ಕಲಬುರಗಿ| ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ

ಕಲಬುರಗಿ| ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ

ಕಲಬುರಗಿ| ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ

ಕಲಬುರಗಿ, ನ.18: ಕ್ಷಯರೋಗ ನಿರ್ಮೂಲನೆಗಾಗಿ ಜಾಗೃತಿ ಮೂಡಿಸುವ ಹಾಗೂ ಸಕ್ರಿಯ ಪತ್ತೆ–ಚಿಕಿತ್ಸಾ ಕಾರ್ಯವನ್ನು ಬಲಪಡಿಸುವ ಉದ್ದೇಶದಿಂದ "ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ"ಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವು ಮಂಗಳವಾರ ಮುಂಜಾನೆ 10:00 ಗಂಟೆಗೆ ಕಲಬುರಗಿಯ ಸೇಂಟ್ ಜಾನ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ವಿಭಾಗೀಯ ಸಹ ನಿರ್ದೇಶಕರು, ಜಂಟಿ ನಿರ್ದೇಶಕರ ಕಾರ್ಯಾಲಯ, ಕಲಬುರಗಿ ವಿಭಾಗದ ಡಾ. ಶಂಕ್ರಪ್ಪ ಮೈಲಾರಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ಉಪ ನಿರ್ದೇಶಕರು ಡಾ. ಅಂಬಾರಾಯ ರುದ್ರವಾಡಿ,ವಿಭಾಗೀಯ ಉಪ ನಿರ್ದೇಶಕರು ಡಾ. ಶರಣಬಸಪ್ಪ ಗಣಜಲಖೇಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಕ್ಷಯರೋಗ ನಿರ್ಮೂಲನೆಗಾಗಿ ಪ್ರತಿ ಹಂತದ ಆರೋಗ್ಯ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕು. ಶಂಕಿತ ಪ್ರಕರಣಗಳ ತ್ವರಿತ ಪರೀಕ್ಷೆ, ಮನೆಮನೆಗೆ ಭೇಟಿ ಹಾಗೂ ಕೋವಿಡ್ ನಂತರ ಹೆಚ್ಚಿದ ಅಪಾಯಕಾರಿ ಗುಂಪುಗಳ ಮೇಲಿನ ನಿಗಾದಲ್ಲಿ ಆಂದೋಲನ ಮಹತ್ವದ್ದು,” ಎಂದು ಹೇಳಿದರು.

ತಾಲೂಕ ಆರೋಗ್ಯಾಧಿಕಾರಿ ಮಾರುತಿ ಕಾಂಬಳೆ, ಆರೋಗ್ಯ ಕ್ಷೇತ್ರದ ಸಿಬ್ಬಂದಿ ಹಾಗೂ ಸಮುದಾಯ ಮಟ್ಟದ ಕಾರ್ಯಕರ್ತರ ಪಾತ್ರವನ್ನು ಪ್ರಶಂಸಿ, ಈ ಆಂದೋಲನದಲ್ಲಿ ಜನಸಾಮಾನ್ಯರ ಸಹಭಾಗಿತ್ವ ಅತ್ಯ ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುರೇಶ್ ದೊಡ್ಮನಿ, ಶಿವಕುಮಾರ್ ಪಾಟೀಲ್, ಅಬ್ದುಲ್ ಜಬ್ಬಾರ್, ರಾಜಕುಮಾರ ಕುರಕೋಟ, ಗುಂಡಪ್ಪ, ಸಂಗಮೇಶ ಪಾಟೀಲ ಅಂಬುಜಾ ಸೇರಿದಂತೆ ಹಲವಾರು ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ಕ್ಷಯರೋಗ ಪತ್ತೆ–ಚಿಕಿತ್ಸಾ ಚಳುವಳಿ ಒಂದು ತಿಂಗಳ ಕಾಲ ನಡೆಯಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಅಪಾಯಕಾರಿ ಗುಂಪುಗಳಿಗೆ ವಿಶೇಷ ತಪಾಸಣೆ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮನೆಮನೆಗೆ ತಲುಪುವ ಸೇವೆಗಳು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.