ನಂದು ಕಂಪ್ಯೂಟರ್ಸ್ ತರಬೇತಿ ಕೇಂದ್ರದಿಂದ ಶೇ.95.74ರ ಶ್ರೇಷ್ಠ ಫಲಿತಾಂಶ

ನಂದು ಕಂಪ್ಯೂಟರ್ಸ್ ತರಬೇತಿ ಕೇಂದ್ರದಿಂದ ಶೇ.95.74ರ ಶ್ರೇಷ್ಠ ಫಲಿತಾಂಶ

ನಂದು ಕಂಪ್ಯೂಟರ್ಸ್ ತರಬೇತಿ ಕೇಂದ್ರದಿಂದ ಶೇ.95.74ರ ಶ್ರೇಷ್ಠ ಫಲಿತಾಂಶ

ಕಲಬುರಗಿ ದಿನಾಂಕ : 26-08-2025ಬ್ರಹ್ಮಪುರದಲ್ಲಿರುವ ಪ್ರಸಿದ್ಧ ನಂದು ಕಂಪ್ಯೂಟರ್ಸ್ ತರಬೇತಿ ಕೇಂದ್ರವು 2025ರ ಸಾಲಿನಲ್ಲಿ ಶೇ.95.74ರ ಶ್ರೇಷ್ಠ ಫಲಿತಾಂಶವನ್ನು ಗಳಿಸಿ ಕಲಬುರಗಿಯ ಕೀರ್ತಿಯನ್ನು ಹೆಚ್ಚಿಸಿದೆ. ಕೇವಲ 7 ಗಣಕಯಂತ್ರಗಳೊಂದಿಗೆ ಆರಂಭಗೊಂಡ ಈ ಕೇಂದ್ರವು, ಇಂದು ಹೆಮ್ಮರವಾಗಿ ಶಿಕ್ಷಣ  ಬೆಳೆದಿದೆ.

ಆರಂಭದಲ್ಲಿ ನಗರದ ಆಜಾದ್ ಚೌಕ್‌ನಲ್ಲಿ ಸ್ಥಾಪನೆಯಾದ ಈ ಕೇಂದ್ರವು, ಪ್ರಸ್ತುತ ಮುಖ್ಯರಸ್ತೆಯಲ್ಲಿರುವ ಗೋವಾ ಹೋಟೆಲ್ ಎದುರು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ, ಒಬ್ಬರು ಉನ್ನತ ಶ್ರೇಣಿ, 10 ಮಂದಿ ಪ್ರಥಮ ದರ್ಜೆ ಮತ್ತು 17 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಯಶಸ್ಸಿನ ಬಗ್ಗೆ ಮಾತನಾಡಿದ ಶಿಕ್ಷಣ ಪ್ರೇಮಿ, ಪೋಷಕ ಜೆ. ವಿನೋದ್ ಕುಮಾರ್ ಅವರು, “ನಂದು ಕಂಪ್ಯೂಟರ್ಸ್ ತರಬೇತಿ ಕೇಂದ್ರವು ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಸದಾ ಮುಂದಿದೆ” ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

-