ಧಾರವಾಡ: ಕಲಘಟಗಿ ಶ್ರೀ ಹನ್ನೆರಡು ಮಠದಲ್ಲಿ ಪುಣ್ಯಸ್ಮರಣೋತ್ಸವ – ಪಟ್ಟಾಧೀಕಾರ ವಾರ್ಷಿಕೋತ್ಸವ ಭಕ್ತಿಭಾವದಿಂದ ಜರುಗಿತು

ಧಾರವಾಡ: ಕಲಘಟಗಿ ಶ್ರೀ ಹನ್ನೆರಡು ಮಠದಲ್ಲಿ ಪುಣ್ಯಸ್ಮರಣೋತ್ಸವ – ಪಟ್ಟಾಧೀಕಾರ ವಾರ್ಷಿಕೋತ್ಸವ ಭಕ್ತಿಭಾವದಿಂದ ಜರುಗಿತು

ಧಾರವಾಡ: ಕಲಘಟಗಿ ಶ್ರೀ ಹನ್ನೆರಡು ಮಠದಲ್ಲಿ ಪುಣ್ಯಸ್ಮರಣೋತ್ಸವ – ಪಟ್ಟಾಧೀಕಾರ ವಾರ್ಷಿಕೋತ್ಸವ ಭಕ್ತಿಭಾವದಿಂದ ಜರುಗಿತು

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಹನ್ನೆರಡು ಮಠದಲ್ಲಿ ಮಂಗಳವಾರ ಲಿಂಗೈಕ್ಯ ಶ್ರೀ ಮಡಿವಾಳ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಅಭಿನವ ಮಡಿವಾಳ ಶಿವಾಚಾರ್ಯ ಮಹಾಸ್ವಾಮಿಗಳ 1ನೇ ವರ್ಷದ ಪಟ್ಟಾಧೀಕಾರ ವಾರ್ಷಿಕೋತ್ಸವ ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು.

ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ, ಗುಗ್ಗಳ, ಶ್ರೀಗಳಿಂದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ಜರುಗಿದವು. ನಂತರ ಮುತ್ತೈದೆಯರಿಂದ ಕುಂಭ ವೈಭವ, ಸಕಲ ವಾದ್ಯಘೋಷಗಳೊಂದಿಗೆ ಕಲಘಟಗಿ ಪಟ್ಟಣದ ರಾಜ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಂಚರಿಸಿ ಮಠಕ್ಕೆ ಆಗಮಿಸಿತು.

ಕಾರ್ಯಕ್ರಮಕ್ಕೆ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ರಂಭಾಪುರಿ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರಿಂದ ಪ್ರವಚನ ನಡೆಯಿತು. ಬಳಿಕ ಭಕ್ತರಿಗೆ ಮಹಾಧಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ವಿಭಿನ್ನ ಮಠಗಳ ಶ್ರೀಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ನಾಡಿನ ನಾನಾ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ವೈಭವ ಹೆಚ್ಚಿಸಿದರು.