ಪಿಕೆಪಿಎಸ್ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ

ಪಿಕೆಪಿಎಸ್ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ

ಪಿಕೆಪಿಎಸ್ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ 

ಕಮಲನಗರ :ತಾಲೂಕಿನ ಡೋಣಗಾಂವ( ಎಂ ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಚುನಾಯಿತ ಪ್ರತಿನಿಧಿಗಳು ಭರ್ಜರಿ ಗೆಲುವು ಸಾಧಿಸಿದೆ.

 ಇದರ ನಿಮಿತ್ಯವಾಗಿ ಪಿಕೆಪಿಎಸ್ ಪ್ರತಿನಿಧಿಗಳಿಗೂ ಹಾಗೂ ಸಮಾಜ ಸೇವಕರಿಗೂ ವಿಶೇಷವಾಗಿ ರಂಡ್ಯಾಳ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. 

ಈ ಸನ್ಮಾನವನ್ನು ರಂಡ್ಯಾಳ ಗ್ರಾಮದ ಮಾಧವರಾವ್ ಪಾಟೀಲ ನೇತೃತ್ವದಲ್ಲಿ ನಡೆಯಿತು. ಮುಂಬರುವ ದಿನಗಳಲ್ಲಿ ಬಡಜನರಿಗೆ ಪಿಕೆಪಿಎಸ್ ಸಂಘದಿಂದ ಅನೇಕ ಕೆಲಸಗಳು ಉಪಯೋಗವಾಗಬೇಕು ನಿಮ್ಮಿಂದ ನಮ್ಮ ಪರಿಸರದಲ್ಲಿರುವ ರೈತರಿಗೆ ಪ್ರಗತಿಯ ಪಥದಲ್ಲಿ ಸಾಗಲು ಮುನ್ನಗಬೇಕು ಎಂದು ಪಾಟೀಲರು ನುಡಿದರು.

ಶೇಷರಾವ ಸೂರ್ಯವಂಶಿ ಸನ್ಮಾನವನ್ನು ಸ್ವೀಕರಿಸಿ ಡೋಣಗಾಂವ (ಎಂ),ಡೋಣಗಾಂವ ವಾಡಿ,ಬೆಳಕುಣಿ,ಭಪಲಗಡ, ಸಂಗನಾಳ, ರಂಡ್ಯಾಳ, ಮತ್ತು ಕೊಟಗ್ಯಾಳ ಹಳ್ಳಿಗಳಿಂದ ಕೂಡಿದ ಸುಮಾರು 2000 ಮತಗಳನ್ನು ಹೊಂದಿದ ಪಿಕೆಪಿಎಸ್ ಸಂಘವು ಇದಾಗಿದೆ ಎಂದು ಮಾತನಾಡಿದರು.

 ಪಿಕೆಪಿಎಸ್ ನೂತನವಾಗಿ ಆಯ್ಕೆಯಾದ ಮಹಾಳಪ್ಪ ದೇಶಮುಖ, ಶೇಷರಾವ ಸೂರ್ಯವಂಶಿ, ರಾಜಕುಮಾರ್ ಮಗಧುಮೆ, ದಿಲೀಪ್ ಗಂದಗೆ , ಶ್ರೀದೇವಿ ಪಾಟೀಲ್, ನ್ಯಾನೇಶ್ವರ, ಅಶೋಕ ಡೋಬಾಳೆ, ಸಂತೋಷ್ ಸೇಗದಾರ್, ಹಾಗೂ ಪ್ರವೀಣ್ ಹೊಂಡಾಳೆ, ಇನ್ನಿತರ ಸಾಧಕರು ಸನ್ಮಾನ ಸ್ವೀಕರಿಸಿದರು.

 ಗಣೇಶ ಕ್ಯಾರೆಗಾಂವೆ ಅಮರ ಪಾಟೀಲ,ವಿಜಯಕುಮಾರ ದೇಶಮುಖ, ಪ್ರೇಮದಾಸ, ದಶರಥ ಬಿರಾದಾರ್, ಜಮೀರ್, ಸಂಗಶೆಟ್ಟಿ ನಿಡಾಬನೆ, ವಿಜಯಕುಮಾರ್ ಪಾಟೀಲ್ ,ರಾಜಕುಮಾರ್ ಪಾಟೀಲ್, ಶಂಕರ್ ಪಾಟೀಲ್, ಉಮೇಶ್ ಪಾಟೀಲ್, ಶಿವಕುಮಾರ್ ಬಿರಾದಾರ್, ಸಂಗಶೆಟ್ಟಿ ಭಂಡೆ, ಪ್ರಕಾಶ್ ನಿಡಾಬನೆ ,ಈಶ್ವರ ಭಂಡೆ, ಸುಭಾಷ್ ಪಾಟೀಲ್, ಅಮರ್ ಪಾಟೀಲ್ ,ಸಿದ್ದಯ್ಯ ಸ್ವಾಮಿ, ವೀರಭದ್ರ ನೀಡೂದೆ, ಪ್ರಹ್ಲಾದ್ ಬೀರಾದಾರ,ಶೇಷರಾವ ಭಂಡೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.