"ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ 15ನೇ ಘಟಿಕೋತ್ಸವ ಸಮಾರಂಭ”
"ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ
15ನೇ ಘಟಿಕೋತ್ಸವ ಸಮಾರಂಭ”
ಭಾರತ ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯು ತನ್ನ 15ನೇ ವಾರ್ಷಿಕ ಘಟಿಕೋತ್ಸವಕ್ಕೆ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದೆ. ನಾಲ್ಕು ದಿನಗಳ ವರೆಗೆ ನಡೆಯುವ ಸಮಾರಂಭವಾಗಿದ್ದು, ಶೈಕ್ಷಣಿಕ ಶ್ರೇಷ್ಠತೆ ಮತ್ತು ಮಹತ್ವದ ಸಂಶೋಧನಾ ಸಾಧನೆಗಳನ್ನು ಕೈಗೊಂಡ ಹಾಗೂ 2024 -25 ರಲ್ಲಿ ಪದವಿ ಪೂರ್ಣ ಗೊಳಿಸಿರುವ ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ನೀಡಿ ಗೌರವಿಸಲಿದೆ.ಈ ಘಟಿಕೋತ್ಸವದಲ್ಲಿ ರಾಷ್ಟ್ರದ ಮತ್ತು ಅಂತರ್ರಾಷ್ಟ್ರಿಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗೌರವಾನ್ವಿತ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಶ್ರೀ ಸರ್ವೇಂದ್ರನಾಥ್ ಶುಕ್ಲಾ, ಸಂಸತ್ ಸದಸ್ಯರು ಮತ್ತು ನೇಪಾಳದ ಮಾಜಿ ಸಚಿವರು, ಗೌರವಾನ್ವಿತ ಶ್ರೀ ಕಾನ್ರಾಡ್ ನಾನಾ ಕೊಜೊ ಅಸೀಡು, ಪ್ರಥಮ ಕಾರ್ಯದರ್ಶಿ, ವ್ಯಾಪಾರ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಘಾನಾ ಹೈ ಕಮಿಷನ್ ಇವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಗೌರವ ಡಾಕ್ಟರೇಟ್ (Honorary Doctorate) ಪದವಿಗೆ ಭಾಜನರಾದ ಭಾರತದ ಮಾಜಿ ಕ್ರಿಕೆಟಿಗರು ಹಾಗೂ ತರಬೇತುದಾರಾದ ಶ್ರೀ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು ಪಾಲ್ಗೊಳ್ಳಲಿದ್ದಾರೆ.ಈ ಘಟಿಕೋತ್ಸವದ ಘನ ಅಧ್ಯಕ್ಷತೆಯನ್ನು ಜೈನ್ (ಡೀಮ್ಡ್-ಟು-ಬಿ ಯುೂನಿವರ್ಸಿಟಿ) ಯ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಚೆನ್ ರಾಜ್ ರಾಯಚಂದ್ ವಹಿಸಿಕೊಳ್ಳಲಿದ್ದಾರೆ.
ಪ್ರಭಾರ ಉಪಕುಲಪತಿಗಳಾದ ಡಾ.ಜಿತೇಂದ್ರ ಕುಮಾರ್ ಮಿಶ್ರ,ಪ್ರೊ ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ್,
ಪರೀಕ್ಷಾ ನಿಯಂತ್ರಕರಾದ ಪ್ರೊ.ಎನ್. ಎಸ್. ಮಂಜುನಾಥ್, ಮೊದಲಾದವರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಘಟಿಕೋತ್ಸವವು ನವೆಂಬರ್ 19 ರಂದು ಬೆಳಿಗ್ಗೆ 9:30 ಗಂಟೆಗೆ ಉದ್ಘಾಟನೆಗೊಂಡು ನವೆಂಬರ 22 ರಂದು ಮುಕ್ತಾಯ ಗೊಳ್ಳಲಿದೆ.
ಸ್ಥಳ: ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕೋನನಕುಂಟೆ, ಬೆಂಗಳೂರು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ಸಂಪರ್ಕಿಸಿ (RSVP):
ಡಾ. ಜೀಸಸ್ ಮಿಲ್ಟನ್ ಆರ್.ಎಸ್. (ಸಹಾಯಕ ಪ್ರಾಧ್ಯಾಪಕರು) - +91 7892155436 | dr.jesus_milton@cms.ac.in
ಓಂ ಚಾವ್ಲಾ (ಪಿಆರ್) - +91 7019261802 | omroshan_chawla@cms.ac.in
ಶ್ರೀನಿಧಿ ಆರ್ (ಪಿಆರ್) - +91 9019588016 | Srinidhi_r2024@cms.ac.in
