಿ ಸ್ಮೀತಾ ನಾಗಲಾಪುರ ಹೇಳಿದರು. 

 ಗುರುವಾರದಂದು ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕಲ್ಬುರ್ಗಿ ನಗರ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಕಲಬುರ್ಗಿ 

ಜಿಲ್ಲಾ ಆಡಳಿತ ಕಛೇರಿ ಪಕ್ಕದಲ್ಲಿರುವ ವಾತ್ಸಲ್ಯ ಶಿಶು ಪಾಲನಾ ಕೇಂದ್ರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದರು

ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗಾಗಿ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಛೇರಿ, ಜಿಲ್ಲಾ ಪಂಚಾಯತ್ ಕಛೇರಿ, ಶಹಾಬಾದ್ ಮತ್ತು ಸೇಡಂ ನಾಲ್ಕು ಶಿಶು ಪಾಲನಾ ಕೇಂದ್ರಗಳನ್ನು 2022 ಜುಲೈ ನಿಂದ ಪ್ರಾರಂಭ ಗೊಂಡು ಇಲ್ಲಿವರೆಗೆ ಎಲ್ಲಾ ಪೋಷಕರ ಮೆಚ್ಚುಗೆಯನ್ನು ಪಡೆದಿರುತ್ತದೆ. 

6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಮತ್ತು ಸುರಕ್ಷತೆ ,ಪೋಷಣೆ ಹಾಗೂ ಆರೊಗ್ಯ 

 ಮತ್ತು ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಮತ್ತು 3 ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸುವುದು, ಹಾಗೂ ಕೇಂದ್ರದಲ್ಲಿಯೆ ಸಾಂಪ್ರದಾಯಿಕ ವಾಗಿ ಮಕ್ಕಳ ಹುಟ್ಟುಹಬ್ಬವನ್ನು ಆರತಿ ಬೆಳಗಿ ರುಚಿಕರ ತಿಂಡಿ ಮಾಡಿ ಆಚರಣೆ ಮಾಡುವುದು. ಒಟ್ಟಿನಲ್ಲಿ ಶಿಶು ಪಾಲನಾ ಕೇಂದ್ರವು ಮಕ್ಕಳಿಗೆ ತಾಯಿ ಮಡಿಲಿನ ಅಕ್ಕರೆ ತೋರಿಸುವ ಕೇಂದ್ರವಾಗಿದೆ ಎಂದರು 

 ಪಾಲನಾ.ಕೇಂದ್ರದಲ್ಲಿ ತಮ್ಮ 2 ವರ್ಷದ ಮಗುವನ್ನು ಬಿಡುತ್ತಿದ್ದು ಹಾಗೂ ಸ್ವತಹ ಅದೇ ಇಲಾಖೆಯ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಲ್ಬುರ್ಗಿ ನಗರ ಮಗಳನ್ನು ಕೇಂದ್ರಕ್ಕೆ ದಾಖಲು ಮಾಡಿದ್ದಾರೆ ಅವರು ಶಿಶು ಪಾಲನಾ ಕೇಂದ್ರ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದರು

ಪೋಷಕರು ಹಲವಾರು ರೀತಿಯಲ್ಲಿ ಖುಷಿ ಯಿಂದ ಕಾಣಿಕೆ ಕೊಟ್ಟಿರುತ್ತಾರೆ .    

ಪೋಷಕರಾದ ಶ್ರಿಮತಿ ಲತಾ ನಾಯಕ,ಅಲ್ಮಾಸ್ ಬಾನು, ವಿಶಾಲಾಕ್ಷಿ, ಮಹಂತಿನ ಮಠ,ಸ್ವರೂಪ ಸ್ವಾಮಿ ಇವರು ಶಿಶು ಪಾಲನಾ ಕೇಂದ್ರದಿಂದ ನಮಗೆ ಕೆಲಸ ಮಾಡಲು ತುಂಬಾ ಅನುಕೂಲವಾಗಿದೆ ಎಂದು ಖುಷಿಯಿಂದ ಹೇಳಿದ್ದರು

ಸಮಾಜ ಸೇವಕರು ಮತ್ತು ಮಕ್ಕಳ ಪ್ರೇಮಿ ಮಾಲಾ ದಣ್ಣುರ ಮತ್ತು ಮಾಲಿನಿ ಸ್ವಾಮಿ ಇವರು ಸೇಡಂ ಶಿಶು ಪಾಲನಾ ಕೇಂದ್ರಕ್ಕೆ LED TV ಯನ್ನು ಕಾಣಿಕೆ ಯಾಗಿ ನೀಡಿದರು 

ಉಪನಿರ್ದೇಶಕರು ಶ್ರಿ ರಾಜಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಲ್ಬುರ್ಗಿ ನಗರ ಶ್ರೀ ಭೀಮರಾಯ ಕಣ್ಣೂರ್ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಅಧ್ಯಕ್ಷರು ಶ್ರೀಮತಿ ಮಲ್ಲಮ್ಮ ಎ ಕಡ್ಲಾ, ಕಾರ್ಯದರ್ಶಿ ಶ್ರೀ ಮತಿ ವಿಜಯಲಕ್ಷ್ಮಿ ಚಿಟಗುಪ್ಪಾ,ಶ್ರೀಮತಿ ಶ್ರಿದೇವಿ ಕಾಲೆಬಾಗ, ನರಸಮ್ಮ ಆವುಂಟೆ, ರಿಜ್ವಾನ್, ಬಸಮ್ಮ ಸಿದ್ದಲೀಲಾ ಮತ್ತು ಸಿಬ್ಬಂದಿ ಗಳಾದ ಮೀನಾಕ್ಷಿ, ಗೌರಮ್ಮ, ಶಿಲ್ಪಾ ಉಪಸ್ಥಿತರಿದ್ದರು